ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ರಚನೆ ಕಾರಣ ಪತ್ತೆ ಹಚ್ಚಿದ ವಿಜ್ಞಾನಿಗಳು

|
Google Oneindia Kannada News

ಜರುಸುಲೆಮ್, ಫೆಬ್ರವರಿ, 12: ಸಾವಿರಾರು ವರ್ಷಗಳ ಕುತೂಹಲಕ್ಕೆ ವಿಜ್ಞಾನಿಗಳು ತೆರೆ ಎಳೆದಿದ್ದಾರೆ. ವಿಶ್ವದ ರಚನೆಗೆ ಕಾರಣವಾಗಿದ್ದ ಗುರುತ್ವಾಕರ್ಷಣೆ ಅಲೆಯನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಇದನ್ನು ಐನ್‌ಸ್ಟೇನ್ ಸಿದ್ಧಾಂತಕ್ಕೆ ಸಿಕ್ಕ ಎರಡನೇ ಜಯ ಎಂದು ವಿಶ್ಲೇಷಣೆ ಮಾಡಬಹುದು. 1919ರಲ್ಲಿ ಪೂರ್ಣ ಸೂರ್ಯ ಗ್ರಹಣದ ಸಮಯದಲ್ಲಿ ಗುರುತ್ವ ಕ್ಷೇತ್ರದಲ್ಲಿ ಬೆಳಕು ಬಾಗುವುದನ್ನು ಆರ್ಥರ್ ಎಡ್ಡಿಂಗ್ಟನ್ ಜಗತ್ತಿನ ಮುಂದೆ ಇಟ್ಟಾಗ ಐನ್‌ಸ್ಟೇನ್ ಸಾಪೇಕ್ಷ ಸಿದ್ಧಾಂತಕ್ಕೆ ಮೊದಲ ಪುರಾವೆ ಸಿಕ್ಕಿತ್ತು. ಇದಾದ 100 ವರ್ಷಗಳ ನಂತರ ಗುರುತ್ವ ಅಲೆಗಳ ಇರುವಿಕೆ ಯ ಬಗ್ಗೆ ವಿಜ್ಞಾನಿಗಳು ಸ್ಪಷ್ಟ ನಿರ್ಣಯಕ್ಕೆ ಬಂದಿದ್ದಾರೆ.[ಅಪರೂಪದ ಕಪ್ಪುರಂಧ್ರ ಪತ್ತೆ ಮಾಡಿದ ಅಮೆರಿಕದ ವಿಜ್ಞಾನಿ]

science

ನೋಬೆಲ್ ವಿಜ್ಞಾನಿ ಐನ್‌ಸ್ಟೇನ್ ಈ ನಿಯಮವನ್ನು ಕೇವಲ ಒಂದು ಪೆನ್ ಮತ್ತು ಪೇಪರ್ ಮೂಲಕ ಹೇಳಿದ್ದರು. ಆದರೆ ಒಂದು ಸ್ಪಷ್ಟ ನಿರ್ಣಯಕ್ಕೆ ಬರಲು ನೂರು ವರ್ಷಗಳು ಬೇಕಾಯಿತು ಎಂದು ಜರುಸುಲೆಮ್ ಐನ್‌ಸ್ಟೇನ್ ಸಮಶೋಧನಾ ಘಟಕದ ರೋನಿ ಗ್ರೋಜ್ ಹೇಳುತ್ತಾರೆ. ಒಬ್ಬ ಮಾನವನ ಯೋಚನೆಗಳಿಗೆ ಸರಿಯಾದ ಉತ್ತರ ಕಂಡುಕೊಳ್ಳಲು ನೂರು ವರ್ಷಗಳೆ ಹಿಡಿದವು ಎಂದು ಹೇಳಿದ್ದಾರೆ.[ಮಂಗಳನ ಮೇಲೆ ರಷ್ಯಾ ಮಂಗಗಳ ಸವಾರಿ]

ಸಾಪೇಕ್ಷತಾ ವಾದ ಎಂದರೇನು?
ಸಾಪೇಕ್ಷ ಸಿದ್ಧಾಂತದ ಪ್ರಕಾರ ಬೆಳಕಿನ ವೇಗವನ್ನು ಸರಿಗಟ್ಟಲೆಂದು ನಾವು ಬೆನ್ನಿಗೆ ರಾಕೆಟ್ ಕಟ್ಟಿಕೊಂಡು ಧಾವಿಸಿದರೆ ಸಮಯವೇ ನಿಧಾನವಾಗುತ್ತದೆ; ನಮಗೆ ವಯಸ್ಸೇ ಆಗುವುದಿಲ್ಲ. ಮೂರು ಆಯಾಮಗಳ ದೇಹ ಕ್ರಮೇಣ ಎರಡು ಆಯಾಮಕ್ಕೆ ಬರುತ್ತ ನಾವು ನಮ್ಮದೇ ನೆರಳಂತಾಗುತ್ತ ಸಾಗುತ್ತೇವೆ. ಬೆಳಕಿನ ವೇಗವನ್ನೂ ಒಮ್ಮೆ ಮೀರಿದೆವೆಂದರೆ ಆಗ ನಡೆಯುವ ಘಟನೆಗಳು ನಮ್ಮ ಲೆಕ್ಕದಲ್ಲಿ ಇರುವುದಿಲ್ಲ. ಸಮಯ ಹಿಮ್ಮಖವವಾಗಿ ಚಲಿಸುತ್ತದೆ. ನಾವು ಶೂನ್ಯಕ್ಕಿಂತ ಹಗುರವಾಗುತ್ತೇವೆ. ಶೂನ್ಯಕ್ಕಿಂತ ತೆಳ್ಳಗಾಗುತ್ತೇವೆ. ಇವು ಐನ್ ಸ್ಟೇನ್ ಮಂಡಿಸಿದ ಸಾಪೇಕ್ಷತಾವಾದದ ಹೈಲೈಟ್ಸ್.

English summary
It took a century, but the theory from Albert Einstein handwritten neatly on paper that is now yellowing has finally been vindicated. Israeli officials today offered a rare look at the documents where Einstein presented his ideas on gravitational waves, a display that coincided with the historic announcement that scientists had glimpsed the first direct evidence of his theory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X