ಚಿತ್ರಗಳು : ನರೇಂದ್ರ ಮೋದಿ ಬಾಂಗ್ಲಾದೇಶ ಪ್ರವಾಸ
ಢಾಕಾ, ಜೂ. 06 : ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಬಾಂಗ್ಲಾದೇಶಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಢಾಕಾ ವಿಮಾನ ನಿಲ್ದಾಣದಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಎರಡು ದಿನಗಳ ಭೇಟಿಯಾಗಿ ನರೇಂದ್ರ ಮೋದಿ ಅವರು ಬಾಂಗ್ಲಾಕ್ಕೆ ಆಗಮಿಸಿದ್ದಾರೆ.
ಶನಿವಾರ ಬೆಳಗ್ಗೆ ಢಾಕಾ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರು ಹೂಗುಚ್ಚ ನೀಡಿ ಸ್ವಾಗತಿಸಿದರು. ಹಸೀನಾ ಅವರೊಂದಿಗೆ ಅವರ ಸಂಪುಟದ ವಿತ್ತ ಸಚಿವ ಮುಹಿತ್, ವಾಣಿಜ್ಯ ಸಚಿವ ತುಫೈಲ್ ಅಹ್ಮದ್ ಮತ್ತು ಕೃಷಿ ಸಚಿವ ಮೋತಿ ಚೌಧರಿ ಮತ್ತಿತರು ಉಪಸ್ಥಿತರಿದ್ದರು. [ಮೋದಿ ಕನಸುಗಳು: ಸ್ವಚ್ಛಭಾರತದಿಂದ ಡಿಜಿಟಲ್ ಇಂಡಿಯಾ ತನಕ]
ಎರಡು ದಿನಗಳ ಪ್ರವಾಸದ ವೇಳೆ ಉಭಯ ದೇಶಗಳ ನಡುವಿನ 20 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಶೇಖ್ ಹಸೀನಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಮೋದಿ ಅವರು ಮಹತ್ವದ ಗಡಿ ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ. [ಮೋಡಿಗಾರ, ಸೊಗಸುಗಾರ ಸೆಲ್ಫಿ ಮೋಹಿ ಮೋದಿ]
ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಾಂಗ್ಲಾದೇಶಕ್ಕೆ ತೆರಳಿದ್ದಾರೆ. ಢಾಕಾದಲ್ಲಿ ಹಬ್ಬದ ವಾತಾವರಣವಿದ್ದು, ಪ್ರಧಾನಿ ಮೋದಿ, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ಎತ್ತರದ ಕಟೌಟ್‌ಗಳನ್ನು ಹಾಕಲಾಗಿದೆ. ಚಿತ್ರಗಳಲ್ಲಿ ನೋಡಿ ಮೋದಿ ಬಾಂಗ್ಲಾ ಪ್ರವಾಸ...[ಪಿಟಿಐ ಚಿತ್ರಗಳು]

ಬಾಂಗ್ಲಾದೇಶಕ್ಕೆ ಆಗಮಿಸಿದ ಮೋದಿ
ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಬಾಂಗ್ಲಾದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ. ಎರಡು ದಿನಗಳ ಪ್ರವಾಸಕ್ಕಾಗಿ ಅವರು ಬಾಂಗ್ಲಾಕ್ಕೆ ಆಗಮಿಸಿದ್ದಾರೆ.

ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಶನಿವಾರ ಬೆಳಗ್ಗೆ ನರೇಂದ್ರ ಮೋದಿ ಅವರಿಗೆ ಢಾಕಾ ವಿಮಾನ ನಿಲ್ದಾಣದಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.

ಮೋದಿ ಸ್ವಾಗತಿಸಿದ ಬಾಂಗ್ಲಾ ಪ್ರಧಾನಿ
ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರು ಹೂಗುಚ್ಚ ನೀಡಿ ಸ್ವಾಗತಿಸಿದರು. ಹಸೀನಾ ಅವರೊಂದಿಗೆ ಅವರ ಸಂಪುಟದ ವಿತ್ತ ಸಚಿವ ಮುಹಿತ್, ವಾಣಿಜ್ಯ ಸಚಿವ ತುಫೈಲ್ ಅಹ್ಮದ್ ಮತ್ತು ಕೃಷಿ ಸಚಿವ ಮೋತಿ ಚೌಧರಿ ಮತ್ತಿತರು ಉಪಸ್ಥಿತರಿದ್ದರು.

20 ಒಪ್ಪಂದಗಳಿಗೆ ಸಹಿ
ಎರಡು ದಿನಗಳ ಪ್ರವಾಸದ ವೇಳೆ ಉಭಯ ದೇಶಗಳ ನಡುವಿನ 20 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಶೇಖ್ ಹಸೀನಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಮೋದಿ ಅವರು ಮಹತ್ವದ ಗಡಿ ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ.

ಮ್ಯೂಸಿಯಂಗೆ ಭೇಟಿ
ಬಾಂಗ್ಲಾಕ್ಕೆ ಆಗಮಿಸಿದ ಮೋದಿ 1971ರ ಬಾಂಗ್ಲಾ ವಿಮೋಚನಾ ಯುದ್ಧ ಹುತಾತ್ಮರ ಸ್ಮಾರಕ್ಕೆ ಭೇಟಿ ನೀಡಿ ಹುತಾತ್ಮರಿಗೆ ಗೌರವ ಸಲ್ಲಿಸಿದರು. ಬಳಿಕ ಬಾಂಗ್ಲಾದೇಶದ ಪ್ರಥಮ ಪ್ರಧಾನಿ ಶೇಖ್ ಮುಜಿಬುರ್ ರೆಹಮಾನ್ ಅವರ ಸ್ಮಾರಕ ಬಂಗಬಂಧು ಮ್ಯೂಸಿಯಂಗೆ ಭೇಟಿ ನೀಡಿದರು.

ಢಾಕಾದಲ್ಲಿ ಹಬ್ಬವ ವಾತಾವರಣ
ನರೇಂದ್ರ ಮೋದಿ ಅವರ ಜೊತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಾಂಗ್ಲಾದೇಶಕ್ಕೆ ತೆರಳಿದ್ದಾರೆ. ಢಾಕಾದಲ್ಲಿ ಹಬ್ಬದ ವಾತಾವರಣವಿದ್ದು, ಪ್ರಧಾನಿ ಮೋದಿ, ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ಎತ್ತರದ ಕಟೌಟ್‌ಗಳನ್ನು ಹಾಕಲಾಗಿದೆ.












Click it and Unblock the Notifications