• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Covid was man-made virus : ಕೊರೊನಾವೈರಸ್ ಎಂಬುದು ಮಾನವ ನಿರ್ಮಿತ ವೈರಸ್: ವುಹಾನ್ ವಿಜ್ಞಾನಿ

|
Google Oneindia Kannada News

ವುಹಾನ್, ಡಿಸೆಂಬರ್ 06: ಚೀನಾದ ವುಹಾನ್‌ನಲ್ಲಿರುವ ವಿವಾದಾತ್ಮಕ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ ಯುಎಸ್ ಮೂಲದ ವಿಜ್ಞಾನಿಯೊಬ್ಬರು ಕೊರೊನಾ ವೈರಸ್ ಎಂಬುದು ಮಾನವ ನಿರ್ಮಿತ ವೈರಸ್ ಎಂದು ದೂಷಿಸಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಸರ್ಕಾರಿ ಮತ್ತು ಅನುದಾನಿತ ಸಂಶೋಧನಾ ಕೇಂದ್ರವಾದ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಡಬ್ಲ್ಯುಐವಿ) ನಿಂದ ಕೋವಿಡ್ ಸೋರಿಕೆಯಾಗಿದೆ ಎಂದು ಬ್ರಿಟಿಷ್ ಪತ್ರಿಕೆ ದಿ ಸನ್‌ನಲ್ಲಿ ಯುಎಸ್ ಮೂಲದ ಸಂಶೋಧಕ ಆಂಡ್ರ್ಯೂ ಹಫ್ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂಯಾರ್ಕ್ ಪೋಸ್ಟ್ ವರದಿಯನ್ನು ಮಾಡಿದೆ.

ಭಾರತಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಭಾರತಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ

ಇತ್ತೀಚಿನ ಅವರು ಬರೆದಿರುವ ಪುಸ್ತಕ, "ದಿ ಟ್ರೂತ್ ಅಬೌಟ್ ವುಹಾನ್" ನಲ್ಲಿ, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹಫ್ ಚೀನಾದಲ್ಲಿ ಯುಎಸ್ ಸರ್ಕಾರವು ಕೊರೊನಾವೈರಸ್ಗಳಿಗೆ ಧನಸಹಾಯ ನೀಡಿದ್ದರಿಂದ ಸಾಂಕ್ರಾಮಿಕ ರೋಗವು ಉಂಟಾಗಿದೆ ಎಂದು ಹೇಳಿದ್ದಾರೆ. UK ಮೂಲದ ಟ್ಯಾಬ್ಲಾಯ್ಡ್ ದಿ ಸನ್‌ನಲ್ಲಿ ಹಫ್‌ನ ಪುಸ್ತಕದ ಆಯ್ದ ಭಾಗಗಳನ್ನು ಆಧರಿಸಿ ವರದಿ ಮಾಡಲಾಗಿದೆ.

ಹಫ್ ಪುಸ್ತಕದಲ್ಲಿ ಉಲ್ಲೇಖವಾಗಿರುವುದು ಏನು?

ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಹಫ್ ಅವರು ಸಾಂಕ್ರಾಮಿಕ ರೋಗಗಳನ್ನು ಅಧ್ಯಯನ ಮಾಡುವ ನ್ಯೂಯಾರ್ಕ್ ಮೂಲದ ಲಾಭರಹಿತ ಸಂಸ್ಥೆಯಾದ ಇಕೋಹೆಲ್ತ್ ಅಲೈಯನ್ಸ್‌ನ ಮಾಜಿ ಉಪಾಧ್ಯಕ್ಷರಾಗಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಚೀನಾದ ಗೇನ್-ಆಫ್-ಫಂಕ್ಷನ್ ಪ್ರಯೋಗಗಳನ್ನು ಅಸಮರ್ಪಕ ಭದ್ರತೆಯೊಂದಿಗೆ ನಡೆಸಲಾಯಿತು. ಇದರ ಪರಿಣಾಮವಾಗಿ ವುಹಾನ್ ಲ್ಯಾಬ್‌ನಲ್ಲಿ ಸೋರಿಕೆಯಾಗಿದೆ ಎಂದು ಹಫ್ ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.

ವುಹಾನ್ ಪ್ರಯೋಗಾಲಯದಲ್ಲಿ ಹುಟ್ಟಿಲ್ಲ ವೈರಸ್:

ಚೀನಾದ ವುಹಾನ್ ಲ್ಯಾಬ್ ಕೋವಿಡ್-19 ಸೋಂಕಿನ ಮೂಲ ಯಾವುದು ಎಂಬುದರ ಬಗ್ಗೆ ಬಿಸಿ ಬಿಸಿ ಚರ್ಚೆಗಳ ಕೇಂದ್ರವಾಗಿದೆ. ಚೀನಾದ ಸರ್ಕಾರಿ ಅಧಿಕಾರಿಗಳು ಮತ್ತು ಲ್ಯಾಬ್ ಉದ್ಯೋಗಿಗಳು ವೈರಸ್ ಅಲ್ಲಿ ಹುಟ್ಟಿಕೊಂಡಿದೆ ಎಂಬುದನ್ನು ನಿರಾಕರಿಸಿದ್ದಾರೆ. "ಸರಿಯಾದ ಜೈವಿಕ ಸುರಕ್ಷತೆ, ಜೈವಿಕ ಸುರಕ್ಷತೆಗೆ ಸಂಬಂಧಿಸಿದ ಅಪಾಯದ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ವಿದೇಶಿ ಪ್ರಯೋಗಾಲಯಗಳು ಸಾಕಷ್ಟು ನಿಯಂತ್ರಣ ಕ್ರಮಗಳನ್ನು ಹೊಂದಿಲ್ಲ. ಅಂತಿಮವಾಗಿ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಲ್ಯಾಬ್ ಸೋರಿಕೆಗೆ ಕಾರಣವಾಯಿತು," ಎಂದು ಆಂಡ್ರ್ಯೂ ಹಫ್ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ.

ಒಂದು ದಶಕಕ್ಕೂ ಹೆಚ್ಚು ಕಾಲ, ಸಂಸ್ಥೆಯು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್‌ಐಹೆಚ್) ನಿಂದ ಧನಸಹಾಯದೊಂದಿಗೆ ಬಾವಲಿಗಳಲ್ಲಿನ ಹಲವಾರು ಕೊರೊನಾವೈರಸ್‌ಗಳನ್ನು ಅಧ್ಯಯನ ಮಾಡುತ್ತಿದೆ. ವುಹಾನ್ ಲ್ಯಾಬ್‌ನೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಎನ್ಐಹೆಚ್ ಬಯೋಮೆಡಿಕಲ್ ಮತ್ತು ಸಾರ್ವಜನಿಕ ಆರೋಗ್ಯ ಸಂಶೋಧನೆಗೆ ಜವಾಬ್ದಾರರಾಗಿರುವ ಯುನೈಟೆಡ್ ಸ್ಟೇಟ್ಸ್ ಸರ್ಕಾರದ ಪ್ರಾಥಮಿಕ ಸಂಸ್ಥೆಯಾಗಿದೆ.

 How Covid-19 Was Man-Made Virus; Wuhan Lab Scientist Explained In New Book

2014 ರಿಂದ 2016 ರವರೆಗೆ ಇಕೋಹೆಲ್ತ್ ಅಲೈಯನ್ಸ್‌ನಲ್ಲಿ ಕೆಲಸ ಮಾಡಿದ ಶ್ರೀ ಹಫ್, ಲಾಭರಹಿತ ಸಂಸ್ಥೆಯು ವುಹಾನ್ ಲ್ಯಾಬ್‌ಗೆ "ಇತರ ಪ್ರಭೇದಗಳ ಮೇಲೆ ದಾಳಿ ಮಾಡಲು ಬ್ಯಾಟ್ ಕೊರೊನಾವೈರಸ್‌ಗಳನ್ನು ಇಂಜಿನಿಯರ್ ಮಾಡಲು ಅಸ್ತಿತ್ವದಲ್ಲಿರುವ ಅತ್ಯುತ್ತಮ ವಿಧಾನಗಳನ್ನು" ಅಭಿವೃದ್ಧಿಪಡಿಸಲು ಹಲವು ವರ್ಷಗಳವರೆಗೆ ಸಹಾಯ ಮಾಡಿದೆ ಎಂದು ಹೇಳಿದ್ದಾರೆ.

ಯುಎಸ್ ಸರ್ಕಾರದ ಬಗ್ಗೆಯೂ ಉಲ್ಲೇಖ:

"ಇದು ತಳೀಯವಾಗಿ ವಿನ್ಯಾಸಗೊಳಿಸಲಾದ ಏಜೆಂಟ್ ಎಂದು ಚೀನಾ ಮೊದಲ ದಿನದಿಂದ ತಿಳಿದಿತ್ತು" ಎಂದು ಹಫ್ ಬರೆದರು. "ಅಪಾಯಕಾರಿ ಜೈವಿಕ ತಂತ್ರಜ್ಞಾನವನ್ನು ಚೀನಿಯರಿಗೆ ವರ್ಗಾಯಿಸಲು ಯುಎಸ್ ಸರ್ಕಾರವೇ ಕಾರಣ ಎಂದು ಹೇಳಲಾಗಿದೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, "ನಾವು ಅವರಿಗೆ ಬಯೋವೀಪನ್ ತಂತ್ರಜ್ಞಾನವನ್ನು ಹಸ್ತಾಂತರಿಸುತ್ತಿದ್ದೆವು. ನಾನು ನೋಡಿದ ಸಂಗತಿಯಿಂದ ನಾನು ಭಯಭೀತನಾಗಿದ್ದೆ," ಎಂದು ಅವರು ದಿ ಸನ್‌ಗೆ ತಿಳಿಸಿದರು.

ಸಂಪನ್ಮೂಲಗಳ ಕೊರತೆಯ ಹೊರತಾಗಿಯೂ ತನ್ನ ಜಾಗತಿಕ ಸ್ಥಾನಮಾನವನ್ನು ಹೆಚ್ಚಿಸಲು ವೈಜ್ಞಾನಿಕ ಪ್ರಗತಿಯನ್ನು ಉತ್ಪಾದಿಸಲು ಈ ಸಂಶೋಧನಾ ಸಂಸ್ಥೆಯು ಆಡಳಿತಾರೂಢ ಚೀನೀ ಕಮ್ಯುನಿಸ್ಟ್ ಪಕ್ಷದಿಂದ ಅಪಾರ ಒತ್ತಡವನ್ನು ಹೊಂದಿದೆ.

English summary
How Covid-19 Was Man-Made Virus; Wuhan Lab Scientist Explained In New Book. ಕೋವಿಡ್-19 ಮಾನವ ನಿರ್ಮಿತ ವೈರಸ್ ಹೇಗೆ; ವುಹಾನ್ ಲ್ಯಾಬ್ ವಿಜ್ಞಾನಿ ಹೊಸ ಪುಸ್ತಕದಲ್ಲಿ ವಿವರಿಸಿದ್ದಾರೆ.Meta Key: Covid-19, Coronavirus, Coronavirus Was Man-Made Virus, How Covid-19 Was Man-Made Virus, Wuhan Lab Scientist, Wuhan Lab Scientist Explained In New Book,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X