ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ದಾಳಿಯ ಸಂಚುಕೋರ ಹಫೀಜ್ ಗೃಹ ಬಂಧನ ಮತ್ತೆ ವಿಸ್ತರಣೆ

|
Google Oneindia Kannada News

ಲಾಹೋರ್‌, ಅಕ್ಟೋಬರ್ 19: ಮುಂಬೈ ದಾಳಿಯ ಪ್ರಮುಖ ಸಂಚುಕೋರ, ಜಮಾತ್ ಉದ್ ದಾವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ ಗೃಹ ಬಂಧನ ಅವಧಿಯನ್ನು ವಿಸ್ತಾರಿಸಲಾಗಿದೆ.

ಪಾಕಿಸ್ತಾನ ಪಂಜಾಬ್‌ ಪ್ರಾಂತ್ಯದ ಲಾಹೋರ್‌ ಹೈಕೋರ್ಟ್‌ ನ್ಯಾಯಾಂಗ ಪರಿಶೀಲನಾ ಮಂಡಳಿ ಗುರುವಾರ ಹಫೀಜ್ ಗೃಹ ಬಂಧನ ಅವಧಿಯನ್ನು 30 ದಿನಗಳ ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದು, ಅಕ್ಟೋಬರ್ 24ರಿಂದ ಈ ಆದೇಶ ಅನ್ವಯವಾಗಲಿದೆ.

ಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್ ಗೃಹ ಬಂಧನ ವಿಸ್ತರಣೆಮುಂಬೈ ದಾಳಿಯ ಸಂಚುಕೋರ ಹಫೀಜ್ ಸಯೀದ್ ಗೃಹ ಬಂಧನ ವಿಸ್ತರಣೆ

Hafiz Saeed's house arrest extended for 30 days

ಆತನ ನಾಲ್ವರು ಸಹಚರರ ಬಂಧನ ವಿಸ್ತರಣೆ ಮನವಿಯನ್ನು ಲಾಹೋರ್‌ ಹೈಕೋರ್ಟ್‌ ತಿರಸ್ಕರಿಸಿದೆ. ಭಯೋತ್ಪಾದನಾ ನಿಗ್ರಹ ಕಾಯ್ದೆ(ಎಟಿಎ) ಅಡಿಯಲ್ಲಿ ಹಫೀಜ್ ನನ್ನು ಬಂಧಿಸಲಾಗಿತ್ತು.

ಕಳೆದ ಜನವರಿ 31ರಿಂದ ಗೃಹ ಬಂಧನದಲ್ಲಿ ಇರಿಸಲಾಗಿದೆ. ಆಸಗ್ಟ್ ನಲ್ಲೂ ಸಹ ಎರಡು ತಿಂಗಳ ಕಾಲ ಗೃಹ ಬಂಧನ ಅವಧಿಯನ್ನು ವಿಸ್ತರಿಸಲಾಗಿತ್ತು. ಇದೀಗ ಮತ್ತೆ ಹಫೀಜ್ ಸಯೀದ್ ಗೃಹ ಬಂಧನವನ್ನು ವಿಸ್ತರಿಸಲಾಗಿದ್ದು, ಇದು ಮೂರನೇ ಬಾರಿಯಾಗಿದೆ.

English summary
Mumbai attack mastermind and banned Jamaat-ud-Dawah chief Hafiz Saeed's house arrest was extended on Thursday for another 30 days by a Judicial Review Board of Pakistan's Punjab province.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X