ಉಕ್ರೇನ್ ಮೇಲಿನ ರಷ್ಯಾ ದಾಳಿಗೆ ನಾರ್ಡಿಕ್ ರಾಷ್ಟ್ರಗಳ ಖಂಡನೆ
ಕೂಪನ್ ಹ್ಯಾಗನ್, ಮೇ 4: ರಷ್ಯಾದ ಪಡೆಗಳು ಉಕ್ರೇನ್ ವಿರುದ್ಧ "ಕಾನೂನುಬಾಹಿರ ಮತ್ತು ಅಪ್ರಚೋದಿತ ಆಕ್ರಮಣ"ವನ್ನು ನಾರ್ಡಿಕ್ ಪ್ರಧಾನ ಮಂತ್ರಿಗಳು ಬಲವಾಗಿ ಖಂಡಿಸಿದ್ದಾರೆ ಎಂದು 2ನೇ ಭಾರತ-ನಾರ್ಡಿಕ್ ಶೃಂಗಸಭೆಯ ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ನಾರ್ವೆ, ಸ್ವೀಡನ್, ಐಸ್‌ಲ್ಯಾಂಡ್, ಫಿನ್‌ಲ್ಯಾಂಡ್ ಮತ್ತು ಡೆನ್ಮಾರ್ಕ್ ಪ್ರಧಾನ ಮಂತ್ರಿಗಳೊಂದಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ ಶೃಂಗಸಭೆಯ ನಂತರ ಈ ಹೇಳಿಕೆ ನೀಡಲಾಗಿದೆ.
ಈ ಶೃಂಗಸಭೆಯಲ್ಲಿ ಭಾರತ ಮತ್ತು ನಾರ್ಡಿಕ್ ದೇಶಗಳ ನಡುವಿನ ಸಹಕಾರವನ್ನು ಗಾಢವಾಗಿ ಮುಂದುವರಿಸಲು ಪ್ರಧಾನಮಂತ್ರಿಗಳು ಪ್ರತಿಜ್ಞೆ ಮಾಡಿದರು. ಉಕ್ರೇನ್‌ನಲ್ಲಿ ಸಂಘರ್ಷ, ಬಹುಪಕ್ಷೀಯ ಸಹಕಾರ, ಹಸಿರು ಪರಿವರ್ತನೆ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಮುಕ್ತ ವ್ಯಾಪಾರಕ್ಕೆ ಪ್ರಾಮುಖ್ಯತೆ: ಅಂತರ್ಗತ ಬೆಳವಣಿಗೆ ಸಾಧಿಸಲು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಮುಕ್ತ ವ್ಯಾಪಾರದ ಪ್ರಾಮುಖ್ಯತೆಯ ಬಗ್ಗೆ ನಾರ್ಡಿಕ್ ರಾಷ್ಟ್ರಗಳ ಪ್ರಧಾನಮಂತ್ರಿಗಳು ಪುನರುಚ್ಚರಿಸಿದರು.

ಉಕ್ರೇನ್ ಮೇಲಿನ ದಾಳಿಗೆ ನಾರ್ಡಿಕ್ ಖಂಡನೆ: "ರಷ್ಯನ್ ಪಡೆಗಳಿಂದ ಉಕ್ರೇನ್ ವಿರುದ್ಧ ಕಾನೂನುಬಾಹಿರ ಮತ್ತು ಅಪ್ರಚೋದಿತ ಆಕ್ರಮಣವನ್ನು ನಾರ್ಡಿಕ್ ಪ್ರಧಾನಮಂತ್ರಿಗಳು ಬಲವಾಗಿ ಖಂಡಿಸುವುದಾಗಿ ಪುನರುಚ್ಚರಿಸಿದರು" ಎಂದು ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಹೇಳಿಕೆಯ ಪ್ರಕಾರ, ಉಕ್ರೇನ್‌ನಲ್ಲಿ ನಡೆಯುತ್ತಿರುವ ಮಾನವೀಯ ಬಿಕ್ಕಟ್ಟಿನ ಬಗ್ಗೆ ಪ್ರಧಾನ ಮಂತ್ರಿಗಳು ಕಳವಳ ವ್ಯಕ್ತಪಡಿಸಿದರು. ಅವರು ಉಕ್ರೇನ್‌ನಲ್ಲಿ ನಾಗರಿಕ ಸಾವುಗಳನ್ನು ನಿಸ್ಸಂದಿಗ್ಧವಾಗಿ ಖಂಡಿಸಿದರು. ಅವರು ತಕ್ಷಣವೇ ಯುದ್ಧವನ್ನು ನಿಲ್ಲಿಸುವ ಅಗತ್ಯವಿದೆ ಎಂದು ಪುನರುಚ್ಚರಿಸಿದರು.












Click it and Unblock the Notifications