ಭಾರತದ ಬಳಿ ಅಕ್ಕಿ ಬೇಡಿದ ಮಾಲ್ಡೀವ್ಸ್, ಸಹಾಯ ಮಾಡಿದ ಭಾರತ!
ಮಾಲ್ಡೀವ್ಸ್ ಪರಿಸ್ಥಿತಿ ಕೈಮೀರಿ ಹೋಗಿದ್ದು, ಕೈಯಲ್ಲಿ ಪುಡಿಗಾಸು ಇಲ್ಲದೆ ಪರದಾಡುತ್ತಿದೆ. ಅದ್ರಲ್ಲೂ ಭಾರತದ ವಿರೋಧ ಕಟ್ಟಿಕೊಂಡ ನಂತರ ಮಾಲ್ಡೀವ್ಸ್ ದೇಶದ ಪ್ರವಾಸೋದ್ಯಮ ನೆಲಕಚ್ಚಿದ್ದು, ಆಹಾರಕ್ಕೂ ಅಭಾವ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಾಲ್ಡೀವ್ಸ್‌ನ ರಾಜಕಾರಣಿಗಳು ಮತ್ತೆ ಭಾರತದ ಕಾಲು ಹಿಡಿಯುತ್ತಿದ್ದಾರೆ!
ಭಾರತದ ರೀತಿ ಮಾಲ್ಡೀವ್ಸ್ ತನಗೆ ಬೇಕಾದ ವಸ್ತುಗಳನ್ನ ತಾನೇ ಉತ್ಪಾದನೆ ಮಾಡಿಕೊಂಡ ದೇಶ ಅಲ್ಲವೇ ಅಲ್ಲ. ಅದರ ಬದಲು ಬೇರೆ ಬೇರೆ ದೇಶಗಳ ಬಳಿ ಬೇಡುತ್ತಾ, ಪರಾವಲಂಬಿ ಜೀವನ ನಡೆಸುತ್ತಿರುವ ದೇಶ ಮಾಲ್ಡೀವ್ಸ್. ಇಷ್ಟಾದರೂ ಮಾಲ್ಡೀವ್ಸ್ ದೇಶದ ರಾಜಕಾರಣಿಗಳ ಅಹಂಕಾರ ಮಾತ್ರ ಕಡಿಮೆ ಆಗಿಲ್ಲ. ಹೀಗಾಗಿ ಭಾರತದ ಜೊತೆಗೆ ಕಿರಿಕ್ ಮಾಡಿಕೊಂಡಿದ್ದಾರೆ ಮಾಲ್ಡೀವ್ಸ್ ನೂತನ ಅಧ್ಯಕ್ಷ ಮೊಹಮ್ಮದ್ ಮೊಯಿಝ. ಅದ್ರಲ್ಲೂ ಕಳೆದ ಕೆಲ ತಿಂಗಳಿಂದ ಭಾರತ ವಿರೋಧಿಯಾಗಿ ಮಾತನಾಡುತ್ತಿದ್ದ ಮಾಲ್ಡೀವ್ಸ್ ಅಧ್ಯಕ್ಷ, ಇದೀಗ ಅನ್ನಕ್ಕಾಗಿ ನಮ್ಮ ಭಾರತದ ಬಳಿ ಬೇಡುವ ಪರಿಸ್ಥಿತಿ ಬಂದಿದೆ.

ಮಾಲ್ಡೀವ್ಸ್ ಬೇಡಿಕೆಗೆ ಭಾರತದ ಒಪ್ಪಿಗೆ?
ಹೌದು, ಮಾಲ್ಡೀವ್ಸ್ ದೇಶದಲ್ಲಿ ಭಾರತ ವಿರೋಧಿ ನಿಲುವಿರುವ ಸರ್ಕಾರ ಇದ್ದರೂ ಭಾರತದ ಕಡೆಯಿಂದ ಮಾನವೀಯ ನೆರವು ಮುಂದುವರಿದಿದೆ. ಭಾರತ ಅನುಕಂಪದ ಆಧಾರದಲ್ಲೀಗ, ಆಹಾರ ವಸ್ತುಗಳ ರಫ್ತಿಗೆ ನಿರ್ಧಾರ ಮಾಡಿದೆ ಹಲವು ಆಹಾರ ಪದಾರ್ಥಗಳನ್ನ ರಫ್ತು ಮಾಡಲು ನಿರ್ಬಂಧ ಇದ್ದರೂ, ಮಾಲ್ಡೀವ್ಸ್ ದೇಶಕ್ಕಾಗಿ ಇದರಲ್ಲಿ ವಿನಾಯಿತಿ ನೀಡಿದೆ ಭಾರತ. ಹೀಗೆ ಭಾರತ ವಿರೋಧಿ ನಿಲುವು ಹೊಂದಿದ್ದರೂ ಮಾಲ್ಡೀವ್ಸ್ ದೇಶಕ್ಕೆ ಸಹಾಯ ಮಾಡಲು ಈಗ, ಭಾರತ ಮಹತ್ವದ ನಿರ್ಧಾರ ಕೈಗೊಂಡಿದೆ. ಸಕ್ಕರೆ, ಗೋಧಿ, ಅಕ್ಕಿ, ಈರುಳ್ಳಿ ಇತ್ಯಾದಿ ಅಗತ್ಯ ವಸ್ತುಗಳನ್ನ ಮಾಲ್ಡೀವ್ಸ್ ದೇಶಕ್ಕೆ ಸೀಮಿತ ಪ್ರಮಾಣದಲ್ಲಿ ರಫ್ತು ಮಾಡಲು, ಭಾರತ ನಿರ್ಧಾರ ಕೈಗೊಂಡಿದೆ.
ಯಾವೆಲ್ಲಾ ವಸ್ತುಗಳು ರಫ್ತು ಆಗುತ್ತೆ?
ಭಾರತೀಯ ರಾಯಭಾರ ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಈ ಮಾಹಿತಿ ಹೊರಬಿದ್ದಿದೆ. ಹೀಗೆ ಗೋಧಿ, ಅಕ್ಕಿ, ಈರುಳ್ಳಿ ಇತ್ಯಾದಿ ಅಗತ್ಯ ವಸ್ತುಗಳ ರಫ್ತು ಕೋಟಾ ಶೇ. 5ರಷ್ಟು ಏರಿಕೆಯೂ ಆಗುತ್ತಿದ್ದು, ಭಾರತ ವಿರೋಧಿ ಆಗಿದ್ದರೂ ಮಾಲ್ಡೀವ್ಸ್‌ಗೆ ಭಾರತದ ಕಡೆಯಿಂದ ಸಹಾಯವು ಸಿಗ್ತಿದೆ. ಮಾಲ್ಡೀವ್ಸ್ ಸರ್ಕಾರದ ಮನವಿ ಮೇರೆಗೆ, 2024-25ರ ವರ್ಷದಲ್ಲಿ ನಿರ್ದಿಷ್ಟ ಪ್ರಮಾಣದ ಅಗತ್ಯ ವಸ್ತು ರಫ್ತಿಗೆ ಅನುಮತಿ ನೀಡಲಾಗಿದೆ. ಈ ವಸ್ತುಗಳ ಕೋಟಾ ಹೆಚ್ಚಿಸಲಾಗಿದ್ದು, 1981 ರಲ್ಲಿ ಚಾಲನೆಗೆ ಬಂದ ದ್ವಿಪಕ್ಷೀಯ ವ್ಯವಸ್ಥೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
India approves highest-ever export quotas for essential commodities to Maldives in landmark bilateral agreement: Indian High Commission pic.twitter.com/xVGutfl9U6
— Press Trust of India (@PTI_News) April 5, 2024
ಕಟ್ಟಡ ನಿರ್ಮಾಣ ವಸ್ತುಗಳೂ ರಫ್ತು
ಮೊಟ್ಟೆ, ಆಲೂಗಡ್ಡೆ, ಈರುಳ್ಳಿ, ಸಕ್ಕರೆ, ಅಕ್ಕಿ, ಗೋಧಿ ಹಿಟ್ಟು, ಬೇಳೆ ಕಾಳು ಸೇರಿ ಇತ್ಯಾದಿ ಅಗತ್ಯ ಆಹಾರ ವಸ್ತುಗಳ ರಫ್ತು ವಿಚಾರದಲ್ಲಿ ಶೇಕಡಾ 5ರಷ್ಟು ರಫ್ತು ಕೋಟಾ ಹೆಚ್ಚಿಸಲಾಗಿದೆ. ಆಹಾರ ಪದಾರ್ಥ ಮಾತ್ರವಲ್ಲ ಮಾಲ್ಡೀವ್ಸ್ ಕಟ್ಟಡ ನಿರ್ಮಾಣ ಉದ್ಯಮಕ್ಕೆ ಬೇಕಾದ ಅವಶ್ಯಕ ವಸ್ತುಗಳ ಕೋಟಾ ಕೂಡ ಏರಿಕೆ ಕಂಡಿದೆ. ನದಿಯ ಮರಳು ಮತ್ತು ಕಲ್ಲುಗಳ ಕೋಟಾವನ್ನು ಶೇಕಡಾ 25ರಷ್ಟು ಹೆಚ್ಚಿಸಲು ಇದೀಗ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ, ಭಾರತದ ವಿರೋಧ ಕಟ್ಟಿಕೊಂಡಿದ್ದರೂ ಇದೀಗ ಅನಿವಾರ್ಯವಾಗಿ ಭಾರತದ ಕಾಲನ್ನೇ ಹಿಡಿಯುತ್ತಿದೆ ಮಾಲ್ಡೀವ್ಸ್.
-
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ












Click it and Unblock the Notifications