Gaza War: ಗಾಜಾ ನೆಲಕ್ಕೆ ಅಗತ್ಯ ನೆರವು ಪೂರೈಕೆ ಮಾಡಲು ಮಹತ್ವದ ಆದೇಶ

ಗಾಜಾ ನೆಲದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದು ದೊಡ್ಡ ಬಡಿದಾಟ ನಡೆಯುತ್ತಿದೆ, ಈ ರೀತಿಯ ಗಲಾಟೆ ನೋಡಿ ಇಡೀ ಪ್ರಪಂಚ ಮತ್ತೊಮ್ಮೆ ಬೆಚ್ಚಿ ಬೀಳುವ ಪರಿಸ್ಥಿತಿ ಕೂಡ ನಿರ್ಮಾಣ ಆಗಿದೆ. ಇನ್ನೇನು ಯುದ್ಧ ನಿಂತೇ ಹೋಯಿತು ಅನ್ನುವಾಗಲೇ ಮತ್ತೊಮ್ಮೆ ಹಿಂಸಾಚಾರದ ಬೆಂಕಿ ದಿಢೀರ್ ಭುಗಿಲೆದ್ದು, ಮತ್ತಷ್ಟು ಜನರ ಪ್ರಾಣ ಹೋಗುತ್ತಿರುವುದು ಆತಂಕವನ್ನು ಜಗತ್ತಿನಲ್ಲಿ ಹೆಚ್ಚಿಸಿದೆ. ಇಂತಹ ಸಮಯದಲ್ಲಿ ಪ್ರಪಂಚದ ಮೂಲೆ ಮೂಲೆಯಿಂದ ಕೂಡ ಈ ಯುದ್ಧ ನಿಲ್ಲಲಿ, ಎಂಬ ಒತ್ತಾಯ ಕೂಡ ಕೇಳಿ ಬರುತ್ತಿದೆ. ಹೀಗಿದ್ದಾಗಲೇ, ಗಾಜಾ ನೆಲಕ್ಕೆ ಅಗತ್ಯ ನೆರವು ಪೂರೈಕೆ ಮಾಡಲು ಮಹತ್ವದ ಆದೇಶ ಕೂಡ ಸಿಕ್ಕಿದೆ. ಹಾಗಾದ್ರೆ ಏನದು ಆದೇಶ?

ಇಸ್ರೇಲ್ ಕೊತ ಕೊತ ಕುದಿಯುತ್ತಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಗಾಜಾ ವಿರುದ್ಧ ಯುದ್ಧದಲ್ಲಿ ಘೋರ ದಾಳಿ ನಡೆಸುವ ಸಾಧ್ಯತೆ ಇದೆ. ಅದರಲ್ಲೂ ಹಮಾಸ್ ವಿರುದ್ಧ ಶುರುವಾಗಿದ್ದ ಯುದ್ಧ ಇದೀಗ ಸಾಮಾನ್ಯರ ಜೀವನದ ಮೇಲೆ ದಾಳಿ ಮಾಡಿದಂತೆ ಆಗಿದೆ ಎಂಬ ಆರೋಪ ಕೇಳಿಬಂದು ಸಂಚಲನ ಸೃಷ್ಟಿಯಾಗಿದೆ. ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಕೈಮೀರಿ ಹೋಗುತ್ತಿದೆ. ಮುಂದೆ ಏನಾಗಲಿದೆ? ಯಾರು ಯಾರ ಮೇಲೆ ದಾಳಿ ಮಾಡುತ್ತಾರೆ? ಅಕಸ್ಮಾತ್ ಪರಮಾಣು ಬಾಂಬ್ ದಾಳಿಯೇ ನಡೆದರೆ ಕಥೆ ಏನು? ಹೀಗೆ ನೂರಾರು ಪ್ರಶ್ನೆಗಳು ಈ ಸಮಯದಲ್ಲಿ ಜಗತ್ತಿನಾದ್ಯಂತ ಉದ್ಭವಿಸುತ್ತಿವೆ. ಇಂತಹ ಸಮಯದಲ್ಲೇ ಅನ್ನ & ನೀರು ಇಲ್ಲದೆ ಒದ್ದಾಡುತ್ತಿರುವ ಗಾಜಾ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂಬ ಆದೇಶ ನೀಡಲಾಗಿದೆ.

ICJ Urges Israel to Permit Humanitarian Aid into Gaza for Basic Needs

ಅಗತ್ಯ ವಸ್ತುಗಳಿಗೆ ಕಾಯುತ್ತಿರುವ ಜನ

ಹಮಾಸ್ ಬಂಡುಕೋರರು ಮಾಡಿದ್ದ ತಪ್ಪಿಗೆ ಇದೀಗ ಗಾಜಾ ಪಟ್ಟಿಯಲ್ಲಿ ಸಾಮಾನ್ಯ ಜನರು ಬಲಿಯಾಗುವ ಸ್ಥಿತಿಯೇ ಎದುರಾಗಿದೆ ಎಂಬ ಆರೋಪ ಇದೆ. ಅದರಲ್ಲೂ ಇಸ್ರೇಲ್ & ಇರಾನ್ ನಡುವೆ ಯುದ್ಧ ನಡೆದು ನಿಂತು ಹೋದ ನಂತರ ಗಾಜಾ ಪಟ್ಟಿಯಲ್ಲಿ ಪರಿಸ್ಥಿತಿ ಇನ್ನಷ್ಟು ಕಠಿಣವಾಗಿದೆ. ಹೀಗಾಗಿ ಹತ್ತಾರು ಸಾವಿರ ಜನರು ಬಲಿಯಾಗಿರುವ ಆರೋಪಗಳು ಕೂಡ ಕೇಳಿಬರುತ್ತಿರುವ ಕಾರಣಕ್ಕೆ ಇದೀಗ ಸೂಕ್ತ ವ್ಯವಸ್ಥೆ ಒದಗಿಸಲು ಆದೇಶ ನೀಡಲಾಗಿದೆ.

ಒಟ್ನಲ್ಲಿ ಜಗತ್ತಿನಲ್ಲಿ ಹಲವು ಯುದ್ಧಗಳು ನಡೆಯುತ್ತಿದ್ದು, ಭವಿಷ್ಯದಲ್ಲಿ ಇದು ಆರ್ಥಿಕತೆ ಮಾತ್ರವಲ್ಲದೆ ಮನುಷ್ಯರಿಗೂ ದೊಡ್ಡ ಸಮಸ್ಯೆ ತಂದೊಡ್ಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಯುದ್ಧ ನಿಂತು ಶಾಂತಿ ಮನೆಮಾಡಲಿ ಎಂಬ ಆಗ್ರಹವು ಇದಿಗ ಕೇಳಿಬಂದಿದೆ. ಆದರೆ ಇದು ಇಷ್ಟಕ್ಕೆ ನಿಲ್ಲುತ್ತಾ? ಅನ್ನೋದನ್ನ ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+