Donald Trump: ಭಾರತದ ಜೊತೆ ಅಮೆರಿಕ ಮಾತುಕತೆ, ತೆರಿಗೆ ಪ್ರಮಾಣ ಶೇ. 15 ಕಡಿತ?
ಭಾರತದ ಜೊತೆ ತೆರಿಗೆ ಯುದ್ಧ ಮಾಡುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ದಾರಿಗೆ ಬಂದಂತೆ ಕಾಣುತ್ತಿದೆ. ಜಾಗತಿಕವಾಗಿ ಅನೇಕ ದೇಶಗಳ ಜೊತೆ ಕಿರಿಕ್ ಮಾಡಿದ್ದ ಡೊನಾಲ್ಡ್ ಟ್ರಂಪ್ ಭಾರತದ ಜೊತೆಗೂ ಟ್ಯಾಕ್ಸ್ ವಾರ್ ಶುರು ಮಾಡುವ ಮುನ್ಸೂಚನೆ ನೀಡಿದ್ದರು. ಅಲ್ಲದೆ ಭಾರತ ರಫ್ತು ಮಾಡುವ ವಸ್ತುಗಳ ಮೇಲೆ ಭಾರಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ಹಾಕುವ ಮೂಲಕ ತಮ್ಮದೇ ದೇಶದಲ್ಲಿ ಸಂಚಲನ ಸೃಷ್ಟಿ ಮಾಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ದಿಢೀರ್, ಭಾರತದ ಜೊತೆ ಅಮೆರಿಕ ಮಾತುಕತೆ ಆರಂಭಿಸಿದ್ದು ತೆರಿಗೆ ಪ್ರಮಾಣ ಶೇ. 15 ಕಡಿತವಾಗುತ್ತಾ?
ರಷ್ಯಾ ಜೊತೆಗೆ ಭಾರತ ಶಸ್ತ್ರಾಸ್ತ್ರ ಖರೀದಿ ಸೇರಿದಂತೆ ಹಲವು ಒಪ್ಪಂದಗಳನ್ನು ಮಾಡಿಕೊಂಡು, ಲಕ್ಷಾಂತರ ಕೋಟಿ ರೂಪಾಯಿ ವ್ಯಾಪಾರ & ವ್ಯವಹಾರ ನಡೆಸುತ್ತಿರುವುದು ಅಮೆರಿಕದ ಅಧ್ಯಕ್ಷ ಟ್ರಂಪ್ ಕಣ್ಣು ಕೆಂಪಾಗುವಂತೆ ಮಾಡಿತ್ತು. ಇದೇ ಕಾರಣಕ್ಕೆ ತೆರಿಗೆ ಒಪ್ಪಂದ ಕೂಡ ಬಾಕಿ ಇತ್ತು. ಅಂದಹಾಗೆ ಭಾರತ & ಅಮೆರಿಕ ಕೊನೆಗೂ ಹಲವು ವರ್ಷಗಳಿಂದ ಬಾಕಿ ಇದ್ದ ವ್ಯಾಪಾರ ಒಪ್ಪಂದಕ್ಕೆ ಅಂತಿಮ ಮುದ್ರೆ ಒತ್ತಲು ಸಜ್ಜಾಗಿವೆ. ಈ ಒಪ್ಪಂದದ ಮೂಲಕ, ಅಮೆರಿಕ ಭಾರತದ ಮೂಲಕ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಸುಂಕ ಕಡಿತ ಮಾಡಲು ನಿರ್ಧರಿಸಿದಂತೆ ಕಾಣುತ್ತಿದೆ.

ಪ್ರಧಾನಿ ಮೋದಿ ಜೊತೆ ಟ್ರಂಪ್ ಚರ್ಚೆ
ಯಾಕಂದ್ರೆ ಕೆಲವು ತಿಂಗಳ ಹಿಂದೆ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ರೊಚ್ಚಿಗೆದ್ದು, ರಷ್ಯಾ ತೈಲ ಖರೀದಿ ಮಾಡದಂತೆ ಎಚ್ಚರಿಕೆ ನೀಡಿದ್ದರು. ಇದೇ ವಿಚಾರಕ್ಕೆ ಅಮೆರಿಕ & ಭಾರತದ ಮಧ್ಯೆ ದೊಡ್ಡ ಜಗಳ ಆಗಿ ಹೋಗಿತ್ತು. ಕೊನೆಗೂ ಈಗ ಇಬ್ಬರ ನಡುವೆ ಮಾತುಕತೆ ಆರಂಭವಾಗಿದ್ದು, ಹಿಂದಿನ ಶೇ. 50ರಷ್ಟು ತೆರಿಗೆಯ ಪ್ರಮಾಣದಲ್ಲಿ 15 ರಿಂದ 16 ಪರ್ಸೆಂಟ್ ತೆರಿಗೆ ಕಡಿತ ಮಾಡುವ ಸಾಧ್ಯತೆ ಇದೀಗ ದಟ್ಟವಾಗಿದೆ.
ಪ್ರಧಾನಿ ಮೋದಿ ಅವರಿಂದ ಅಭಿನಂದನೆ
ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಮಾತನಾಡಿ, ಹಲವು ವಿಚಾರಗಳ ಬಗ್ಗೆ ಚರ್ಚೆಸಿದ್ದಾರೆ. ಅಲ್ಲದೆ ಮಾತುಕತೆಯ ಪ್ರಮುಖ ಭಾಗ ವ್ಯಾಪಾರವಾಗಿತ್ತು ಎಂದು ಟ್ರಂಪ್ ಹೇಳಿದ್ದು, ದೀಪಾವಳಿ ಹಬ್ಬದ ಸಮಯದಲ್ಲೇ ಈ ಮಾತುಕತೆ ನಡೆದಿರುವುದು ಭಾರಿ ಕುತೂಹಲ ಕೆರಳಿಸಿದೆ. ಮತ್ತೊಂದು ಕಡೆ ಪ್ರಧಾನಿ ಮೋದಿ ಅವರು ಕೂಡ ಟ್ರಂಪ್ ಅವರಿಗೆ ಈ ಸಮಯದಲ್ಲಿ ಧನ್ಯವಾದ ಅರ್ಪಿಸಿದ್ದಾರೆ.
ಬೆಳಕಿನ ಹಬ್ಬದ ಸಂದರ್ಭದಲ್ಲಿ ಎರಡೂ ಪ್ರಜಾಪ್ರಭುತ್ವ ರಾಷ್ಟ್ರಗಳು ವಿಶ್ವವನ್ನು ಆಶಯದಿಂದ ಬೆಳಗಿಸಲಿ ಮತ್ತು ಉಗ್ರವಾದದ ವಿರುದ್ಧ ಏಕತೆಯಿಂದ ಹೋರಾಟ ನಡೆಸಲು ಮುಂದೆ ನಿಲ್ಲಲಿ ಎಂಬ ಸಂದೇಶವನ್ನ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ ಪ್ರಧಾನಿ ಮೋದಿ ಅವರು. ಈ ಮೂಲಕ ಪ್ರಧಾನಿ ಮೋದಿ ಅವರು & ಟ್ರಂಪ್ ನಡುವಿನ ಚರ್ಚೆ ಜಾಗತಿಕವಾಗಿ ಕೂಡ ಗಮನ ಸೆಳೆದಿದೆ.












Click it and Unblock the Notifications