ಆತ ಹತ್ಯೆಗೈಯುವ ಮುನ್ನ ಕೂಗಿದ್ದು 'ಅಲ್ಲಾಹು ಅಕ್ಬರ್'!

Posted By:
Subscribe to Oneindia Kannada

ಹ್ಯಾಂಬರ್ಗ್, ಜುಲೈ 28 : ಜರ್ಮನಿಯ ಹ್ಯಾಂಬರ್ಗ್ ನಲ್ಲಿರುವ ಸೂಪರ್ ಮಾರ್ಕೆಟ್ ನಲ್ಲಿ ಓರ್ವ 'ಅಲ್ಲಾಹು ಅಕ್ಬರ್' ಎಂದು ಕೂಗುತ್ತ ಚೂರಿಯಿಂದ ಚುಚ್ಚಿ ಒಬ್ಬನನ್ನು ಹತ್ಯೆಗೈದಿದ್ದಾನೆ.

ಶುಕ್ರವಾರ ಈ ದಾಳಿ ನಡೆದಿದ್ದು, ಹತ್ಯೆಗೈರುವವನನ್ನು ಪೊಲೀಸರು ಬಂಧಿಸಿದ್ದಾರೆ. ಆ ವ್ಯಕ್ತಿ ಏಕೆ ದಾಳಿ ಮಾಡಿದ, ಹತ್ಯೆಯ ಹಿಂದಿನ ಹುನ್ನಾರವೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಸೂಪರ್ ಮಾರ್ಕೆಟ್ ಪ್ರವೇಶಿಸಿದ ಕೊಲೆಗಡುಕ ಗ್ರಾಹಕರ ಮೇಲೆ ಇದ್ದಕ್ಕಿದ್ದಂತೆ ದಾಳಿ ನಡೆಸಿದ. ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಅಸುನೀಗಿದ್ದಾರೆ. ಈ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Hamburg knife attack: One dead, several wounded

ಕೊಲೆಗಡುಕನ ವಿವರ ಇನ್ನೂ ತಿಳಿದುಬಂದಿಲ್ಲ. ದಾಳಿ ನಡೆಸಿದ ಕೂಡಲೆ ಆತ ಸೂಪರ್ ಮಾರ್ಕೆಟ್ಟಿನಿಂದ ಹೊರ ಓಡಿಹೋಗಿದ್ದಾನೆ. ಆದರೆ, ಪ್ರತ್ಯಕ್ಷದರ್ಶಿಗಳು ಆತನನ್ನು ಬೆನ್ನತ್ತಿ, ನಂತರ ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ಆತನನ್ನು ಬೆನ್ನತ್ತಿ ಯಶಸ್ವಿಯಾಗಿ ಹಿಡಿದಿದ್ದಾರೆ. ರಕ್ತಸಿಕ್ತವಾಗಿದ್ದ ಬ್ಯಾಗೊಂದನ್ನು ಆತ ತನ್ನ ತಲೆಯ ಮೇಲಿ ಇಟ್ಟುಕೊಂಡಿದ್ದ ಚಿತ್ರವನ್ನು ಜರ್ಮನ್ ಡೈಲಿ ಬಿಲ್ಡ್ ಪತ್ರಿಕೆ ಪ್ರಕಟಿಸಿದೆ.

ಈ ದಾಳಿಯಲ್ಲಿ ಸತ್ತವರ ಮತ್ತು ಗಾಯಗೊಂಡವರ ವಿವರಗಳು ಕೂಡ ತಿಳಿದುಬರಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

Read in English: Hamburg knife attack
English summary
A knife wielding man killed one person and wounded several others in a supermarket in Hamburg, Germany, on Friday before being detained by police.
Please Wait while comments are loading...