ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನೀಗ ಅಧಿಕಾರದಲ್ಲಿಲ್ಲ, ಹೀಗಾಗಿ ನಾನು ಹೆಚ್ಚು ಅಪಾಯಕಾರಿ-ಇಮ್ರಾನ್ ಖಾನ್

|
Google Oneindia Kannada News

ಪಾಕಿಸ್ತಾನ, ಏಪ್ರಿಲ್ 12 : ನಾನೀಗ ಅಧಿಕಾರದಲ್ಲಿಲ್ಲ, ಹೀಗಾಗಿ ಈಗ ನಾನು ಹೆಚ್ಚು ಅಪಾಯಕಾರಿ ಅಂತ ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್‌ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಬುಧವಾರ ಪಾಕಿಸ್ತಾನದ ಪೇಶಾವರದಲ್ಲಿ ನಡೆದ ಬೃಹತ್ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಇಮ್ರಾನ್ ಖಾನ್‌ ನಾನು ಸರ್ಕಾರದ ಭಾಗವಾಗಿದ್ದಾಗ ಅಪಾಯಕಾರಿ ಆಗಿರಲಿಲ್ಲ. ಆದರೆ ಈಗ ಅಧಿಕಾರದಲ್ಲಿಲ್ಲ ಹೀಗಾಗಿ ಹೆಚ್ಚು ಅಪಾಯಕಾರಿ ಅಂತ ಹೇಳಿಕೆ ನೀಡಿದ್ದಾರೆ.

"ಆಮದು ಮಾಡಿಕೊಂಡ ಸರ್ಕಾರವನ್ನು ಒಪ್ಪಿಕೊಳ್ಳಲ್ಲ"

ಇದೇ ಸಂದರ್ಭದಲ್ಲಿ ಹೊಸದಾಗಿ ರಚನೆ ಆಗಿರುವ ಸರ್ಕಾರವನ್ನು ಇಮ್ರಾನ್ ಖಾನ್, ಆಮದು ಮಾಡಿಕೊಂಡ ಸರ್ಕಾರ ಎಂದು ಕರೆದಿದ್ದಾರೆ. ಅಲ್ಲದೆ ಈ ಸರ್ಕಾರವನ್ನ ನಾವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಪಾಕಿಸ್ತಾನದ ಜನರು ಸಹ ಈ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಲ್ಲೇ ತಿಳಿಯುತ್ತದೆ ಈ ಸರ್ಕಾರ ಆಮದು ಮಾಡಿಕೊಂಡ ಸರ್ಕಾರ ಅಂತ ಇಮ್ರಾನ್ ಖಾನ್ ಕಿಡಿಕಾರಿದ್ದಾರೆ. ಅಲ್ಲದೆ ದೇಶದಲ್ಲಿ ಪ್ರತಿ ಬಾರಿ ನಾಯಕರನ್ನು ಪದಚ್ಯುತಿಗೊಳಿಸದಾಗ ಜನರು ಸಂಭ್ರಮಾಚರಣೆ ಮಾಡಿದ್ದಾರೆ. ಆದರೆ ಈ ಬಾರಿ ನಾನು ಪದಚ್ಯುತಗೊಂಡಾಗ ಜನರು ಸಂಭ್ರಮಿಸಿಲ್ಲ, ಬದಲಾಗಿ ನನ್ನನ್ನ ಬೆಂಬಲಿಸಿ ಪಾಕಿಸ್ತಾನದಾದ್ಯಂತ ಪ್ರತಿಭಟನೆ, ಮೆರವಣಿಗೆ, ಜಾಥಾಗಳನ್ನ ಮಾಡಿದ್ದಾರೆ ಅಂತ ಹೇಳಿದ್ದಾರೆ.

I Am Not in Power, so I Am More Dangerous: Pakistan Ex PM Imran Khan

ಇನ್ನು ಪಾಕಿಸ್ತಾನದಲ್ಲಿ ನಮ್ಮ ಸರ್ಕಾರವನ್ನ ಕೆಳಗಿಳಿಸುವಲ್ಲಿ ವಿದೇಶಿ ರಾಷ್ಟ್ರಗಳು ಕೂಡ ಭಾಗಿಯಾಗಿವೆ ಅಂತ ಆರೋಪಿಸಿದ್ದಾರೆ. ಅಲ್ಲದೆ ಅಮೆರಿಕವು ಡಕಾಯಿತರ ಹೊಸ ಸರ್ಕಾರವನ್ನ ನಮ್ಮ ಮೇಲೆ ಹೇರುವ ಮೂಲಕ ಪಾಕಿಸ್ತಾನವನ್ನ ಅವಮಾನಿಸಿದೆ. ಹೀಗಾಗಿ ಇದು 1970 ರಲ್ಲಿದ್ದ ಪಾಕಿಸ್ತಾನವಲ್ಲ ಇದು ಹೊಸ ಪಾಕಿಸ್ತಾನ ಅಂತ ಅಕ್ರೋಶ ವ್ಯಕ್ತಪಡಿಸಿದ್ದಾರೆ.

I Am Not in Power, so I Am More Dangerous: Pakistan Ex PM Imran Khan

ಮಧ್ಯರಾತ್ರಿಯಲ್ಲೂ ಸುಪ್ರೀಂಕೋರ್ಟ್ ಯಾಕೆ ತೆರೆಯಬೇಕಿತ್ತು?

ಕಳೆದ ವಾರ ಪಾಕಿಸ್ತಾನದ ವಿಧಾನಸಭೆಯಲ್ಲಿ ನಮ್ಮ ಸರ್ಕಾರ ಅವಿಶ್ವಾಸ ನಿರ್ಣಯ ಮಂಡನೆ ಅಂಗೀಕರಿಸುವ ವೇಳೆ ಸುಪ್ರೀಂಕೋರ್ಟ್‌ ಮಧ್ಯರಾತ್ರಿವರೆಗೂ ಏಕೆ ತೆರೆದಿತ್ತು ಅಂತ ಇಮ್ರಾನ್ ಖಾನ್ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಸ್ಪೀಕರ್ ಆಸಾದ್ ಕೈಸರ್ ಮಧ್ಯರಾತ್ರಿಯವರೆಗೂ ಮತದಾನ ನಡೆಸಲಿಲ್ಲ, ಬದಲಾಗಿ ಸುಪ್ರೀಂಕೋರ್ಟ್‌ ನಿರ್ದೇಶನದ ಹೊರತಾಗಿಯೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ಅಂದೇ ವಿಧಾನಸಭೆಯಲ್ಲಿ ಮತದಾನ ಮಾಡಬೇಕಾಯಿತು. ಪರಿಣಾಮ ಅವಿಶ್ವಾಸ ನಿರ್ಣಯದ ಮೂಲಕ ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿಯಬೇಕಾಯಿತು ಅಂತ ಇಮ್ರಾನ್ ಖಾನ್ ಅಸಮಾಧಾನ ಹೊರಹಾಕಿದ್ದಾರೆ.

English summary
former Pakistan prime minister Imran Khan warned that he would become more dangerous because im not in power
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X