India-Pakistan Tensions: ಪಾಕಿಸ್ತಾನದ ಪ್ರಮುಖ ವಾಯುನೆಲೆ ಧ್ವಂಸಗೊಳಿಸಿದ ಭಾರತ
India-Pakistan Tensions: ಪೆಹಲ್ಗಾಮ್‌ನಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿ 26 ಮಂದಿ ಅಮಾಯಕರನ್ನು ಬಲಿ ಪಡೆದುಕೊಂಡಿದ್ದರು. ಇದಕ್ಕೆ ಪ್ರತಿತ್ಯುತ್ತರವಾಗಿ ಭಾರತೀಯ ಸೇನೆ ಪಾಕ್‌ಗೆ ನುಗ್ಗಿ ಉಗ್ರ ನೆಲೆಗಳನ್ನು ಧ್ವಂಸ ಮಾಡಿತ್ತು. ಅಷ್ಟದರೂ, ಬುದ್ಧಿ ಕಲಿಯದ ನರಿ ಬುದ್ಧಿ ಪಾಕ್‌ಗೆ ಭಾರತ ದೊಡ್ಡ ಹೊಡೆತ ಕೊಟ್ಟಿದೆ.
ಭಾರತ-ಪಾಕಿಸ್ತಾನದ ನಡುವೆ ಸಂಘರ್ಷ ಏರ್ಪಟ್ಟು ದಾಳಿ ಪ್ರತಿದಾಳಿಯಲ್ಲಿ ಪಾಕಿಸ್ತಾನಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ. ಮಾಹಿತಿ ಪ್ರಕಾರ, ಭಾರತದ ಕ್ಚಿಪಣಿ ದಾಳಿಗೆ ಪಾಕಿಸ್ತಾನದ 10 ಸೇನಾ ನೆಲೆಗಳು ಧ್ವಂಸವಾಗಿವೆ. ಅದರಲ್ಲೂ ರಾವಲ್ಪಿಂಡಿಯಲ್ಲಿರುವ ಪಾಕ್‌ನ ಪ್ರಮುಖ ನೂರ್ ಖಾನ್ ವಾಯುನೆಲೆ ಛಿದ್ರವಾಗಿದ್ದು, ಇದರಿಂದಲೇ ಪಾಕಿಸ್ತಾನ ಬೆದರಿ ಒಪ್ಪಂದ ಮಾಡಿಕೊಂಡತೇ ಎನ್ನುವ ಪ್ರಶ್ನೆಗಳು ಎದ್ದಿವೆ. ಮತ್ತೊಂದೆಡೆ ಒಪ್ಪಂದ ವೇಳೆ ಭಾರತವು ನಮ್ಮನ್ನು ಕೆಣಕಲು ಬಂದವರನ್ನು ಬಿಡುವ ಮಾತೇ ಇಲ್ಲ ಎನ್ನುವ ಮಾತನ್ನೂ ಕೂಡ ಹೇಳಿಬಿಟ್ಟಿದೆ.

ಭಾರತ ಸೇನಾಪಡೆ ನಡೆಸಿದ ಪ್ರತಿದಾಳಿಯಿಂದ ರಹೀಮ್ ಯಾರ್ ಖಾನ್ ವಾಯುನೆಲೆ ಧ್ವಂಸವಾಗಿದೆ. ಈ ಸಂಬಂಧ ಪಾಕಿಸ್ತಾನ ನಾಗರಿಕ ವಿಮಾನಯಾನ ಪ್ರಾಧಿಕಾರ ಶನಿವಾರ ಸಂಜೆ ಹೊರಡಿಸಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಭಾರತ ಮಿಲಿಟರಿ ದಾಳಿ ಹಿನ್ನೆಲೆ ವಾಯುನೆಲೆಯಲ್ಲಿರುವ ಏಕೈಕ ರನ್ ವೇ ಅನ್ನು ಒಂದು ವಾರದವರೆಗೆ ಕಾರ್ಯನಿರ್ವಹಿಸುವುದಿಲ್ಲ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ರನ್ ವೇ ಇಸ್ಲಾಮಾಬಾದ್ನಿಂದ 10 ಕಿಲೋ ಮೀಟರ್ ದೂರದಲ್ಲಿದೆ. ಪಾಕಿಸ್ತಾನದ ಮಿಲಿಟರಿಯ ಮುಖ್ಯ ಸಾಗಣೆ ಕೇಂದ್ರಗಳಲ್ಲಿ ನೂರ್ ಖಾನ್ ವಾಯುನೆಲೆ ಕೂಡ ಒಂದಾಗಿದ್ದು, ಯುದ್ಧ ವಿಮಾನಗಳಿಗೆ ರೀಫುಯಲೆಂಗ್ ವ್ಯವಸ್ಥೆ ಒಳಗೊಂಡಿದೆ. ಇದು ಸೇನೆಯ ಹೆಡ್ಕ್ವಾರ್ಟರ್ಸ್ ಪಕ್ಕದಲಿದೆ. ಪಾಕಿಸ್ತಾನದ ನ್ಯಾಷನಲ್ ಏರೋಸ್ಪೇಸ್ ಸೆಂಟರ್ ಇರುವ ಬೇನಜೀರ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಸಹ ಸನಿಹದಲ್ಲಿದೆ.
ಅಷ್ಟೇ ಅಲ್ಲದೆ, ಚಕ್ಲಾಲ, ಮುರಿದ್, ರಫಿಕಿ, ರಹೀಂ ಯಾರ್ ಖಾನ್, ಸುಕ್ಕೂರ್ ಮತ್ತು ಚುನಿಯನ್ ಮತ್ತಿತರ ವಾಯುನೆಲೆಗಳ ಮೇಲೆ ಭಾರತ ಕ್ಷಿಪಣಿ ದಾಳಿ ಮಾಡುವ ಮೂಲಕ ಪಾಕ್‌ಗೆ ಸರಿಯಾಗಿ ತಿರುಗೇಟು ನೀಡುವ ಕೆಲಸವನ್ನು ಮಾಡಿದೆ. ಇದು ಹೀಗೆ ಮುಂದುವರೆದಿದ್ದರೆ, ಪಾಕ್‌ನ ನ್ಯೂಕ್ಲಿಯಾರ್ ಕಮಾಂಡ್ ಅಥಾರಿಟಿ ಮಣ್ಣುಪಾಲಾಗುವ ಸಾಧ್ಯತೆಯಿತ್ತು. ಆದ್ದಾರಿಂದ ಪಾಕ್ ಕದನ ವಿರಾಮಕ್ಕಾಗಿ ಅಮೆರಿಕದ ಮೊರೆ ಹೋಗಿತ್ತು ಎನ್ನುವ ಮಾಹಿತಿ ಬಟಾಬಯಲಾಗಿದೆ.
ಮೊದಲಿಗೆ ಕೆಣಕುವುದು ಪಾಕಿ ಪಾಕಿಸ್ತಾನವೇ, ಆಮೇಲೆ ಸರಿಯಾಗಿ ಹೊಡೆತ ತಿಂದು ಹಿಂದೆ ಸರಿಯಲು ಒಪ್ಪಂದ ಮೊರೆ ಹೋಗುವುದು ಅದೇ. ಇದು ಹೇಗಿದೆ ಅಂದರೆ ಮಕು ಚಿವುಟಿ ಅದೆ ಹಾರಟಕ್ಕೆ ಕಾರಣವಾಗಿ, ಮತ್ತೆ ಸುಮ್ಮನಿರಿಸಲು ತೊಟ್ಟಿಲು ತೂಗುತ್ತಾರೆ ಅಂತಾರಲ್ಲ ಹಾಗಾಯ್ತು ಪಾಪಿ ಪಾಕಿಸ್ತಾನದ ಕಥೆ.
ಕದನ ವಿರಾಮದ ಒಪ್ಪಂದಕ್ಕೆ ಎರಡು ರಾಷ್ಟ್ರಗಳು ಒಪ್ಪಿದ್ದವು. ಇದಾದ ಮೇಲೂ ಒಪ್ಪಂದ ಮುರಿದು ಶ್ರೀನಗರ ಮೇಲೆ ಪಾಪಿ ಪಾಕಿಸ್ತಾನ ಡ್ರೋನ್ ದಾಳಿ ಮಾಡುವ ಮೂಲಕ ನೀಚತನ ತೋರಿಸಿತು. ಹಾಗಂತ ಭಾರತದ ಸೈನಿಕರೇನೂ ಕೈಕಟ್ಟಿ ಕೋರಲಿಲ್ಲ. ಬದಲಿಗೆ ಅವರ ಡ್ರೋನ್‌ಗಳನ್ನು ಹೊಡೆದುರುಳಿಸುವ ಮೂಲಕ ಪ್ರತ್ಯುತ್ತರ ಕೊಡುವ ಕೆಲಸ ಮಾಡಿತು. ಈಗಾಗಲೇ ನಿನ್ನೆ ನಡೆದ ಒಪ್ಪಂದದ ಪ್ರಕಾರ, ಭಾರತದ ಮೇಲೆ ಯಾವುದೇ ಉಗ್ರರ ದಾಳಿ ನಡೆದರೂ ಅದನ್ನು ಯುದ್ಧ ಎಂದೇ ಪರಿಗಣಿಸಲಾಗುತ್ತದೆ ಎಂದು ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದಾರೆ.
ಇಷ್ಟಾದರೂ ಮತ್ತೆ ಮುಂದುವರೆದರೆ, ನಮ್ಮ ಮತ್ತೊಂದು ಮುಖ ತೋರಿಸಬೇಕಾಗುತ್ತದೆ ಅಂತಲೂ ಹೇಳಿದ್ದರು. ಮತ್ತೊಂದೆಡೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ನಾವು ಕದನ ವಿರಾಮಕ್ಕೆ ಒಪ್ಪಿದ್ದೇವೆ. ಆದರೆ, ಉಗ್ರರ ವಿರುದ್ಧ ರಾಜೀ ಮಾತೇ ಇಲ್ಲ. ಅವರ ವಿರುದ್ಧ ಏನು ಮಾಡಬೇಕೋ ಅದನ್ನು ನಾವು ಮಾಡೇ ಮಾಡುತ್ತೇವೆ ಎನ್ನುವ ಎಚ್ಚರಿಕೆ ಸಂದೇಶವನ್ನು ಸಹ ರವಾನಿಸಿದ್ದರು.












Click it and Unblock the Notifications