ಇನ್ಫಿ, ಟಿಸಿಎಸ್ ವಿರುದ್ಧ ತನಿಖೆಗೆ ಮುಂದಾದ ಅಮೆರಿಕ

ನ್ಯೂಯಾರ್ಕ್, ಜೂ. 12 : ಭಾರತದ ಎರಡು ಪ್ರಮುಖ ಸಾಫ್ಟ್ ವೇರ್ ಕಂಪನಿಗಳು ಅಮೆರಿಕ ಸರ್ಕಾರದ ತನಿಖೆ ಎದುರಿಸುವಂತೆ ಆಗಿದೆ. ಹೆಚ್ 1-ಬಿ ವೀಸಾ ಕಾಯ್ದೆಯನ್ನು ಇನ್ಫೋಸಿಸ್ ಮತ್ತು ಟಿಸಿಎಸ್ ಉಲ್ಲಂಘಿಸಿದೆ ಎಂದಿರುವ ಅಮೆರಿಕ ಸರ್ಕಾರ ತನಿಖೆ ಆರಂಭ ಮಾಡಿದೆ.

ದಕ್ಷಿಣ ಕ್ಯಾಲಿಫೋರ್ನಿಯಾದ ಎಡಿಸನ್ ವಿದ್ಯುತ್ ಕಂಪನಿಯೊಂದಿಗೆ ಇನ್ಫೋಸಿಸ್ ಮತ್ತು ಟಿಸಿಎಸ್ ಕಂಪೆನಿಗಳು ಗುತ್ತಿಗೆ ಒಪ್ಪಂದ ಮಾಡಿಕೊಂಡಿದ್ದು, ವಿದೇಶಿ ತಾಂತ್ರಿಕ ಕೆಲಸಗಾರರ ವೀಸಾ ನಿಯಮವನ್ನು ಉಲ್ಲಂಘಿಸಿರುವ ಸಾಧ್ಯತೆ ಕಂಡುಬಂದಿದೆ ಎಂದು ಅಲ್ಲಿನ ಕಾರ್ಮಿಕ ಇಲಾಖೆ ಹೇಳಿದೆ. ಈ ಬಗ್ಗೆ ತನಿಖೆ ಆರಂಭ ಮಾಡಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.[ಟೆಕ್ಕಿಗಳ ಅಕೌಂಟಿಗೆ ಕನ್ನ ಹಾಕಿದ ಐನಾತಿ ಹ್ಯಾಕರ್!]

tcs

ವಿದ್ಯುತ್ ಕಂಪನಿಯು ಇತ್ತೀಚೆಗೆ 500ಕ್ಕೂ ಅಧಿಕ ಕೆಲಸಗಾರರನ್ನು ಸೇವೆಯಿಂದ ವಜಾಗೊಳಿಸಿತ್ತು. ಆದರೆ ಅವರನ್ನು ತರಬೇತಿ ಉದ್ದೇಶಕ್ಕೆ ತಾತ್ಕಾಲಿಕ ವೀಸಾದಡಿ ಕರೆಸಿಕೊಂಡಿರುವ ಇನ್ಫಿ ಮತ್ತು ಟಿಸಿಎಸ್ ಭಾರತೀಯ ನೌಕರರಿಗೆ ತರಬೇತಿ ನೀಡುವಂತೆ ತಿಳಿಸಿತ್ತು.

ಪ್ರಖ್ಯಾತ ಮನರಂಜನಾ ಕಂಪನಿ ವಾಲ್ಟ್ ಡಿಸ್ನಿಯಿಂದ ಅಮೆರಿಕದ ಪ್ರಜೆಗಳನ್ನು ಕಿತ್ತುಹಾಕಿ ಭಾರತೀಯರಿಗೆ ಅವಕಾಶ ಮಾಡಿಕೊಟ್ಟ ಸಂಗತಿ ಬಿತ್ತರವಾದ ಕೆಲ ದಿನಗಳ ನಂತರ ಅಮೆರಿಕ ಸರ್ಕಾರ ತನಿಖೆಗೆ ಮುಂದಾಗಿದೆ.[ವಾಲ್ಟ್ ಡಿಸ್ನಿ: 250 ಅಮೆರಿಕನ್ನರ ಜಾಗಕ್ಕೆ ಭಾರತೀಯರು]

ಒಟ್ಟಿನಲ್ಲಿ ಭಾರತೀಯ ಮೂಲದ ಎರಡು ಕಂಪನಿಗಳು ತನಿಖೆ ಎದಿರಿಸುವಂಥಾಗಿದ್ದು, ಅತ್ತ ಭಾರತೀಯರನ್ನು ನೇಮಕ ಮಾಡಿಕೊಂಡ ವಾಲ್ಟ್ ಡಿಸ್ನಿ ಗೂ ಆತಂಕ ತಟ್ಟಿದರೆ ಆಶ್ಚರ್ಯವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+