• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ನೆಲೆಸಲು ಹಸಿರು ಕಾರ್ಡ್‌ ಕೇಳಿದ ಗೋಟಬಯ ರಾಜಪಕ್ಸೆ

|
Google Oneindia Kannada News

ಕೊಲಂಬೋ, ಆಗಸ್ಟ್‌ 19: ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ಉಂಟಾದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಶ್ರೀಲಂಕಾದಿಂದ ಪರಾರಿಯಾಗಿದ್ದ ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ಶ್ರೀಲಂಕಾಗೆ ಮರಳಿ ಬರುವ ಲಕ್ಷಣಗಳು ಕಾಣುತ್ತಿಲ್ಲ ಎಂದು ವರದಿಗಳು ಹೇಳಿವೆ.

ಗೋಟಬಯ ಅವರು ಅಮೆರಿಕದಲ್ಲಿ ತಮ್ಮ ಪತ್ನಿ ಮತ್ತು ಮಗನೊಂದಿಗೆ ಅಲ್ಲೇ ನೆಲೆಸಲು ಯುಎಸ್ ಗ್ರೀನ್ ಕಾರ್ಡ್ ಪಡೆಯಲು ಕಾಯುತ್ತಿದ್ದಾರೆ ಎಂದು ಶ್ರೀಲಂಕಾದ ದಿನಪತ್ರಿಕೆ ಡೈಲಿ ಮಿರರ್ ವರದಿ ತಿಳಿಸಿದೆ.

ಮುಂದಿನ ವಾರ ಶ್ರೀಲಂಕಾಕ್ಕೆ ವಾಪಸ್ಸಾಗಲಿದ್ದಾರೆ ಗೋಟಬಯ ರಾಜಪಕ್ಸೆಮುಂದಿನ ವಾರ ಶ್ರೀಲಂಕಾಕ್ಕೆ ವಾಪಸ್ಸಾಗಲಿದ್ದಾರೆ ಗೋಟಬಯ ರಾಜಪಕ್ಸೆ

ಉನ್ನತ ಮೂಲಗಳನ್ನು ಆಧರಿಸಿ ವರದಿ ಮಾಡಿರುವ ಡೈಲಿ ಮಿರರ್‌, ರಾಜಪಕ್ಸೆ ಅವರ ಪತ್ನಿ ಲೋಮಾ ರಾಜಪಕ್ಸೆ ಅವರು ಅಮೆರಿಕದವರಾಗಿರುವುದರಿಂದ ಗೋಟಬಯ ರಾಜಪಕ್ಸೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಗ್ರೀನ್ ಕಾರ್ಡ್ ಪಡೆಯಲು ಅವರ ಅರ್ಜಿಯನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ರಾಜಪಕ್ಸೆ ಅವರ ವಕೀಲರು ಕಳೆದ ತಿಂಗಳು ಪ್ರಾರಂಭಿಸಿದ್ದಾರೆ ಎಂದು ಹೇಳಿದೆ.

2019 ರಲ್ಲಿ ರಾಜಪಕ್ಸೆ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಯುಎಸ್ ಪೌರತ್ವವನ್ನು ತ್ಯಜಿಸಿದ್ದರು. ಗೋಟಬಯ ರಾಜಪಕ್ಸೆ ಅವರು ಶ್ರೀಲಂಕಾ ಸೇನೆಯಿಂದ ಬೇಗನೆ ನಿವೃತ್ತಿ ಪಡೆದು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ತೆರಳಿದರು. 1998ರಲ್ಲಿ ಯುನೈಟೆಡ್ ಸ್ಟೇಟ್ಸ್‌ಗೆ ಅವರು ವಲಸೆ ಬಂದಿದ್ದರು. ಬಳಿಕ ಅವರು 2005ರಲ್ಲಿ ಶ್ರೀಲಂಕಾಕ್ಕೆ ಮರಳಿದ್ದರು. ಪಾಸ್‌ಪೋರ್ಟ್‌ ಪ್ರಕ್ರಿಯೆಯು ಈಗ ಕೊಲಂಬೊದಲ್ಲಿರುವ ಅವರ ವಕೀಲರು ಕಾರ್ಯವಿಧಾನದೊಂದಿಗೆ ಮುಂದುವರಿಯಲು ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವುದನ್ನು ಒಳಗೊಂಡಿದೆ ಎಂದು ದಿನಪತ್ರಿಕೆ ಹೇಳಿದೆ.

 ಥೈಲ್ಯಾಂಡ್‌ನಲ್ಲಿ ಉಳಿಯುವ ನಿರ್ಧಾರದಿಂದ ಹಿಂದಕ್ಕೆ

ಥೈಲ್ಯಾಂಡ್‌ನಲ್ಲಿ ಉಳಿಯುವ ನಿರ್ಧಾರದಿಂದ ಹಿಂದಕ್ಕೆ

ಪ್ರಸ್ತುತ ಬ್ಯಾಂಕಾಕ್‌ನ ಹೋಟೆಲ್‌ನಲ್ಲಿರುವ 73 ವರ್ಷದ ಶ್ರೀಲಂಕಾದ ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ತಮ್ಮ ಪತ್ನಿಯೊಂದಿಗೆ ಆಗಸ್ಟ್ 25ರಂದು ಶ್ರೀಲಂಕಾಕ್ಕೆ ಹಿಂತಿರುಗುತ್ತಾರೆ. ನವೆಂಬರ್‌ವರೆಗೆ ಥೈಲ್ಯಾಂಡ್‌ನಲ್ಲಿ ಉಳಿಯುವ ತಮ್ಮ ಆರಂಭಿಕ ಯೋಜನೆಯನ್ನು ರದ್ದುಗೊಳಿಸುತ್ತಾರೆ ಎಂದು ಮೊದಲ ವರದಿ ತಿಳಿಸಿತ್ತು. ಎರಡು ದಿನಗಳ ಹಿಂದೆ ರಾಜಪಕ್ಸೆ ಅವರು ತಮ್ಮ ವಕೀಲರನ್ನು ಸಂಪರ್ಕಿಸಿ, ಭದ್ರತೆಯ ಕಾರಣದಿಂದ ಆರಂಭದಲ್ಲಿ ನಿರೀಕ್ಷಿಸಿದಂತೆ ಥೈಲ್ಯಾಂಡ್‌ನಲ್ಲಿ ಉಳಿಯಲು ಸ್ವಾತಂತ್ರ್ಯವನ್ನು ಅನುಮತಿಸದ ಕಾರಣ ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾಕ್ಕೆ ಮರಳಲು ನಿರ್ಧರಿಸಿದರು ಎಂದು ದಿನಪತ್ರಿಕೆ ಹೇಳಿತ್ತು.

ಶ್ರೀಲಂಕಾ ಬಂದರಿನಲ್ಲಿ ಚೀನಾ ನೌಕೆ: ಎಲ್ಲಾ ಬೆಳವಣಿಗೆಯನ್ನು ಗಮನಿಸುತ್ತಿದ್ದೇವೆ ಎಂದ ಜೈಶಂಕರ್ಶ್ರೀಲಂಕಾ ಬಂದರಿನಲ್ಲಿ ಚೀನಾ ನೌಕೆ: ಎಲ್ಲಾ ಬೆಳವಣಿಗೆಯನ್ನು ಗಮನಿಸುತ್ತಿದ್ದೇವೆ ಎಂದ ಜೈಶಂಕರ್

 ವಿಶೇಷ ಬ್ಯೂರೋ ಪಡೆಯಿಂದ ಭದ್ರತೆ

ವಿಶೇಷ ಬ್ಯೂರೋ ಪಡೆಯಿಂದ ಭದ್ರತೆ

ಬ್ಯಾಂಕಾಕ್‌ಗೆ ಆಗಮಿಸಿದ ನಂತರ, ಭದ್ರತಾ ಕಾರಣಗಳಿಗಾಗಿ ಥಾಯ್ ಪೊಲೀಸರು ಗೋಟಬಯಗೆ ಅವರು ತಂಗಿದ್ದ ಹೋಟೆಲ್‌ನೊಳಗೆ ಇರುವಂತೆ ಸಲಹೆ ನೀಡಿದ್ದರು. ಆದರೆ ಹೋಟೆಲ್‌ನ ವಿಳಾಸವನ್ನು ಬಹಿರಂಗಪಡಿಸಿಲ್ಲ ಎಂದು ಬ್ಯಾಂಕಾಕ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ. ರಾಜಪಕ್ಸೆ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವಿಶೇಷ ಬ್ರಾಂಚ್ ಬ್ಯೂರೋದ ಸರಳ ಉಡುಪಿನ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

 ವೈದ್ಯಕೀಯ ವೀಸಾದಲ್ಲಿ ಸಿಂಗಾಪುರಕ್ಕೆ ಚಲನೆ

ವೈದ್ಯಕೀಯ ವೀಸಾದಲ್ಲಿ ಸಿಂಗಾಪುರಕ್ಕೆ ಚಲನೆ

ಒಂದು ವೇಳೆ ಇದೇ ತಿಂಗಳು ಶ್ರೀಲಂಕಾಕ್ಕೆ ಗೋಟಬಯ ಹಿಂದಿರುಗಿದ ನಂತರ ಅವರ ಮನೆ ಮತ್ತು ಮಾಜಿ ಅಧ್ಯಕ್ಷರಿಗೆ ನೀಡಲಾದ ಭದ್ರತೆಯನ್ನು ಒದಗಿಸುವ ಬಗ್ಗೆ ಸಚಿವ ಸಂಪುಟವು ಚರ್ಚಿಸಲಿದೆ ಎಂದು ವರದಿ ತಿಳಿಸಿದೆ. ರಾಜಪಕ್ಸೆ ಅವರು ಕಳೆದ ತಿಂಗಳು ಮಾಲ್ಡೀವ್ಸ್‌ಗೆ ಪಲಾಯನ ಮಾಡಿ ನಂತರ ಸಿಂಗಾಪುರಕ್ಕೆ ಪಲಾಯನ ಮಾಡಿದ್ದರು. ಅವರು ವೈದ್ಯಕೀಯ ವೀಸಾದಲ್ಲಿ ಸಿಂಗಾಪುರಕ್ಕೆ ಹೋಗಿದ್ದರು ಮತ್ತು ಅಲ್ಲೇ ಉಳಿಯಲು ಎರಡು ಬಾರಿ ವೀಸಾ ವಿಸ್ತರಣೆಗೆ ಕೋರಿದ್ದರು. ಆದರೆ ಅವರ ವೀಸಾವನ್ನು ಮತ್ತಷ್ಟು ವಿಸ್ತರಿಸಲು ಸಾಧ್ಯವಾಗದ ಕಾರಣ, ರಾಜಪಕ್ಸೆ ಮತ್ತು ಅವರ ಪತ್ನಿ ಥೈಲ್ಯಾಂಡ್‌ಗೆ ತೆರಳಿದರು. ಬಳಿಕ ಅವರು ತಮ್ಮ ಮೂರನೇ ಗಮ್ಯಸ್ಥಾನವನ್ನು ಅಂತಿಮಗೊಳಿಸುವವರೆಗೆ ಅಲ್ಲಿಯೇ ಇರಬಹುದೆಂದು ಭರವಸೆ ನೀಡಲಾಯಿತು.

 ಗೋಟಬಯ ಚಲನವಲನಕ್ಕೂ ನಿರ್ಬಂಧ

ಗೋಟಬಯ ಚಲನವಲನಕ್ಕೂ ನಿರ್ಬಂಧ

ಇದೇ ಸಮಯದಲ್ಲಿ ರಾಜಪಕ್ಸೆ ದೇಶದಲ್ಲಿ ಉಳಿದುಕೊಂಡು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಬಾರದು ಎಂದು ಥಾಯ್ ಸರ್ಕಾರವು ಸ್ಪಷ್ಟಪಡಿಸಿದೆ. ಆದರೆ ಈಗ ಥೈಲ್ಯಾಂಡ್‌ನಲ್ಲಿ ಅವರ ಚಲನವಲನವನ್ನು ನಿರ್ಬಂಧಿಸಲಾಗಿದ್ದು, ಅವರು ದೇಶಕ್ಕೆ ಮರಳಲೂಬಹುದು ಎಂದು ವರದಿ ತಿಳಿಸಿದೆ. ಆದರೆ ಶ್ರೀಲಂಕಾದ ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಶ್ರೀಲಂಕಾಗೆ ಮರಳುತ್ತಾರಾ ಇಲ್ಲ ಅಮೆರಿಕದಲ್ಲಿ ನೆಲೆಸುತ್ತಾರಾ ಕಾದು ನೋಡಬೇಕಿದೆ.

English summary
Sri Lanka's Daily Mirror reported that Gotabaya is waiting for a US green card to settle in America with his wife and son.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X