ಎಚ್1ಬಿ ವೀಸಾದಾರರ ಮೇಲೆ ಡೊನಾಲ್ಡ್ ಟ್ರಂಪ್ ಸರ್ಜಿಕಲ್ ಸ್ಟ್ರೈಕ್!

Posted By:
Subscribe to Oneindia Kannada

ವಾಷಿಂಗ್ಟನ್, ಜನವರಿ 31: ಅಮೆರಿಕದಲ್ಲಿ ಸೇವೆ ಸಲ್ಲಿಸುವ ವಿದೇಶಿ ಐಟಿ ತಂತ್ರಜ್ಞರಿಗೆ ಅಲ್ಲಿನ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ 1ಬಿ ವೀಸಾ ಬಿಸಿ ಮುಟ್ಟಿಸಿದ್ದಾರೆ.

ಎಚ್ 1 ಬಿ ವೀಸಾ ಪಡೆಯುವ ಉದ್ಯೋಗಿಯ ವಾರ್ಷಿಕ ಕನಿಷ್ಠ ವೇತನದ ಪ್ರಮಾಣವನ್ನು ಈಗಿರುವುದಕ್ಕಿಂತ ದುಪ್ಪಟ್ಟು ಅಂದರೆ, ವಾರ್ಷಿಕ 1,30,000 ಅಮೆರಿಕನ್ ಡಾಲರ್ (ಸುಮಾರು 88 ಲಕ್ಷ ರು.) ಹೆಚ್ಚಿಸಲಾಗಿದ್ದು, ಈ ಮೊತ್ತದ ಸಂಬಳವನ್ನು ಅಮೆರಿಕದಲ್ಲಿ ಪಡೆಯುವಂಥ ಐಟಿ ತಂತ್ರಜ್ಞನಿಗೆ ಮಾತ್ರ ಎಚ್1 ಬಿ ವೀಸಾ ನೀಡಬೇಕೆಂದು ಮಸೂದೆಯಲ್ಲಿ ಶಿಫಾರಸು ಮಾಡಲಾಗಿದೆ.[ಎಚ್ 1 ಬಿ ಎಫೆಕ್ಟ್: ಇನ್ಫಿ,ವಿಪ್ರೋ, ಟಿಸಿಎಸ್ ಷೇರು ಕುಸಿತ]

H-1B visa reform bill introduced in US House of Representatives

ಈ ಮಸೂದೆಯು ಅಲ್ಲಿನ ಸಂಸತ್ತಿನಲ್ಲಿ ಅಂಗೀಕೃತಗೊಂಡರೆ ಭಾರತೀಯ ಐಟಿ ವಲಯಕ್ಕೆ ಅದು ಭಾರೀ ದೊಡ್ಡ ಹೊಡೆತ ನೀಡಲಿದೆ ಎಂದು ಹೇಳಲಾಗಿದೆ. ಯಾವ ಕಂಪನಿಯು ಇಷ್ಟು ದೊಡ್ಡ ಮೊತ್ತದ ಸಂಬಳವನ್ನು ತನ್ನ ನೌಕರಸ್ಥರಿಗೆ ನೀಡಲು ಸಿದ್ಧವಿದೆಯೋ ಆ ಕಂಪನಿಯ ಉದ್ಯೋಗಿಗಳಿಗೆ ಅಮೆರಿಕದಲ್ಲಿ ಕೆಲಸ ಮಾಡಲು ಬೇಕಾಗುವ ಎಚ್ 1 ಬಿ ವೀಸಾಕ್ಕಾಗಿ ಮೊದಲ ಆದ್ಯತೆ ಸಿಗಲಿದೆ.

ಇದರಿಂದ, ವಾರ್ಷಿಕವಾಗಿ ಅಮೆರಿಕಕ್ಕೆ ಸಾಗುವ ಐಟಿ ಉದ್ಯೋಗಿಗಳ ಸಂಖ್ಯೆ ಗಣನೀಯ ಮಟ್ಟದಲ್ಲಿ ಇಳಿಯಲಿದೆ ಎಂದು ಹೇಳಲಾಗಿದೆ. ಆದರೆ, ಉದ್ಯೋಗಿಗಳ ಪಾಲಿಗೆ ಇದೊಂದು ವರದಾನವೆಂದೇ ಹೇಳಲಡ್ಡಿಯಿಲ್ಲ. ತಮ್ಮಲ್ಲಿ ಉತ್ಕೃಷ್ಟ ಪ್ರತಿಭೆಯಿದ್ದು, ಕಂಪನಿಗೆ ಅನಿವಾರ್ಯ ಎನ್ನುವಂಥ ಉದ್ಯೋಗಿಗಳು ಹೆಚ್ಚಿನ ವಾರ್ಷಿಕ ವೇತನ ಪಡೆಯಬಹುದಾಗಿದೆ.

ಅತ್ತ, ಅಮೆರಿಕ ಸಂಸತ್ತಿನಲ್ಲಿ ಟ್ರಂಪ್ ಸರ್ಕಾರವು ಈ ಮಸೂದೆಯನ್ನು ಮಂಡಿಸುತ್ತಿದ್ದಂತೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲವಾಗಿದ್ದು, ವಿಪ್ರೋ ಸೇರಿದಂತೆ ಹಲವಾರು ದೈತ್ಯ ಕಂಪನಿಯ ಷೇರುಗಳು ಪಾತಾಳಕ್ಕೆ ಕುಸಿದಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In what will be a big blow to IT firms in India, a legislation was introduced in the US House of Representatives today mandating that the minimum salary of H-1B visa holders be doubled to $130,000.
Please Wait while comments are loading...