ವಿಶ್ವ ಸೃಷ್ಟಿಸಿದ ದೇವಕಣ ವಿಶ್ವವನ್ನೇ ನಾಶ ಮಾಡಬಲ್ಲದೆ?
ಲಂಡನ್, ಸೆ. 9 : ವಿಶ್ವ ಸೃಷ್ಟಿಸಿದ ದೇವಕಣ ಪ್ರಪಂಚವನ್ನೇ ನಾಶ ಮಾಡಬಲ್ಲದೆ? ಹೀಗೊಂದು ಪ್ರಶ್ನೆ ಉದ್ಭವವಾಗಿದೆ. ಖ್ಯಾತ ಖಗೋಳ ಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಇಂಥದ್ದೊಂದು ಆತಂಕಕಾರಿ ಮಾಹಿತಿಯನ್ನು ಹೊರಗೆಡವಿದ್ದಲ್ಲದೇ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಪುಸ್ತಕವೊಂದಕ್ಕೆ ಮುನ್ನುಡಿ ಬರೆದು ಮಾತನಾಡಿದ ಅವರು, ದೇವಕಣ ಪ್ರಪಂಚವನ್ನೇ ನಾಶ ಮಾಡುವ ಶಕ್ತಿ ಹೊಂದಿದೆ ಎಂದಿದ್ದಾರೆ.

ಶಕ್ತಿಯ ವಿಶ್ವರೂಪ ಸಮಯದಲ್ಲಿ ದೇವಕಣ ನಶ್ವರವಾಬಲ್ಲದು. ಅಸ್ತಿತ್ವದಲ್ಲಿರುವ ಪ್ರತಿಯೊಂದು ವಸ್ತುವಿಗೂ ಆಕಾರ ಮತ್ತು ಗಾತ್ರ ಒದಗಿಸಿರುವ ದೇವಕಣಗಳಲ್ಲಿ ಅತಿಹೆಚ್ಚಿನ ಶಕ್ತಿ ತುಂಬಿಕೊಂಡರೆ ಅದು ಸ್ವತಃ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದು 72 ವರ್ಷದ ವಿಜ್ಞಾನಿ ವಿವರಿಸಿದ್ದಾರೆ.
ಇದೆಲ್ಲದರ ಪರಿಣಾಮ ನಿರ್ವಾತ ಪರಿಸ್ಥಿತಿ ಛಿದ್ರಗೊಂಡು ಅವಕಾಶ ಮತ್ತು ಸಮಯ ಕುಸಿಯಲು ಕಾರಣವಾಗುತ್ತದೆ. ದೇವಕಣದ ಶಕ್ತಿ ಚಿಂತೆಗೀಡು ಮಾಡುವ ಲಕ್ಷಣ ಹೊರಹಾಕಿದೆ ಎಂದು ವಿವರಿಸಿದ್ದಾರೆ.(ಬ್ರಹ್ಮ ರಹಸ್ಯ ಬಯಲು : ಸೃಷ್ಟಿಗೆ ಕಾರಣವಾದ ದೇವಕಣ ಪತ್ತೆ)
100 ಶತಕೋಟಿ ಗಿಗಾ ಎಲೆಕ್ಟ್ರಾನ್ ವೋಲ್ಟ್‌ಗಿಂತ ಹೆಚ್ಚಿನ ಶಕ್ತಿಯಲ್ಲಿ ದೇವಕಣಗಳು ಬಾರಿ ಶಕ್ತಿ ಪಡೆದುಕೊಳ್ಳುತ್ತವೆ. ನಿರ್ವಾತದ ವೇಗ ಬೆಳಕಿನ ವೇಗಕ್ಕಿಂತ ಹೆಚ್ಚಿನ ಉತ್ಕರ್ಷ ಪಡೆದುಕೊಳ್ಳುತ್ತದೆ. ಇದು ಯಾವುದೇ ಸಂದರ್ಭದಲ್ಲಿ ಘಟಿಸಬಹುದು. ನಮಗೆ ಇದನ್ನು ನೋಡಲು ಕೂಡ ಅವಕಾಶ ಸಿಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.('God Particle' ಎಂಬ ಅರ್ಥವಿಲ್ಲದ ಪದ)
ಸದ್ಯದಲ್ಲಿ ಈ ವಿದ್ಯಮಾನ ನಡೆಯುವ ಸಾಧ್ಯತೆ ತುಂಬಾ ಕಡಿಮೆ ಇದೆ. ಆದರೆ ಅತಿ ಹೆಚ್ಚಿನ ಶಕ್ತಿ ಸಂಚಯವಾದಾಗ ದೇವಕಣ ಅಸ್ಥಿರಗೊಳ್ಳುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಏನಿದು ದೇವಕಣ?
ಯುರೋಪ್ ಪರಮಾಣು ಸಂಶೋಧನಾ ಸಂಸ್ಥೆಯು ಜಗತ್ತಿನ ಅತಿ ದೊಡ್ಡ ಭೌತ ಕಣ ವಿಜ್ಞಾನ ಪ್ರಯೋಗಾಲಯದಲ್ಲಿ ದೇವಕಣವನ್ನು ಶೋಧಿಸಿತ್ತು.
2012 ರ ಜೂನ್‌ದಲ್ಲಿ ನಡೆದ ಸಂಶೋಧನೆ ವಿಜ್ಞಾನದ ಇತಿಹಾಸದಲ್ಲೊಂದು ಮೈಲುಗಲ್ಲಾಯಿತು.(ದೈವಕಣದಲ್ಲಿ ದೈವತ್ವವನ್ನು ಹುಡುಕುತ್ತಾ...)
ಫ್ರಾನ್ಸ್ ಗಡಿ ಪ್ರದೇಶದಲ್ಲಿ ಬೃಹತ್ ಹ್ಯಾಡ್ರನ್ ಕೊಲೈಡರ್(Large Hadron Collider (LHC) ) ನಲ್ಲಿ ಅತ್ಯಧಿಕ ಶಕ್ತಿಯುಳ್ಳ ಪ್ರೋಟಾನ್ ಗಳನ್ನು ಡಿಕ್ಕಿ ಹೊಡೆಸಿ ದೇವಕಣದ ಇರುವಿಕೆಯ ಬಗ್ಗೆ ಖಾತ್ರಿ ಪಡಿಸಿಕೊಳ್ಳಲಾಗಿತ್ತು.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications