ಸೌದಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರ ರಕ್ಷಣೆಗೆ ನಿಂತ ಕೇಂದ್ರ

Subscribe to Oneindia Kannada

ನವದೆಹಲಿ, ಆಗಸ್ಟ್, 01: ಸೌದಿ ಅರೇಬಿಯಾದಲ್ಲಿ ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಸಂಕಷ್ಟ ಪಡುತ್ತಿರುವ 10 ಸಾವಿರ ಜನರನ್ನು ದೇಶಕ್ಕೆ ವಾಪಸ್ ಕರೆಸಿಕೊಳ್ಳಲಾಗುವುದು ಎಂದು ಕೇಂದ್ರ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಸೋಮವಾರ ಸುಷ್ಮಾ ಸ್ವರಾಜ್ ಈ ವಿಷಯ ತಿಳಿಸಿದ್ದಾರೆ. ಸಚಿವ ವಿಕೆ ಸಿಂಗ್ ಸೌದಿ ಅರೇಬಿಯಾಕ್ಕೆ ಮಂಗಳವಾರ ಭೇಟಿ ನೀಡಲಿದ್ದು ಭಾರತೀಯರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ.[ಅಳಲು ತೋಡಿಕೊಂಡ ಕನ್ನಡಿಗನಿಗೆ ಸೌದಿಯಲ್ಲಿ ಜೈಲುವಾಸ]

India to bring back 10,000 workers from Saudi Arabia: Sushma Swaraj

ಸೌದಿ ಅರೇಬಿಯಾದಲ್ಲಿರುವ ಯಾವ ಭಾರತೀಯರು ಹಸಿವಿನಿಂದ ಸಾಯಬಾರದು. ವಿವಿಧ ಕ್ಯಾಂಪ್ ಗಳಾಗಿ ಭಾರತೀಯರನ್ನು ವಿಂಗಡಿಸಿ ಆಹಾರ ವಿತರಿಸಲಾಗುವುದು ಎಂದು ತಿಳಿಸಿದರು.

ಆದರೆ ಇದು ಶಾಶ್ವತ ಪರಿಹಾರವಲ್ಲ. ಭಾರತೀಯರು ಇದ್ದ ಕಂಪನಿಗಳಿಗೆ ಬಾಗಿಲು ಹಾಕಿರುವ ಮಾಲೀಕರು ಬೇರೆಡೆಗೆ ತೆರಳಿದ್ದಾರೆ. ಭಾರತೀಯರನ್ನೆಲ್ಲ ದೇಶಕ್ಕೆ ಹಿಂದೆ ಕರೆತಂದರೆ ಮಾತ್ರ ಶಾಶ್ವತ ಪರಿಹಾರ ಸಿಕ್ಕಂತೆ ಆಗುತ್ತದೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಕುಸಿತದ ಪರಿಣಾಮ ಸೌದಿ ಅರೇಬಿಯಾದ ಮೇಲಾಗಿದ್ದು ಸಾವಿರಾರು ಜನ ಕೆಲಸ ಕಳೆದುಕೊಂಡಿದ್ದಾರೆ. ಇದರಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The government is making all efforts to bring back the 10,000 Indian workers rendered jobless in Saudi Arabia and is also providing them food in camps, External Affairs Minister Sushma Swaraj said in the Lok Sabha on Monday.She also said that Minister of State for External Affairs V.K. Singh will visit Saudi Arabia on Tuesday to start the process.
Please Wait while comments are loading...