ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಪಾನ್‌ನಲ್ಲಿ ಭಾರೀ ಹಿಮಪಾತ: 17 ಮಂದಿ ಸಾವು, 90 ಜನರಿಗೆ ಗಾಯ

|
Google Oneindia Kannada News

ಟೋಕಿಯೊ, ಡಿಸೆಂಬರ್ 26: ಜಪಾನ್‌ನಲ್ಲಿ ಭಾರೀ ಹಿಮಪಾತ ಸಂಭವಿಸಿದೆ. ಈ ಕಾರಣದಿಂದಾಗಿ, 17 ಮಂದಿ ಸಾವನ್ನಪ್ಪಿದ್ದಾರೆ ಮತ್ತು 90 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ನೂರಾರು ಮನೆಗಳ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಪ್ರಬಲ ಚಳಿಗಾಲದ ಆರಂಭವಾಗಿದ್ದರಿಂದ ಕಳೆದ ವಾರ ಉತ್ತರ ಜಪಾನ್‌ನಲ್ಲಿ ಭಾರೀ ಹಿಮ ಸುರಿದಿದೆ. ಹೆದ್ದಾರಿಗಳಲ್ಲಿ ನೂರಾರು ವಾಹನಗಳು ಸಿಕ್ಕಿಹಾಕಿ ಕೊಂಡಿವೆ. ಇದು ಔಷಧ ಹಾಗೂ ವಿತರಣಾ ಸೇವೆಗಳಿಗೆ ಅಡ್ಡಿಯಾಗಿದೆ. ಶನಿವಾರದ ವೇಳೆಗೆ 11 ಸಾವುಗಳಿಗೆ ಕಾರಣವಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.

Heavy snow in Japan leaves 17 dead, dozens injured

ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣಾ ಸಂಸ್ಥೆ ಪ್ರಕಾರ, ಕ್ರಿಸ್ಮಸ್ ವಾರಾಂತ್ಯದಲ್ಲಿ ಹೆಚ್ಚು ಹಿಮಪಾತವಾಗಿದೆ. ಸೋಮವಾರ ಬೆಳಿಗ್ಗೆ ಸತ್ತವರ ಸಂಖ್ಯೆಯನ್ನು 17 ಕ್ಕೆ ತಲುಪಿದೆ. ಗಾಯಗೊಂಡವರ ಸಂಖ್ಯೆ 93 ಕ್ಕೆ ಏರಿದೆ.

ಮೇಲ್ಛಾವಣಿಗಳಿಂದ ಹಿಮವನ್ನು ತೆಗೆಯುವಾಗ ಅವರಲ್ಲಿ ಹಲವರು ಬಿದ್ದಿದ್ದರು ಅಥವಾ ಛಾವಣಿಯ ಮೇಲೆ ಜಾರುವ ದಟ್ಟವಾದ ಹಿಮದ ರಾಶಿಗಳ ಕೆಳಗೆ ಹೂತುಹೋಗಿದ್ದರು.

ಹಿಮ ಪೀಡಿತ ಪ್ರದೇಶಗಳಲ್ಲಿನ ಹಿಮ ತೆಗೆಯುವ ಸಮಯದಲ್ಲಿ ಎಚ್ಚರಿಕೆ ವಹಿಸಬೇಕು ಮತ್ತು ಏಕಾಂಗಿಯಾಗಿ ಕಾರ್ಯದಲ್ಲಿ ತೊಡಗಿಕೊಳ್ಳಬಾರದು ಎಂದು ಮುನ್ಸಿಪಲ್ ಕಚೇರಿ ಸಿಬ್ಬಂದಿ ನಿವಾಸಿಗಳಿಗೆ ಮನವಿ ಮಾಡಿದ್ದಾರೆ.

Heavy snow in Japan leaves 17 dead, dozens injured

ಟೋಕಿಯೊದ ಉತ್ತರಕ್ಕೆ ಸುಮಾರು 300 ಕಿಲೋಮೀಟರ್ ದೂರವಿರುವ ಯಮಗಟಾ ಪ್ರದೇಶದ ನಾಗೈ ನಗರದಲ್ಲಿ ದಟ್ಟವಾದ ಹಿಮದ ರಾಶಿ ಬಿದ್ದಿದೆ. ಈ ಹಿಮ ರಾಶಿಯ ಕೆಳಗೆ ಸಿಲುಕಿ 70 ವಯಸ್ಸಿನ ಮಹಿಳೆಯೊಬ್ಬರು ಅಸುನಿಗೀದ್ದಾರೆ ಎಂದು ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

ಅಮೆರಿಕದಲ್ಲಿಯೂ ಹಿಮ ದುರಂತ

ಅಮೆರಿಕದಲ್ಲಿಯೂ ಭಾರೀ ಚಳಿಗಾಲ ಆರಂಭವಾಗಿದೆ. ಆ ಹಿನ್ನೆಲೆಯಲ್ಲಿ ವ್ಯಾಪಕವಾಗಿ ಹಿಮ ಸುರಿಯುತ್ತಿದೆ. ಇದೇ ವೇಳೆ, ಚಂಡಮಾರತವೂ ಬೀಸುತ್ತಿರುವುದರಿಂದ 31 ಜನರು ಸಾವಿಗೀಡಾಗಿದ್ದಾರೆ. ಲಕ್ಷಾಂತರ ಜನರು ಸಂಪರ್ಕವನ್ನು ಕಡಿದುಕೊಂಡಿದ್ದಾರೆ. ವಿದ್ಯುತ್‌ ಕಡಿತವಾಗಿದೆ. ವಿಮಾನ ವ್ಯವಸ್ಥೆ ಸಂಪೂರ್ಣ ನಿಂತಿದೆ ಎಂದು ವರದಿಯಾಗಿದೆ. ಅದರಲ್ಲೂ ನ್ಯೂಯಾರ್ಕ್‌ ಸುತ್ತಲಿನ ಪ್ರದೇಶದಲ್ಲಿ ಭಾರೀ ಹಿಮ ಬಿದ್ದಿದ್ದರಿಂದ ಸಾವು ನೋವುಗಳು ಹೆಚ್ಚಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುಎಸ್‌ನ ಪೂರ್ವ ರಾಜ್ಯಗಳಲ್ಲಿ ಸುಮಾರು 2,00,000 ಮನೆಗಳು ವಿದ್ಯುತ್‌ ಸಂಪರ್ಕವನ್ನು ಕಡಿದುಕೊಂಡಿವೆ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಈ ಭಾಗಗಳಲ್ಲಿ ಯುಎಸ್‌ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿದೆ.

English summary
Heavy snow in large swaths of Japan has killed 17 and injured more than 90 people and left hundreds of homes without power, disaster management officials said Monday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X