ಕುಲಭೂಷಣ್ ತಾಯಿ ವೀಸಾ ಅರ್ಜಿ ಪರಿಶೀಲನೆ: ಪಾಕಿಸ್ತಾನ

Posted By:
Subscribe to Oneindia Kannada

ಇಸ್ಲಾಮಾಬಾದ್, ಜುಲೈ 13: ಗೂಢಚರ್ಯೆಯ ಆರೋಪದ ಮೇರೆಗೆ ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್ ಅವರ ತಾಯಿಯ ವೀಸಾ ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಂಡಿರುವುದಾಗಿ ಪಾಕಿಸ್ತಾನ ಸರ್ಕಾರ ಸ್ಪಷ್ಟಪಡಿಸಿದೆ.

ಇತ್ತೀಚೆಗೆ, ಕುಲಭೂಷಣ್ ಜಾಧವ್ ತಾಯಿ ಆವಂತಿಕಾ ಜಾಧವ್ ಅವರು ಪಾಕಿಸ್ತಾನದಲ್ಲಿ ಬಂಧಿಯಾಗಿರುವ ತಮ್ಮ ಪುತ್ರನನ್ನು ಭೇಟಿ ಮಾಡುವ ಉದ್ದೇಶದಿಂದ ಪಾಕಿಸ್ತಾನದ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರು.

India’s visa request for Kulbhushan Jadhav’s mother under consideration, says Pakistan

ಏಪ್ರಿಲ್ ತಿಂಗಳಿನಲ್ಲಿ ಜಾಧವ್ ಅವರಿಗೆ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಿದ್ದಾಗಲೇ, ಆವಂತಿಕಾ ಅವರು, ವೀಸಾಕ್ಕಾಗಿ ನವದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು.

ಆದರೆ, ಆ ಅರ್ಜಿಯ ಬಗ್ಗೆ ಪಾಕಿಸ್ತಾನ ಸರ್ಕಾರ ಏನನ್ನೂ ಹೇಳಿರಲಿಲ್ಲ. ಈ ವಿಚಾರವನ್ನು ಸುಷ್ಮಾ ಸ್ವರಾಜ್, ಪಾಕಿಸ್ತಾನದ ವಿದೇಶಾಂಗ ಸಚಿವ ಸರ್ತಾಜ್ ಅವರ ಗಮನಕ್ಕೆ ಪತ್ರದ ಮುಖೇನ ತಂದಿದ್ದರು. ಹಾಗಾಗಿ, ಈಗ ಆವಂತಿಕಾ ಅವರ ವೀಸಾ ಅರ್ಜಿಯನ್ನು ಪಾಕಿಸ್ತಾನ ಪರಿಗಣಿಸುತ್ತಿರುವ ಕುರಿತಂತೆ ಪಾಕಿಸ್ತಾನ ಸರ್ಕಾರ ಹೇಳಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Islamabad said on Thursday it is reviewing New Delhi’s request for granting a visa to the mother of Kulbushan Yadav, the former Indian Navy officer sentenced to death by a Pakistani military court for alleged involvement in espionage.
Please Wait while comments are loading...