India Vs Pakistan: ಭಾರತ & ಪಾಕಿಸ್ತಾನ ಗಡಿಯಲ್ಲಿ ಪರಿಸ್ಥಿತಿ ಈಗಲೂ ಸೂಕ್ಷ್ಮ!

ಬೆಂಕಿ ಹೊತ್ತಿಕೊಂಡಿದೆ, ಭಾರತ & ಪಾಕಿಸ್ತಾನ ಗಡಿಯಲ್ಲಿ ಅಕ್ಷರಶಃ ಕಾಡ್ಗಿಚ್ಚು ಧಗಧಗಿಸುತ್ತಾ ಇದೆ. ಒಂದು ಕಡೆ ಪಹಲ್ಗಾಮ್ ಉಗ್ರರ ದಾಳಿ ಘಟನೆ ಪರಿಸ್ಥಿತಿಯನ್ನ ಸೂಕ್ಷ್ಮಗೊಳಿಸಿದ್ದರೆ, ಈ ಘಟನೆ ನಂತರ ಭಾರತ ಕೈಗೊಂಡಿರುವ ಕ್ರಮಗಳು ಪಾಕಿಸ್ತಾನದ ಬುಡ ಅಲುಗಾಡಿಸಿದೆ. ಇದೇ ಪರಿಸ್ಥಿತಿಯಲ್ಲಿ ಭಾರತ & ಪಾಕಿಸ್ತಾನ ಸಂಬಂಧ ಕೂಡ ಹಾಳಾಗಿ ಹೋಗಿದ್ದು, ದಿನದಿನಕ್ಕೂ ಎರಡೂ ದೇಶಗಳ ಶತ್ರುತ್ವ ಇನ್ನಷ್ಟು ಹೆಚ್ಚಾಗುತ್ತಿದೆ. ಇದೇ ಸಮಯದಲ್ಲಿ, ಗಡಿ ಭಾಗದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದೆ.

ಉಗ್ರರನ್ನು ಸದಾ ಪೋಷಣೆ ಮಾಡುವ, ಉಗ್ರರ ಪರವಾಗಿ ನಿಲ್ಲುವ ಪಾಕಿಸ್ತಾನ ಬದಲಾಗಲ್ಲ ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗುತ್ತಲೇ ಇದೆ. ಭಾರತ & ಪಾಕಿಸ್ತಾನ ನಡುವಿನ ಬಡಿದಾಟ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇದು ಹೀಗೆ ಮುಂದುವರಿದರೆ, ಭವಿಷ್ಯದಲ್ಲಿ ಇನ್ನಷ್ಟು ಕಿಚ್ಚು ಹೊತ್ತಿಕೊಳ್ಳುವುದು ಗ್ಯಾರಂಟಿ. ಭಾರತ ಕೂಡ ಯುದ್ಧಕ್ಕೆ ಸಿದ್ಧವಾಗಿದ್ದು, ಪಾಕಿಸ್ತಾನದಲ್ಲಿನ ಉಗ್ರರಿಗೆ ಸರಿಯಾಗಿ ಬುದ್ಧಿ ಕಲಿಸಲು ಸಜ್ಜಾಗಿದೆ. ಪರಿಸ್ಥಿತಿ ಹೀಗಿದ್ದಾಗಲೇ, ಎರಡೂ ಕಡೆಯ ಸೈನಿಕರು ಗುಂಡಿನ ಮೂಲಕ ಮಾತನಾಡುತ್ತಿದ್ದಾರೆ.

India And Pakistan Border Is Still On High Alert After Pahalgam Incident

ಪಾಕಿಸ್ತಾನದ ಮೇಲೆ ದಿಢೀರ್ ಅಟ್ಯಾಕ್?

ಹೌದು, ಭಾರತ ಇದೀಗ ಉಗ್ರರ ದಾಳಿಯನ್ನು ತುಂಬಾ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಕೂಡ ಉಗ್ರರ ದಾಳಿಗೆ ಪ್ರತಿಕಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಕೂಡ ಕಿರಿಕ್ ಮಾಡಲು ಸಿದ್ಧವಾಗಿದೆ. ಇದೇ ರೀತಿಯಾಗಿ ಇಬ್ಬರ ನಡುವೆ ಕಿರಿಕ್ ನಡೆಯುತ್ತಿದ್ದರೆ ಮತ್ತೊಂದು ಯುದ್ಧ ಗ್ಯಾರಂಟಿ ಎಂಬುದು ವಿಶ್ವಸಂಸ್ಥೆಗೂ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಈಗಾಗಲೇ ಶಾಂತಿ ಕಾಪಾಡುವಂತೆ ಮನವಿಯನ್ನ ಮಾಡಿದೆ.

ಕಿರಿಕ್ ತೆಗೆದ ಪಾಕ್ ರಕ್ಷಣಾ ಸಚಿವ!

ರಷ್ಯಾ ಸರ್ಕಾರಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಈ ರೀತಿ ಹೇಳಿಕೆ ನೀಡಿದ್ದು ಮಾತ್ರವಲ್ಲ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಅಂತಾರಾಷ್ಟ್ರೀಯ ತನಿಖಾ ತಂಡ ಈ ಬಗ್ಗೆ ತನಿಖೆ ನಡೆಸಬೇಕು ಎಂದಿದ್ದಾರೆ ಅಂತಾ ಇದೀಗ ಖವಾಜಾ ತಿಳಿಸಿರೋದು ಭಾರತದ ಕೋಪವನ್ನ ಮತ್ತಷ್ಟು ಹೆಚ್ಚು ಮಾಡಿದೆ.

ರಷ್ಯಾ, ಚೀನಾ ಇಲ್ಲವೇ ಪಾಶ್ಚಿಮಾತ್ಯ ದೇಶಗಳು ಸಕಾರಾತ್ಮಕ ಪಾತ್ರ ವಹಿಸಬಹುದು ಎಂದಿರುವ ಖವಾಜಾಗೆ ಸರಿಯಾದ ಉತ್ತರವೇ ಸಿಗುವ ನಿರೀಕ್ಷೆ ಇದೆ. ಹಾಗೇ ತನಿಖಾ ತಂಡವನ್ನ ರಚಿಸಿ ಭಾರತ ಅಥವಾ ಮೋದಿ ಸುಳ್ಳು ಹೇಳುತ್ತಿದ್ದಾರೆಯೇ? ಎಂಬುದನ್ನ ಅಂತಾರಾಷ್ಟ್ರೀಯ ತನಿಖೆ ಮೂಲಕ ಕಂಡುಹಿಡಿಯಲು ಸಾಧ್ಯ ಎಂದು ಪಾಕಿಸ್ತಾನ ರಕ್ಷಣಾ ಹೇಳಿಕೆ ನೀಡಿರುವುದು ಕಿಚ್ಚು ಹೊತ್ತಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+