• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಮಧ್ಯಂತರ ಚುನಾವಣೆ: 23ರ ಹರೆಯದ ಭಾರತ ಮೂಲದ ನಬೀಲಾ ಸೈಯದ್ ಗೆಲುವು

|
Google Oneindia Kannada News

ನ್ಯೂಯಾರ್ಕ್ ನವೆಂಬರ್ 11: ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ 23 ವರ್ಷದ ಭಾರತೀಯ-ಅಮೆರಿಕನ್ ಮುಸ್ಲಿಂ ಮಹಿಳೆ ನಬೀಲಾ ಸೈಯದ್ ಯುನೈಟೆಡ್ ಸ್ಟೇಟ್ಸ್(ಯುಎಸ್‌) ಮಧ್ಯಂತರ ಚುನಾವಣೆಯಲ್ಲಿ ಗಮನಾರ್ಹ ಗೆಲುವು ಸಾಧಿಸಿದ್ದಾರೆ.

ನಬೀಲಾ ಅವರು ಯುಎಸ್‌ನಲ್ಲಿನ ಇಲಿಯಾನ್ಸ್ ರಾಜ್ಯ ಶಾಸಕಾಂಗದ 51ನೇ ಹೌಸ್ ಜೆಲ್ಲೆಯ ಚುನಾವಣೆಯಲ್ಲಿ ಗೆದ್ದ ಅತ್ಯಂತ ಕಿರಿಯ ಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು ಇತಿಹಾಸ ಬರೆದಿದ್ದಾರೆ. ಇತ್ತೀಚೆಗೆ ನಡೆದ ಯುಎಸ್ ಮಧ್ಯಂತರ ಚುನಾವಣೆಯಲ್ಲಿ 23 ವರ್ಷದ ಭಾರತೀಯ-ಅಮೆರಿಕನ್ ನಬೀಲಾ ಸೈಯದ್ ತನ್ನ ರಿಪಬ್ಲಿಕನ್ ಎದುರಾಳಿ ಕ್ರಿಸ್ ಬಾಸ್ ಅವರನ್ನು ಸೋಲಿಸಿದರು. ಇಲಿನಾಯ್ಸ್ ಸ್ಟೇಟ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ 51 ನೇ ಜಿಲ್ಲೆಗೆ ನಡೆದ ಚುನಾವಣೆಯಲ್ಲಿ ಅವರು 52.3% ಮತಗಳನ್ನು ಪಡೆದರು.

ಈ ಸಂತೋಷದ ಕ್ಷಣವನ್ನು ಟ್ವಿಟರ್‌ ಮೂಲಕ ಸೈಯದ್ ಹಂಚಿಕೊಂಡಿದ್ದಾರೆ. "ನನ್ನ ಹೆಸರು ನಬೀಲಾ ಸೈಯದ್. ನಾನು 23 ವರ್ಷದ ಮುಸ್ಲಿಂ. ಭಾರತೀಯ-ಅಮೆರಿಕನ್ ಮಹಿಳೆ. ನಾವು ರಿಪಬ್ಲಿಕನ್ ಹಿಡಿತದಲ್ಲಿರುವ ಉಪನಗರ ಜಿಲ್ಲೆಯಲ್ಲಿ ಜಯಸಾಧಿಸಿದ್ದೇನೆ. ನಾನು ಇಲಿನಾಯ್ಸ್ ಜನರಲ್ ಅಸೆಂಬ್ಲಿಯ ಕಿರಿಯ ಸದಸ್ಯಳಾಗುತ್ತೇನೆ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಫಾಲೋ-ಅಪ್ ಟ್ವೀಟ್‌ನಲ್ಲಿ ಸೈಯದ್ ಅವರು, "ಇದನ್ನು ಸಾಧ್ಯವಾಗಿಸಿದ ನಾನು ಅದ್ಭುತ ತಂಡವನ್ನು ನಾವು ಹೊಂದಿದ್ದೇವೆ. ಅವರಿಗೆ ನನ್ನ ಧನ್ಯವಾದಗಳು'' ಎಂದಿದ್ದಾರೆ. ನಬೀಲಾ ಸೈಯದ್ ಅವರು ತಮ್ಮ ಪ್ರಯಾಣದ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಸುದೀರ್ಘ ಟಿಪ್ಪಣಿಯನ್ನು ಬರೆದಿದ್ದಾರೆ. ತಮ್ಮ ಧ್ಯೇಯೋದ್ದೇಶದ ಬಗ್ಗೆ ಮಾತನಾಡುತ್ತಾ ಅವರು, "ನಾನು ರಾಜ್ಯ ಪ್ರತಿನಿಧಿಯಾಗಿ ಘೋಷಿಸಿದಾಗ ಜನರಿಗೆ ಪ್ರಾಮಾಣಿಕ ಭರವಸೆಯನ್ನು ನೀಡಿದೆ. ಉತ್ತಮ ನಾಯಕತ್ವದ ಭರವಸೆ ನೀಡಿದೆ' ಎಂದು ಸೈಯದ್ ಹೇಳಿದರು.


ನಾನು ಈ ಜಿಲ್ಲೆಯ ಪ್ರತಿಯೊಂದು ಬಾಗಿಲನ್ನು ತಟ್ಟಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಲು ನಾನು ಭಯಸುತ್ತೇನೆ. ಅವರಿಗೆ ಕೊಟ್ಟ ಭರವಸೆಯನ್ನು ಈಡೇರಿಸುತ್ತೇನೆ. ಆ ಕೆಲಸವನ್ನು ಪ್ರಾರಂಭಿಸಲು ನಾನು ಸಿದ್ಧಳಿದ್ದೇನೆ ಎಂದು ಅವರು ಹೇಳಿದ್ದಾರೆ.

ಜನರು ಸಾಮಾಜಿಕ ಮಾಧ್ಯಮದಲ್ಲಿ ಸೈಯದ್ ಅವರನ್ನು ಅಭಿನಂದಿಸಿದ್ದಾರೆ. "ಯುವಜನರು ದಿಟ್ಟ ಹೆಜ್ಜೆ ಇಡುತ್ತಿರುವ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಇದು ನಿಮ್ಮ ಸಮಯ. ಮಹತ್ತರವಾದ ಕೆಲಸಗಳನ್ನು ಮಾಡಿ" ಎಂದು ನೆಟ್ಟಿಗರು ಅಭಿನಂದನೆ ತಿಳಿಸಿದ್ದಾರೆ. ಮತ್ತೊಬ್ಬರು "ಉತ್ತಮ ಕೆಲಸ ನಬೀಲಾ ಅವರೆ. ನೀವು ಎಂದಿಗೂ ಒಬ್ಬಂಟಿಯಾಗಿರುವುದಿಲ್ಲ ಮತ್ತು ಪ್ರತಿ ಹೆಜ್ಜೆಯಲ್ಲೂ ನಾವು ನಿಮ್ಮೊಂದಿಗೆ ನಿಲ್ಲುತ್ತೇವೆ " ಎಂದು ಕಾಮೆಂಟ್ ಮಾಡಿದ್ದಾರೆ.

ನಬೀಲಾ ಸೈಯದ್ ಅವರು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನ ಮತ್ತು ವ್ಯವಹಾರ ಆಡಳಿತದಲ್ಲಿ ಪದವಿ ಪಡೆದಿದ್ದಾರೆ.

English summary
Nabila Syed, a 23-year-old Indian-American Muslim woman running for the Democratic Party, has won a remarkable victory in the United States (US) midterm elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X