ಅಮೆರಿಕಾದ ಸುಪ್ರೀಂಕೋರ್ಟಿಗೆ ಭಾರತೀಯ ಮೂಲದ ಜಡ್ಜ್?

Posted By:
Subscribe to Oneindia Kannada

ವಾಷಿಂಗ್ಟನ್,ಫೆಬ್ರವರಿ,15: ಭಾರತೀಯ ಮೂಲದ ಅಮೆರಿಕಾ ನಿವಾಸಿ ಶ್ರೀನಿವಾಸನ್ ಅವರನ್ನು ಅಮೆರಿಕಾದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಆಗುವ ಸಾಧ್ಯತೆಗಳಿವೆ. ಅಕಸ್ಮಾತ್ ಇವರು ಈ ಹುದ್ದೆಗೆ ಏರಿದಲ್ಲಿ ಅಮೆರಿಕಾದ ಸುಪ್ರೀಂಕೋರ್ಟ್ ನ್ಯಾಯಾಧೀಶ ಹುದ್ದೆ ಅಲಂಕರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ದೊರೆಯಲಿದೆ.

ಈ ಮೊದಲು ಅಮೆರಿಕಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಆಂಟೋನಿಯನ್ ಸ್ಕೇಲಿಯಾ ಎಂಬುವರು ಕಾರ್ಯನಿರ್ವಹಿಸಿದ್ದರು. ಇವರು ನಿಗೂಢವಾಗಿ ಸಾವನ್ನಪ್ಪಿದ್ದು, ಆಂಟೋನಿಯನ್ ಸ್ಥಾನಕ್ಕೆ ಅರ್ಹ ವ್ಯಕ್ತಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅದರಲ್ಲಿ ಶ್ರೀನಿವಾಸನ್ ಅವರ ಹೆಸರು ಮುಂಚೂಣಿಯಲ್ಲಿದೆ.[ಅಮೆರಿಕಾ ಪ್ರಶಸ್ತಿ ಪಡೆದ ಬೆಂಗಳೂರು ಮೂಲದ ಶಿಕ್ಷಕಿ]

India-born Srinivasan may become judge in US Supreme Court

ಶ್ರೀನಿವಾಸನ್ ಯಾರು?

ಶ್ರೀನಿವಾಸನ್ ಅವರು ಮೂಲತಃ ಚಂಡೀಗಡದವರು. ಇವರ ತಂದೆ ಕನ್ಸಾನ್ ವಿಶ್ವವಿದ್ಯಾಲಯದಲ್ಲಿ ಗಣಿತ ಪ್ರಾಧ್ಯಾಪಕರಾಗಿದ್ದಾರೆ. ಇವರ ತಾಯಿ ಕಾನ್ಸಸ್ ಸಿಟಿ ಆರ್ಟ್ ನಲ್ಲಿ ಶಿಕ್ಷಕಿಯಾಗಿದ್ದಾರೆ.[ಅಮೆರಿಕದಲ್ಲಿ ಶತಮಾನದ ದಾಖಲೆ ಬರೆದ ಹಿಮಮಾರುತ]

ಶ್ರೀನಿವಾಸನ್ ಅವರು ಸ್ಟಾನ್ ಪೋರ್ಡ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ದಾರೆ. ಅಲ್ಲದೇ ಯುಎಸ್ ಕೋರ್ಟ್ ಆಫ್ ಅಪೀಲ್ ಫಾರ್ ಡಿಸ್ಟ್ರೀಕ್ಟ್ ಆಫ್ ಕೊಲಂಬಿಯಾದ ಸದಸ್ಯರಾಗಿದ್ದಾರೆ ಹಾಗೂ ಒಬಾಮ ಅವರ ಮುಖ್ಯ ಉಪಸಾಲಿಸಿಟರ್ ಜನರಲ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಡೆಮಾಕ್ರೆಟಿಕ್ ಹಾಗೂ ರಿಪಬ್ಲಿಕನ್ ಪಕ್ಷಗಳ ಬೆಂಬಲದ ಮೇರೆಗೆ ನೇಮಕದ ವಿಚಾರ ಅಂತಿಮಗೊಳ್ಳಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India-born Srinivasan may become judge in US Supreme Court. His native is Chandigarh, India.
Please Wait while comments are loading...