Hong Kong: ಅಪಾರ್ಟ್‌ಮೆಂಟ್ ಬೆಂಕಿಗೆ ದಿಢೀರ್ 300 ಜನ ಬಲಿ?
ಮನುಷ್ಯರು ಎಷ್ಟು ಅಭಿವೃದ್ಧಿ ಹೊಂದಿದರೆ ಏನು, ಕೆಲವು ಸಂದರ್ಭದಲ್ಲಿ ಜೀವವನ್ನ ಉಳಿಸಿಕೊಳ್ಳುವುದು ಇನ್ನೂ ಕಲಿಯಲು ಆಗಿಲ್ಲ. ಇಷ್ಟೆಲ್ಲಾ ತಂತ್ರಜ್ಞಾನವು ಅಭಿವೃದ್ಧಿ ಆಗಿದ್ದರೂ, ಆಧುನಿಕತೆ ಇದ್ದರೂ ಪದೇ ಪದೇ ಅಗ್ನಿ ದುರಂತಗಳು ಸಂಭವಿಸುತ್ತಿವೆ. ಇದೇ ರೀತಿ ಇಲ್ಲೊಂದು ದೇಶ ಭೀಕರ ಅಗ್ನಿ ದುರಂತಕ್ಕೆ ಭಾರಿ ದೊಡ್ಡ ಪ್ರಮಾಣದಲ್ಲಿ ಜೀವ ಬಲಿ ನೀಡಬೇಕಾದ ಪರಿಸ್ಥಿತಿ ಬಂದಿದೆ. ಹತ್ತಾರು ಮಹಡಿ ಇರುವ ಅಪಾರ್ಟ್‌ಮೆಂಟ್‌ಗೆ ದಿಢೀರ್ ಬೆಂಕಿಯ ಕೆನ್ನಾಲಿಗೆ ಹಬ್ಬಿಕೊಂಡ ಪರಿಣಾಮ 300 ಜನರು ಬಲಿ ಆಗಿದ್ದಾರಾ?
ಹೌದು, ಈ ರೀತಿ ಭೀಕರ ದುರಂತ ಸಂಭವಿಸಿರುವುದು ಹಾಂಗ್‌ಕಾಂಗ್ ನೆಲದಲ್ಲಿ. ಬೆಂಕಿ ಕೆನ್ನಾಲಿಗೆ ಹಬ್ಬಿಕೊಂಡ ಪರಿಣಾಮ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್ ಬ್ಲಾಕ್‌ಗಳು ಇದ್ದ ಕಟ್ಟಡಗಳು ಧಗಧಗ ಹೊತ್ತಿ ಉರಿದಿವೆ. ದಿಢೀರ್ ಸಂಭವಿಸಿದ ಅಗ್ನಿ ದುರಂತದ ಕುರಿತು ಅರಿವೇ ಇಲ್ಲದಂತೆ ನಿವಾಸಿಗಳು ಒಳಗಡೆ ಸಿಲುಕಿ ಒದ್ದಾಡಿ ಹೋಗಿದ್ದಾರೆ. ತಕ್ಷಣ ಅಲ್ಲಿಗೆ ಓಡೋಡಿ ಬಂದ ಅಗ್ನಿಶಾಮಕ ಸಿಬ್ಬಂದಿ, ಪರಿಸ್ಥಿತಿ ಹಿಡಿತಕ್ಕೆ ತರಲು ಯತ್ನಿಸಿದ್ದಾರೆ. ಈ ನಡುವೆ ಸುಮಾರು 700 ಜನರನ್ನು ಹೊರಗೆ ಕರೆದುಕೊಂಡು ಬಂದು ರಕ್ಷಣೆ ಮಾಡಿದ್ದಾರೆ. ಇಷ್ಟಾದರೂ ಸಾವಿನ ಸಂಖ್ಯೆ ಮಾತ್ರ ದೊಡ್ಡದಾಗಿ ಬೆಳೆಯುತ್ತಲೇ ಇದೆ.

ಅಪಾರ್ಟ್‌ಮೆಂಟ್ ಬೆಂಕಿಗೆ 300 ಜನ ಬಲಿ?
ಇದೀಗ ಸಿಗುತ್ತಿರುವ ಮಾಹಿತಿ ಪ್ರಕಾರ ಹಾಂಗ್‌ಕಾಂಗ್ ಅಪಾರ್ಟ್‌ಮೆಂಟ್ ಅಗ್ನಿ ದುರಂತ ಸುಮಾರು 60 ಜನರನ್ನು ಬಲಿ ಪಡೆದಿದೆ. ಆದರೆ ಈ ದುರಂತದಲ್ಲಿ ನಾಪತ್ತೆ ಆಗಿರುವ ಜನರ ಸಂಖ್ಯೆ ಇನ್ನೂ 250ಕ್ಕೂ ಹೆಚ್ಚಾಗಿದೆ. ಈವರೆಗೂ ಮೃತದೇಹ ಸಿಕ್ಕಿರುವ ಜನರ ಲೆಕ್ಕ ಮಾತ್ರ ಹೇಳಲಾಗಿದ್ದು, 700 ಜನರನ್ನ ರಕ್ಷಣೆ ಮಾಡಿದ್ದರೂ ಸಾವಿನ ಸಂಖ್ಯೆ ಇನ್ನೂ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗುವ ಸಾಧ್ಯತೆ ದಟ್ಟವಾಗಿದೆ.
ಅಪಾರ್ಟ್‌ಮೆಂಟ್ ನಿವಾಸಿಗಳಲ್ಲಿ ಹೊಸ ಭಯ ಶುರು?
ಮತ್ತೊಂದು ಆತಂಕದ ಪ್ರಕಾರ ಈಗ ಸಾವಿನ ಸಂಖ್ಯೆ 300 ದಾಟಲಿದೆಯಾ? ಎಂಬ ಭಯ ಕೂಡ ಆವರಿಸಿದೆ. ತಮ್ಮ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡು ಜನರು ಕಣ್ಣೀರು ಹಾಕುತ್ತಿರುವ ದೃಶ್ಯ, ಎಂತಹವರ ಕಣ್ಣಲ್ಲೂ ನೀರು ಬರುವಂತೆ ಇತ್ತು. ಈ ಘಟನೆಯು ಇದೀಗ ಜಗತ್ತಿನ ಮೂಲೆ ಮೂಲೆಯಲ್ಲೂ ಬೃಹತ್ ವಸತಿ ಕಟ್ಟಡಗಳ ಬಗ್ಗೆ ಅನುಮಾನ ಮೂಡುವಂತೆ ಮಾಡುತ್ತಿದೆ. ಅಲ್ಲದೆ ಈ ಬಗ್ಗೆ ತನಿಖೆಗೆ ಕೂಡ ಆದೇಶ ನೀಡಲಾಗಿದೆ, ಭಾರಿ ದೊಡ್ಡ ಮಟ್ಟದಲ್ಲಿ ಪರಿಹಾರ ಘೋಷಣೆ ಆಗುವ ನಿರೀಕ್ಷೆ ಇದೆ.












Click it and Unblock the Notifications