ನನ್ನ ಬಂಧನಕ್ಕೆ ಮೋದಿ-ಟ್ರಂಪ್ ಗೆಳೆತನವೇ ಕಾರಣ: ಹಫೀಜ್ ಸಯೀದ್
ಕರಾಚಿ, ಜನವರಿ 31: ಮುಂಬೈ ಭಯೋತ್ಪಾದನೆ ದಾಳಿಯ ಪ್ರಮುಖ ಆರೋಪಿ ಮತ್ತು ಲಷ್ಕರ್-ಎ-ತೊಯ್ಬಾ ಉಗ್ರಗಾಮಿ ಸಂಘಟನೆ ಮುಖಂಡ ಹಫೀಜ್ ಸಯೀದ್ ಅವರನ್ನು ಗೃಹಬಂದನದಲ್ಲಿರಿಸಲಾಗಿದೆ. ತಮ್ಮ ಈ ಸ್ಥಿತಿಗೆ ಮೋದಿ-ಟ್ರಂಪ್ ಗೆಳೆತನವೇ ಕಾರಣ ಎಂದು ಹಫೀಜ್ ಸಯೀದ್ ದೂರಿದ್ದಾರೆ.
ಹಫೀಜ್ ಅವರನ್ನು ಆರು ತಿಂಗಳ ಕಾಲ ಗೃಹಬಂಧನದಲ್ಲಿಟ್ಟಿದೆ. ಇನ್ನೂ ನಾಲ್ವರು ಕುಖ್ಯಾತ ಭಯೋತ್ಪಾದಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನ ಸರ್ಕಾರ ಘೋಷಿಸಿದೆ.

ಫಲ್ಹಾ-ಎ-ಇನ್ಸಾನಿಯತ್ ಫೌಂಡೇಷನ್ ಮತ್ತು ಜಮಾತ್-ಉದ್-ದವಾ ವಿರುದ್ಧ ಕ್ರಮ ಕೈಗೊಳ್ಳಲು ಜ.27ರಂದು ಪಾಕಿಸ್ತಾನ ಗೃಹ ಸಚಿವಾಲಯದ ಆದೇಶದಂತೆ ಸಯೀದ್ ನನ್ನು ಆರು ತಿಂಗಳ ಕಾಲ ಗೃಹಬಂಧನದಲ್ಲಿಡಲಾಗಿದೆ.ಅಬುಲ್ಲಾ ಉಬೈದ್, ಜಾಫರ್ ಇಕ್ಬಾಲ್, ಅಬ್ದುರ್ ರೆಹಮಾನ್ ಅಬಿದ್ ಮತ್ತು ಖಾಜಿ ಕಾಶಿಫ್ ನಿಯಾಜ್ ಎಂಬ ನಾಲ್ವರು ಕುಖ್ಯಾತ ಉಗ್ರರನ್ನೂ ಬಂಧಿಸಲಾಗಿದೆ.












Click it and Unblock the Notifications