ಸಿಂಗಪುರದಲ್ಲಿರುವ 13 ಭಾರತೀಯರಿಗೆ ಝೀಕಾ ವೈರಾಣು ಸೋಂಕು

Posted By:
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 01: ಸಿಂಗಪುರದಲ್ಲಿರುವ 13 ಭಾರತೀಯರಿಗೆ ಝೀಕಾ ವೈರಾಣು ಸೋಂಕು ತಗುಲಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ದೃಢಪಡಿಸಿದೆ.

ಸೊಳ್ಳೆ ಕಡಿತದಿಂಡ ಉಂಟಾಗುವ ಈ ಕಾಯಿಲೆಗೆ ಸರಿಯಾದ ಔಷಧ, ಚಿಕಿತ್ಸಾ ವಿಧಾನ ಇನ್ನೂ ಕಂಡು ಬಂದಿಲ್ಲ. ರೋಗಿಯನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ. ಸಿಂಗಪುರದಲ್ಲಿರುವ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರಿಗೆ ಝೀಕಾ ಭೀತಿ ಎದುರಾಗಿತ್ತು.[ಝಿಕಾ ವೈರಸ್‌ಗೆ ಮದ್ದು ನಿಮ್ಮ ಮನೆಯ ಕೈದೋಟದಲ್ಲೇ ಇದೆ]

India confirms 13 of its nationals test positive for Zika in Singapore

ಈ ಬಗ್ಗೆ ಪರೀಕ್ಷೆ ನಡೆಸಿದ ನಂತರ ಸಿಂಗಪುರದಲ್ಲಿರುವ ಭಾರತೀಯ ಮೂಲದ 13 ಜನರಿಗೆ ಝೀಕಾ ವೈರಾಣು ಸೋಂಕು ಇರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ವಕ್ತಾರ ವಿಕಾಸ್ ಸ್ವರೂಪ್ ಅವರು ಹೇಳಿದ್ದಾರೆ. ಒಟ್ಟಾರೆ ಸಿಂಗಪುರದಲ್ಲಿ 100ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.[ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's Foreign Ministry confirmed on Thursday that 13 of its nationals had tested positive for the Zika virus in Singapore, after an outbreak of the mosquito-borne disease that at first affected three dozen workers on a construction site.
Please Wait while comments are loading...