ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ: ಭಾರತಕ್ಕೆ ಶ್ರೀಲಂಕಾದಿಂದ ಬೆಂಬಲ

|
Google Oneindia Kannada News

ಕೊಲಂಬೋ, ಸೆ. 29: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯ ಸ್ಥಾನ ಪಡೆಯುವ ಭಾರತದ ಯತ್ನಕ್ಕೆ ದ್ವೀಪರಾಷ್ಟ್ರ ಶ್ರೀಲಂಕಾ ತನ್ನ ಬೆಂಬಲ ವ್ಯಕ್ತಪಡಿಸಿದೆ. ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ನಿಟ್ಟಿನಲ್ಲಿ ಭಾರತಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದ್ದರೂ ಫಲ ಸಿಕ್ಕಿರಲಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಾತ್ಕಾಲಿಕ ಸದಸ್ಯತ್ವ ಪಡೆಯಲು ಭಾರತಕ್ಕೆ ಪಾಕಿಸ್ತಾನವೂ ಈ ಹಿಂದೆ ಬೆಂಬಲ ವ್ಯಕ್ತಪಡಿಸಿದ್ದು ನೆನಪಿರಬಹುದು. ಎರಡು ವರ್ಷಗಳ ಸದಸ್ಯ ಸ್ಥಾನವನ್ನು ಭಾರತ 8ನೇ ಬಾರಿಗೆ ಪಡೆದುಕೊಂಡಿದೆ

ಅಮೆರಿಕ, ರಷ್ಯಾ, ಬ್ರಿಟನ್, ಚೀನಾ ಹಾಗೂ ಫ್ರಾನ್ಸ್ ದೇಶಗಳು ಯುಎನ್ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನವನ್ನು ಹೊಂದಿವೆ. ಬೆಲ್ಜಿಯಂ, ಐವರಿ ಕೋಸ್ಟ್, ಜರ್ಮನಿ, ಇಂಡೋನೇಷ್ಯಾ, ಕುವೈತ್, ಪೆರು, ಪೋಲೆಂಡ್, ದಕ್ಷಿಣ ಆಫ್ರಿಕಾ, ಡೊಮೊನಿಕ್ ರಿಪಬ್ಲಿಕ್, ಈಕ್ವೆಟೋರಿಯಲ್ ಗಿನಿ ತಾತ್ಕಾಲಿಕ ಸದಸ್ಯರಾಷ್ಟ್ರಗಳಾಗಿವೆ.

ವಿಶ್ವಸಂಸ್ಥೆ ಸಭೆಯಲ್ಲಿ ಭಾರತ ಮಿಂಚು; ಭಯೋತ್ಪಾದನೆ, ಪಾಕ್ ವಿರುದ್ಧದ ವಾಗ್ದಾಳಿಗಳಿವುವಿಶ್ವಸಂಸ್ಥೆ ಸಭೆಯಲ್ಲಿ ಭಾರತ ಮಿಂಚು; ಭಯೋತ್ಪಾದನೆ, ಪಾಕ್ ವಿರುದ್ಧದ ವಾಗ್ದಾಳಿಗಳಿವು

ಭಾರತ 1950-51 ರಿಂದ 2011-2012 ರ ತನಕ ಏಳು ಬಾರಿ ತಾತ್ಕಾಲಿಕ ಸದಸ್ಯತ್ವ ಪಡೆದುಕೊಂಡಿತ್ತು. 2021-22ರ ಅವಧಿಗೆ 5 ತಾತ್ಕಾಲಿಕ ಸ್ಥಾನಕ್ಕಾಗಿ ಜೂನ್ 2020ರಲ್ಲಿ ಚುನಾವಣೆ ನಡೆಯಲಿದೆ, ಒಟ್ಟು 193 ಸದಸ್ಯ ಬಲದಲ್ಲಿ 55 ಸದಸ್ಯರಾಷ್ಟ್ರಗಳ ಬೆಂಬಲವನ್ನು ಭಾರತ ಪಡೆದಿದೆ.

India’s pitch for permanent seat at UN Security Council gets Sri Lankan support

ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತೆರಳಿರುವ ಶ್ರೀಲಂಕಾದ ಅಧ್ಯಕ್ಷ ವಿಕ್ರಮಸಿಂಘೆ ಅವರು ಮಾತನಾಡಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯ ಸ್ಥಾನ ಪಡೆಯಲು ಭಾರತ ಅರ್ಹವಾಗಿದೆ ಎಂದರು.

ಜಪಾನಿನ ವಿದೇಶಾಂಗ ಸಚಿವ ಯೋಶಿಮಾಸಾ ಹಯಾಶಿ ಅವರೊಂದಿಗಿನ ಸಭೆಯ ಸಂದರ್ಭದಲ್ಲಿ, ವಿಕ್ರಮಸಿಂಘೆ ಅವರು "ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಜಪಾನ್ (ಶ್ರೀಲಂಕಾಕ್ಕೆ) ನೀಡಿದ ಬೆಂಬಲವನ್ನು ಶ್ಲಾಘಿಸಿದರು ಮತ್ತು ಯುಎನ್ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಲು ಜಪಾನ್ ಮತ್ತು ಭಾರತದ ಅಭಿಯಾನವನ್ನು ಬೆಂಬಲಿಸಲು ಸರ್ಕಾರದ ಇಚ್ಛೆಯನ್ನು ವ್ಯಕ್ತಪಡಿಸಿದರು. " ಎಂದು ಅಧ್ಯಕ್ಷ ವಿಕ್ರಮಸಿಂಘೆ ಕಚೇರಿ ಪತ್ರಿಕಾ ಪ್ರಕಟಣೆ ಹೇಳಿದೆ.

ಚೀನಾದ ಕರಾಳ ಮುಖ ಕಳಚಿಟ್ಟ ವಿಶ್ವಸಂಸ್ಥೆಯ ಅದೊಂದು ವರದಿ!ಚೀನಾದ ಕರಾಳ ಮುಖ ಕಳಚಿಟ್ಟ ವಿಶ್ವಸಂಸ್ಥೆಯ ಅದೊಂದು ವರದಿ!

ಭಾರತವು ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ ಪಡೆಯಲು ಹಲವು ವರ್ಷಗಳ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದೆ, ಯುಎನ್ ಎಸ್ ಸಿ ಕಾಯಂ ಸದಸ್ಯನಾಗಿ ಸ್ಥಾನಕ್ಕೆ ಅರ್ಹವಾಗಿದೆ, ಇದು ಪ್ರಸ್ತುತ ರೂಪದಲ್ಲಿ 2 ನೇ ಶತಮಾನದ ಭೌಗೋಳಿಕ-ರಾಜಕೀಯ ವಾಸ್ತವಗಳನ್ನು ಪ್ರತಿನಿಧಿಸುವುದಿಲ್ಲ.

ಭಾರತವು ಪ್ರಸ್ತುತ ಯುಎನ್ ಭದ್ರತಾ ಮಂಡಳಿಯ ಚುನಾಯಿತ ಖಾಯಂ ಅಲ್ಲದ ಸದಸ್ಯನಾಗಿ ತನ್ನ ಎರಡು ವರ್ಷಗಳ ಅವಧಿಯ ಎರಡನೇ ವರ್ಷದ ಅರ್ಧ ಅವಧಿಯಲ್ಲಿದೆ. ಕೌನ್ಸಿಲ್‌ನಲ್ಲಿ ಭಾರತದ ಅಧಿಕಾರಾವಧಿಯು ಡಿಸೆಂಬರ್‌ನಲ್ಲಿ ಕೊನೆಗೊಳ್ಳಲಿದೆ.

ವಿದೇಶಾಂಗ ಸಚಿವ ಎಸ್ ಜೈಶಂಕರ್, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77 ನೇ ಅಧಿವೇಶನದ ಸಾಮಾನ್ಯ ಚರ್ಚೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತವು ಹೆಚ್ಚಿನ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಸಿದ್ಧವಾಗಿದೆ ಎಂದು ಒತ್ತಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

India’s pitch for permanent seat at UN Security Council gets Sri Lankan support

ಭದ್ರತಾ ಮಂಡಳಿಯ ಸುಧಾರಣೆಗಳೊಂದಿಗೆ ಸುಧಾರಿತ ಬಹುಪಕ್ಷೀಯತೆ ಕುರಿತಂತೆ ಯುಎನ್ ಸದಸ್ಯರಲ್ಲಿ ಗಣನೀಯ ಬೆಂಬಲವನ್ನು ಹೊಂದಿದೆ ಎಂದು ಅವರು ಹೇಳಿದರು.

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ಮೊದಲ ಬಾರಿಗೆ ಭಾರತದ ಮತ!ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ಮೊದಲ ಬಾರಿಗೆ ಭಾರತದ ಮತ!

ಜಾಗತಿಕ ಅಪಾಯವೆಂದು ಭಯೋತ್ಪಾದಕರನ್ನು ಪರಿಗಣಿಸುವ ಪ್ರಸ್ತಾವಕ್ಕೆ ವಿಶ್ವಸಂಸ್ಥೆಯಲ್ಲಿ ಚೀನಾ ಮತ್ತೊಮ್ಮೆ ಅಡ್ಡಗಾಲು ಹಾಕಿರುವುದಕ್ಕೆ ಜೈಶಂಕರ್ ಕಿಡಿಕಾರಿದರು. "ವಿಶ್ವಸಂಸ್ಥೆ ಭದ್ರತಾ ಮಂಡಳಿ 1267 ಸ್ಯಾಂಕ್ಷನ್ಸ್ ಯೋಜನೆಯನ್ನು ರಾಜಕೀಯಗೊಳಿಸುತ್ತಿರುವವರು ಕೆಲವೊಮ್ಮೆ ಭಯೋತ್ಪಾದಕರನ್ನು ರಕ್ಷಿಸುವ ಮಟ್ಟಕ್ಕೆ ಹೋಗುತ್ತಾರೆ. ಇದರಿಂದ ತಮ್ಮ ಹಳ್ಳ ತಾವೇ ತೋಡಿಕೊಳ್ಳುತ್ತಾರೆ. ಅವರ ಹಿತಾಸಕ್ತಿಗಾಗಲೀ ಅಥವಾ ಅವರ ಘನತೆಗಾಗಲೀ ಒಳಿತಂತೂ ಆಗುವುದಿಲ್ಲ," ಎಂದು ಎಸ್ ಜೈಶಂಕರ್ ಹೇಳಿದರು.

ಏತನ್ಮಧ್ಯೆ, ಅಧ್ಯಕ್ಷ ವಿಕ್ರಮಸಿಂಘೆ ಅವರ ಕಚೇರಿ ಶ್ರೀಲಂಕಾದ ಸಾಲದ ಪುನರ್ ರಚನೆಯಲ್ಲಿ ಜಪಾನ್ ಪ್ರಮುಖ ಪಾತ್ರವನ್ನು ವಹಿಸಲು ಇಚ್ಛೆಯನ್ನು ವ್ಯಕ್ತಪಡಿಸಿದೆ, ಇದು ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಬೇಲ್ಔಟ್ ಸೌಲಭ್ಯವನ್ನು ಪಡೆಯಲು ದ್ವೀಪ ರಾಷ್ಟ್ರದ ಪ್ರಯತ್ನಕ್ಕೆ ಪೂರಕವಾಗಿದೆ.

English summary
Sri Lankan President Ranil Wickremesinghe said on Tuesday that his country will support India and Japan's aspirations for permanent membership in the United Nations Security Council.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X