ಕೆಲಸದಾಕೆಯನ್ನು ನಾಯಿಗಿಂತ ಕೆಟ್ಟದಾಗಿ ನಡೆಸಿಕೊಂಡಿದ್ದಕ್ಕೆ 87 ಲಕ್ಷ ರು ದಂಡ

Posted By:
Subscribe to Oneindia Kannada

ನ್ಯೂಯಾರ್ಕ್, ಏಪ್ರಿಲ್ 20: ಭಾರತೀಯ ಮೂಲದ ಅಮೆರಿಕದ ಮಹಿಳಾ ಸಿಇಒಗೆ ಮನೆಗೆಲಸದಾಕೆಗೆ 1,35,000 ಅಮೆರಿಕನ್ ಡಾಲರ್ ಮೊತ್ತ ಪಾವತಿಸುವಂತೆ ಸೂಚಿಸಲಾಗಿದೆ. ಭಾರತದಿಂದ ಮನೆಗೆಲಸಕ್ಕಾಗಿ ಕರೆದೊಯ್ದಿದ್ದ ಮಹಿಳೆಗೆ ಕಡಿಮೆ ಸಂಬಳ ನೀಡಿದ್ದಕ್ಕಾಗಿ ಹಾಗೂ ಆಕೆಯನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಕಾರಣಕ್ಕೆ ಅಮೆರಿಕದ ಕಾರ್ಮಿಕ ಇಲಾಖೆ ವಿಚಾರಣೆ ನಡೆಸಿ, ಕೋರ್ಟ್ಈ ರೀತಿ ಸೂಚಿಸಿದೆ.

ರೋಸ್ ಇಂಟರ್ ನ್ಯಾಷನಲ್ ಹಾಗೂ ಐಟಿ ಸ್ಟಾಫಿಂಗ್ ನ ಸಿಇಒ ಹಿಮಾಂಶು ಭಾಟಿಯಾ ಇದೀಗ ತನ್ನ ಮಾಜಿ ಮನೆಗೆಲಸದಾಕೆಗೆ ಆಗಿರುವ ತೊಂದರೆಗೆ ಪರಿಹಾರ ಕಟ್ಟಿ ಕೊಡಬೇಕಿದೆ. ಕ್ಯಾಲಿಫೋರ್ನಿಯಾದ ಕೋರ್ಟ್ ನೀಡಿರುವ ತೀರ್ಪಿನ ಅನ್ವಯ ಪರಿಹಾರ ನೀಡಬೇಕಿದೆ.[ಏರ್ ಟೆಲ್ ಗೆ 50 ಸಾವಿರ ದಂಡ, ಮಂಗಳೂರು ಗ್ರಾಹಕರ ಖುಲ್ ಜಾ ಸಿಮ್ ಸಿಮ್]

Indian-American CEO who treated dog better than domestic help ordered to pay Rs 87 lakh

ಕಳೆದ ವರ್ಷ ಆಗಸ್ಟ್ ನಲ್ಲಿ ಅಮೆರಿಕದ ಕಾರ್ಮಿಕ ಇಲಾಖೆ ದೂರು ದಾಖಲಿಸಿತ್ತು. ಅದರ ತೀರ್ಪು ಏಪ್ರಿಲ್ 11ರಂದು ಬಂದಿದೆ. 2012 ಜುಲೈನಿಂದ 2014 ಡಿಸೆಂಬರ್ ವರೆಗೆ ಭಾಟಿಯಾ ಉದ್ದೇಶಪೂರ್ವಕವಾಗಿ ಹಾಗೂ ಪದೇಪದೇ ಕಾರ್ಮಿಕ ನಿಯಮಾನುಸಾರ ನೀಡಬೇಕಾದ ಕನಿಷ್ಠ ಕೂಲಿಯನ್ನು ನೀಡಿಲ್ಲ. ಹಾಗೂ ದಾಖಲೆಗಳನ್ನು ಇಟ್ಟಿಲ್ಲ ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಸ್ಯಾನ್ ಜುಯಾನ್ ಕ್ಯಾಪಿಸ್ಟ್ರಾನೋ, ಮಿಯಾಮಿ, ಲಾಸ್ ವೇಗಾಸ್ ಮತ್ತು ಲಾಂಗ್ ಬೀಚ್ ನಲ್ಲಿ ಉಳಿದುಕೊಳ್ಳಲು ಅವಕಾಶ, ಊಟ ಹಾಗೂ ನಾನೂರು ಅಮೆರಿಕನ್ ಡಾಲರ್ ಸಂಬಳವನ್ನು ಶೀಲಾ ನಿಂಗ್ ವಾಲ್ ಎಂಬ ಮನೆಗೆಲಸದಾಕೆಗೆ ಭಾಟಿಯಾ ನೀಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.[ಪ್ರಯಾಣಕ್ಕೆ ಅವಕಾಶ ನೀಡದ ಕೆಎಸ್ ಆರ್ ಟಿಸಿಗೆ 10 ಸಾವಿರ ದಂಡ]

ಭಾಟಿಯಾ ಮನೆಯ ನಾಯಿಗಳು ಇರುವ ಜಾಗದಲ್ಲಿ ಅನಾರೋಗ್ಯಪೀಡಿತಳಾಗಿದ್ದ ಮನೆಗೆಲಸದಾಕೆಯನ್ನು ಮಲಗಲು ಹೇಳುತ್ತಿದ್ದರು. ಜತೆಗೆ ಶೀಲಾ ಪಾಸ್ ಪೋರ್ಟ್ ಅನ್ನು ಸಹ ಕಸಿದುಕೊಳ್ಳಲಾಗಿತ್ತು ಎಂದು ದೂರಲಾಗಿದೆ. ಕೂಲಿ ಹಣವಾಗಿ 54,348 ಡಾಲರ್ ಹಾಗೂ ಇತರ ಹಾನಿಗಾಗಿ 26,304 ಅಮೆರಿಕನ್ ಡಾಲರ್ ನೀಡಲು ಭಾಟಿಯಾ ಒಪ್ಪಿದ್ದಾರೆ.

ಎಲ್ಲ ವೇತನ ನೀಡಲಾಗಿದೆ, ಭಾಟಿಯಾರೊಂದಿಗೆ ಯಾವುದೇ ವ್ಯಾಜ್ಯವಿಲ್ಲ ಎಂದ ದಾಖಲೆಗೆ ಸಹಿ ಮಾಡಿಸಿಕೊಳ್ಳಲು ಯತ್ನಿಸಲಾಗಿದೆ. ಆದರೆ ಅದಕ್ಕೆ ಶೀಲಾ ಒಪ್ಪಿಲ್ಲ. "ಈ ತೀರ್ಪಿನಿಂದ ಕಾರ್ಮಿಕ ಇಲಾಖೆಯ ಬದ್ಧತೆ ಗೊತ್ತಾಗುತ್ತದೆ. ನೌಕರರನ್ನು ಸೋಷಣೆಯಿಂದ ಕಾಪಾಡುವ ಅವರ ಧ್ಯೇಯ ಮೆಚ್ಚುವಂಥದ್ದು" ಎಂದು ಇಲಾಖೆ ಸಾಲಿಸಿಟರ್ ಜಾನೆಟ್ ಹೆರಾಲ್ಡ್ ಹೇಳಿದ್ದಾರೆ.

ಇಂಥ ಪ್ರಕರಣದಲ್ಲಿ ನೌಕರರ ಮೇಲೆ ಪ್ರತೀಕಾರ ತೆಗೆದುಕೊಳ್ಳಲು ಬಿಡುವುದಿಲ್ಲ. ಅವರ ರಕ್ಷಣೆಗೆ ನಾವು ಬದ್ಧವಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An Indian-American woman CEO has been ordered to pay a hefty amount of $135,000 to her former domestic worker from India after a probe by the US Labour Department found that she underpaid the employee and mistreated her.
Please Wait while comments are loading...