Kiss ಮಾಡಿದ್ರೆ ಒಂದು ರೇಟ್..ಅಪ್ಪಿಕೊಂಡು ಮುದ್ದಾಡಿದ್ರೆ ಮತ್ತೊಂದು ರೇಟ್: ಇದು ಹೊಸ ಟ್ರೆಂಡ್
ನಿರುದ್ಯೋಗ, ಬಡತನ, ಆರ್ಥಿಕ ಸಮಸ್ಯೆ ಎಲ್ಲಾ ದೇಶದಲ್ಲಿಯೂ ಹೆಚ್ಚುತ್ತಿದ್ದು, ಮನೆಯ ಜವಾಬ್ದಾರಿಯನ್ನು ಸರಿದೂಗಿಸಲು ಯುವ ಜನತೆ ಅನ್ಯ ಮಾರ್ಗದತ್ತ ಹೆಜ್ಜೆ ಇಡುವಂತಾಗುತ್ತಿದೆ. ಇದನ್ನೂ ಮೀರಿ ಟ್ರೆಂಡ್‌ಗೆ ಬಿದ್ದ ಕೆಲ ಯುವತಿಯರು ಎಂಜಾಯ್ ಹೆಸರಿನಲ್ಲಿ ಬೇರೆ ದಿಕ್ಕಿನೆಡೆಗೆ ಸಾಗುತ್ತಿದ್ದಾರೆ. ಚೀನಾದಲ್ಲೂ ಈಗ ಇದೇ ಪರಿಸ್ಥಿತಿಯಾಗಿದ್ದು, ಸ್ಟ್ರೀಟ್ ಗರ್ಲ್‌ಫ್ರೆಂಡ್ ಸಖತ್ ಟ್ರೆಂಡ್ ಆಗುತ್ತಿದೆ.
ಬಾಡಿಗೆ ಗರ್ಲ್‌ಫ್ರೆಂಡ್, ಬಾಯ್‌ಫ್ರೆಂಡ್ ಈಗೀಗ ಎಲ್ಲಾ ಕಡೆ ಸಮಾನ್ಯವಾಗುತ್ತಿದ್ದು, ಇತ್ತೀಚಿಗೆ ಭಾರದಲ್ಲಿಯೂ ಈ ರೀತಿಯ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಆದರೆ ಈಗ ಚೀನಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಯಾಗಿದ್ದು, ಸ್ಟ್ರೀಟ್ ಗರ್ಲ್‌ಫ್ರೆಂಡ್ ಎನ್ನುವ ಹೆಸರಿನಲ್ಲಿ ಬಂದಿರುವ ಈ ಟ್ರೆಂಟ್‌ನಲ್ಲಿ ಪ್ರತಿನಿತ್ಯ ನೂರಾರು ಯುವತಿಯರು ಭಾಗಿಯಾಗುತ್ತಿದ್ದಾರೆ.

ಚೀನಾದಲ್ಲಿ ಜನರು ಹೆಚ್ಚಾಗಿರುವ ಪ್ರದೇಶವಾದ ಸೆಂಜ್ಹೆನ್ನಲ್ಲಿ ಈಗ ಮುತ್ತು ಮತ್ತು ಅಪ್ಪುಗೆಗಳು ದುಡ್ಡಿಗಾಗಿ ಬಿಕರಿಯಾಗುತ್ತಿವೆ. ಪ್ರತಿ ದಿನ ನೂರಾರು ಹುಡುಗಿಯರು ಬೋರ್ಡ್ ಹಿಡಿದುಕೊಂಡು ರಸ್ತೆಗಳಲ್ಲಿ ನಿಲ್ಲುತ್ತಿದ್ದಾರೆ. ಅಪ್ಪುಗೆ (Hug) ಮತ್ತು ಮುತ್ತಿಗೆ (Kiss) ಇಷ್ಟಿಷ್ಟು ಬೆಲೆ ಎಂದು ನಿಗದಿ ಮಾಡಿಕೊಂಡು ರಸ್ತೆ ಬದಿಯಲ್ಲಿ ಬೋರ್ಡ್ ಹಿಡಿದುಕೊಂಡು ಯುವಕರನ್ನು ಹಾಗೂ ಪುರುಷರನ್ನು ಆಕರ್ಷಿಸುತ್ತಿದ್ದಾರೆ. ಬೇರೆ ಉದ್ಯೋಗಗಳಿಗಿಂತ ಇದು ಸುಲಭ ಮತ್ತು ಲಾಭ ಎನ್ನುವ ಕಾರಣಕ್ಕೆ ಅನೇಕ ಯುವತಿಯರು ಈ ಟ್ರೆಂಡ್‌ಗೆ ಬೀಳುತ್ತಿದ್ದಾರೆ ಎನ್ನಲಾಗುತ್ತಿದೆ.
ಚೀನಾದ ಒಂದು ಯುವನ್ಗೆ ಒಂದು ಅಪ್ಪುಗೆ ಹಾಗೂ 10 ಯುವನ್ಗೆ ಒಂದು ಕಿಸ್ ಎಂದು ಬೋರ್ಡ್ ಹಿಡಿದುಕೊಂಡು ಹುಡುಗಿಯರು ನಿಲ್ಲುತ್ತಿದ್ದಾರೆ. ಜೊತೆಗೆ ರಸ್ತೆಯಲ್ಲೇ ಸಾಲಾಗಿ ಅಂಗಡಿಗಳನ್ನು ಕೂಡ ತೆರೆಯುತ್ತಿದ್ದಾರೆ.

ಜೊತೆಗೆ ಸಿನಿಮಾ ನೋಡುವುದು, ಬೇರೆ ಕಡೆ ಸುತ್ತಾಡಲು ಹೋಗುವುದು, ಜೊತೆಯಲ್ಲೇ ಊಟ, ಜೊತೆಯಲ್ಲೇ ಮದ್ಯಪಾನ, ಧೂಮಪಾನ ಹೀಗೆ ಒಂದೊಂದಕ್ಕೆ ಒಂದೊಂದು ದರ ಎಂದು ನಿಗದಿ ಮಾಡಿಕೊಂಡು ಯುವತಿಯರು ವ್ಯವಹಾರ ಮಾಡುತ್ತಿದ್ದಾರೆ.
ಸ್ಟ್ರೀಟ್ ಗರ್ಲ್‌ಫ್ರೆಂಡ್ ಏಪ್ರಿಲ್ 2023ರಲ್ಲಿ ಆರಂಭವಾಗಿ ಸುದ್ದಿ ಮಾಡಿತ್ತು. ಬಳಿಕ ಈ ವಿಚಾರ ಎಲ್ಲಿಯೂ ಬೆಳಕಿಗೆ ಬಂದಿರಲಿಲ್ಲ, ಆದರೆ ಈಗ ಚೀನಾದಲ್ಲಿ ಇದೇ ದೊಡ್ಡ ಟ್ರೆಂಡ್ ಹಾಗೂ ವ್ಯವಹಾರವಾಗಿದೆ. ಕೆಲವರು ಸ್ವಯಂಪ್ರೇರಿತರಾಗಿ ಈ ಕೆಲಸಕ್ಕೆ ಬರುತ್ತಿದ್ದು, ಕೆಲವು ಹುಡುಗಿಯರು ಸಮಯ ಕಳೆಯಲು, ಬೇರೆ ಬೇರೆ ಜನರನ್ನು ಭೇಟಿ ಮಾಡಲು, ಒತ್ತಡವನ್ನು ನಿವಾರಿಸಿಕೊಳ್ಳಲು, ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸ್ಟ್ರೀಟ್ ಗರ್ಲ್‌ಫ್ರೆಂಡ್ ಟ್ರೆಂಡ್‌ನಲ್ಲಿ ಭಾಗಿಯಾಗುತ್ತಿದ್ದಾರೆ.












Click it and Unblock the Notifications