• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ನನ್ನ ಕೈ ಕತ್ತರಿಸಿ, ನೋವಿನಿಂದ ಮುಕ್ತಿ ಕೊಡಿ' ಎಂದ ಟ್ರೀಮ್ಯಾನ್ ಸಿಂಡ್ರೋಮ್ ರೋಗಿ

By ಅನಿಲ್ ಆಚಾರ್
|

ಈತ ಬಾಂಗ್ಲಾದೇಶಿ. ಆತನ ಮೈ ಮೇಲೆ ಮರದ ತೊಗಟೆಯಂತೆ ಕಾಣುವ ಬೆಳವಣಿಗೆ ಆಗಿರುವುದರಿಂದ "ಟ್ರೀ ಮ್ಯಾನ್" ಎಂದು ಕರೆಯಲಾಗುತ್ತದೆ. ಇದು ಒಂದು ಕಾಯಿಲೆ. ವಿರಳಾತಿವಿರಳವಾಗಿ ಬರುತ್ತದೆ. ಇದರ ಅಸಾಧ್ಯ ನೋವು ನನ್ನಿಂದ ಭರಿಸಲು ಆಗುತ್ತಿಲ್ಲ. ನನ್ನ ಕೈಗಳನ್ನು ಕತ್ತರಿಸಿ ಎಂದು ಈತ ಸೋಮವಾರ ಮನವಿ ಮಾಡಿದ್ದಾನೆ.

ಈ ಕಾಯಿಲೆಯಿಂದ ಕೈಗಳಲ್ಲಿ, ಪಾದದಲ್ಲಿ ಆಗುವ ತೊಗಟೆಯಂತಹ ಬೆಳವಣಿಗೆಯನ್ನು ತೊಲಗಿಸಿಕೊಳ್ಳಲು ಮೂರು ವರ್ಷದಲ್ಲಿ ಅಬುಲ್ ಬಜಂದರ್ ಇಪ್ಪತ್ತೈದು ಆಅಪರೇಷನ್ ಮಾಡಿಸಿಕೊಂಡಿದ್ದಾನೆ. ವೈದ್ಯರೇನೋ ಕಾಯಿಲೆ ನಿವಾರಿಸಿದೆವು ಎಂದರು. ಕಳೆದ ವರ್ಷ ಮೇ ತಿಂಗಳಲ್ಲಿ ಢಾಕಾದ ಕ್ಲಿನಿಕ್ ಗೆ ಮತ್ತೆ ಬಂದ ಬಜಂದರ್ ತನ್ನ ಕಾಯಿಲೆ ಮರುಕಳಿಸಿದ್ದನ್ನು, ಅದರಿಂದ ಆಗುತ್ತಿರುವ ನೋವನ್ನು ಹೇಳಿಕೊಂಡ.

ಐವರು ಮಕ್ಕಳನ್ನು ಕೊಂದ ಆತನಿಗೆ ಯಾವ ಶಿಕ್ಷೆಯೂ ಕೊಡಬೇಡಿ ಎಂದ ತಾಯಿ

ಒಂದು ಮಗುವಿನ ತಂದೆಯಾದ, ಇಪ್ಪತ್ತೆಂಟು ವರ್ಷದ ಬಜಂದರ್ ಸ್ಥಿತಿ ಈ ವರ್ಷದ ಜನವರಿಯಲ್ಲಿ ಮತ್ತಷ್ಟು ಭಯಾನಕವಾಯಿತು. ನಿರ್ವಾಹ ಇಲ್ಲದೆ ಆಸ್ಪತ್ರೆಗೆ ದಾಖಲಾದ. ಅಂಗೈ ತುಂಬ ತೊಗಟೆಯಂತೆ ಇಂಚುಗಟ್ಟಲೆ ಬೆಳವಣಿಗೆ ಆಗಿದೆ. "ನನ್ನಿಂದ ಈ ನೋವು ಸಹಿಸಲಿಕ್ಕೆ ಆಗಲ್ಲ. ರಾತ್ರಿ ಹೊತ್ತು ನನ್ನಿಂದ ಮಲಗಕ್ಕೆ ಕೂಡ ಆಗಲ್ಲ. ನನ್ನ ಕೈಗಳನ್ನೇ ಕತ್ತರಿಸಿ, ಅದರಿಂದಾದರೂ ನನಗೆ ನೋವಿನಿಂದ ಮುಕ್ತಿ ಸಿಗಬಹುದು" ಎಂದು ವೈದ್ಯರನ್ನು ಕೇಳಿದ್ದಾಗಿ ಆತ ಹೇಳುತ್ತಾನೆ.

ಇನ್ನು ಆತನ ತಾಯಿ ಅಮಿನಾ ಬೀಬಿ ಕೂಡ ತಮ್ಮ ಮಗನ ಮಾತನ್ನೇ ಅನುಮೋದಿಸುತ್ತಾರೆ. ಕನಿಷ್ಠ ಆ ನೋವಿನಿಂದಾದರೂ ಅವನಿಗೆ ಮುಕ್ತಿ ಸಿಗಬಹುದು. ಇದು ನರಕದ ಸ್ಥಿತಿ ಎಂದು ಆಕೆ ಹೇಳುತ್ತಾರೆ. ಬಜಂದರ್ ಗೆ ಇರುವ ಕಾಯಿಲೆ ಹೆಸರು ಎಪಿಡರ್ಮೋಡಿಸ್ ಪ್ಲಾಸಿಯಾ ವೆರುಸಿಫೋರ್ಮಿಸ್. ಇದು ಅಪರೂಪದ ಜೈವಿಕ ಸ್ಥಿತಿ. ಇದನ್ನು "ಟ್ರೀ ಮ್ಯಾನ್ ಸಿಂಡ್ರೋಮ್" ಎಂದು ಕೂಡ ಕರೆಯಲಾಗುತ್ತದೆ.

ಇನ್ನಷ್ಟು ಉತ್ತಮ ಚಿಕಿತ್ಸೆ ಪಡೆಯಲು ವಿದೇಶಕ್ಕೆ ಹೋಗಬೇಕು ಎನ್ನುತ್ತಾನೆ ಬಜಂದರ್. ಆದರೆ ಅಷ್ಟು ವೆಚ್ಚ ಭರಿಸುವ ಶಕ್ತಿ ಅತನಿಗೆ ಇಲ್ಲ. ಇನ್ನು ಢಾಕಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಮಂತಾ ಲಾಲ್ ಸೇನ್ ಮಾತನಾಡಿ, ಏಳು ವೈದ್ಯರ ಮಂಡಳಿಯು ಬಜಂದರ್ ಸ್ಥಿತಿಯ ಬಗ್ಗೆ ಮಂಗಳವಾರ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.

ನನ್ನ ಮಗುವಿನ ವಯಸ್ಸು ಕೂಡ ಅದೇ ಎಂದ 'ಮಹಾ ದಾನಿ' ಮಾತು ಕೇಳಿ

ಬಜಂದರ್ ತನ್ನ ಅಭಿಪ್ರಾಯ ಹೇಳಿದ್ದಾನೆ. ಆದರೆ ಆತನಿಗೆ ನೀಡಬಹುದಾದ ಅತ್ಯುತ್ತಮ ಪರಿಹಾರವನ್ನು ನಾವು ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ಯಾವಾಗ ಆತನ ಬಗ್ಗೆ ರಾಷ್ಟ್ರೀಯ- ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಯಿತೋ ಆಗ, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಆತನಿಗೆ ಉಚಿತ ಚಿಕಿತ್ಸೆ ಒದಗಿಸುವ ಭರವಸೆ ನೀಡಿದ್ದಾರೆ.

ಮೊದಲ ಸುತ್ತಿನ ಚಿಕಿತ್ಸೆ ಪಡೆಯುವಾಗ ಆಸ್ಪತ್ರೆಯ ಖಾಸಗಿ ವಿಭಾಗದಲ್ಲಿ ಸುಮಾರು ಎರಡು ವರ್ಷಗಳ ಕಾಲ ಬಜಂದರ್ ದಾಖಲಾಗಿದ್ದ. ಇಡೀ ವಿಶ್ವದಲ್ಲಿ ಈ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಆರಕ್ಕಿಂತ ಸ್ವಲ್ಪ ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ. ಎರಡು ವರ್ಷದ ಹಿಂದೆ ಇದೇ ಕಾಯಿಲೆಯಿಂದ ಬಳಲುತ್ತಿದ್ದ ಬಾಂಗ್ಲಾದೇಶಿ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಲಾಗಿತ್ತು.

ಶಸ್ತ್ರಚಿಕಿತ್ಸೆ ಯಶಸ್ವಿ ಆಗಿದೆ ಎಂದು ವೈದ್ಯರು ಘೋಷಣೆ ಕೂಡ ಮಾಡಿದ್ದರು. ಆದರೆ ಆಕೆಯ ತಂದೆ ನಂತರ ಹೇಳಿದ ಪ್ರಕಾರ, ತೊಗಟೆಯಂಥ ಆ ಬೆಳವಣಿಗೆ ಹಿಂದಿಗಿಂತಲೂ ಬಹಳ ವೇಗವಾಗಿ ಆಗಲು ಆರಂಭಿಸಿತು. ಅನ್ಯ ಮಾರ್ಗವಿಲ್ಲದೆ ಚಿಕಿತ್ಸೆ ನಿಲ್ಲಿಸಿದ ಆ ಕುಟುಂಬ, ತನ್ನ ಹಳ್ಳಿಗೆ ಹಿಂತಿರುಗಿತು.

English summary
I asked doctors to cut off my hands, said by tree man syndrome patient Abul Bajandar on Monday. He is a Bangladeshi. Here is the complete details about him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X