Gold: ಚರಂಡಿ ತೋಡುವ ವೇಳೆ ₹99 ಕೋಟಿ ಮೌಲ್ಯದ ಕೋಟಿ ಮೌಲ್ಯದ ಚಿನ್ನದ ನಿಧಿ, ಪ್ರಾಮಾಣಿಕತೆ ಮೆರೆದ ಯುವಕ

Gold: ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕರ್ನಾಟಕದ ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆಯಾಗಿದ್ದು, ಇಡೀ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಚರಂಡಿ ಕಾಮಗಾರಿ ವೇಳೆಯೇ 18 ವರ್ಷದ ಯುವಕನೊಬ್ಬನಿಗೆ ಅಪಾರ ಪ್ರಮಾಣದ ಚಿನ್ನ ಸಿಕ್ಕಿರುವ ಅಪರೂಪದ ಘಟನೆ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬೆಲ್ಜಿಯಂನಲ್ಲಿ ಚರಂಡಿ ಕಾಮಗಾರಿಯಲ್ಲಿ ತೊಡಗಿದ್ದ 18 ವರ್ಷದ ವಿದ್ಯಾರ್ಥಿ ಯುವಕನಿಗೆ ಬರೋಬ್ಬರಿ 99 ಕೋಟಿ ರೂಪಾಯಿ (ಅಂದಾಜು 9 ಮಿಲಿಯನ್ ಯುರೋ) ಮೌಲ್ಯದ ಅಪಾರ ಪ್ರಮಾಣದ ಚಿನ್ನದ ನಿಧಿ ಸಿಕ್ಕ ಅಪರೂಪದ ಘಟನೆ ನಡೆದಿದೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

Gold Treasure Worth 99 Cr Found During Drain Work 18-Year-Old Student Makes Stunning Discovery

ಚರಂಡಿ ಕಾಮಗಾರಿ ವೇಳೆ ನಿಧಿ ಪತ್ತೆ

ಯುರೋಪ್‌ನ ಬ್ರಸೆಲ್ಸ್‌ನ ವಾಯುವ್ಯ ದಿಕ್ಕಿನಲ್ಲಿರುವ ಸಿಂಟ್ ಗಿಲಿಸ್ ಡೆಂಡರ್ಮಾಂಡೆ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬೇಸಿಗೆ ರಜೆ ಹಿನ್ನೆಲೆ ನಿರ್ಮಾಣ ಕಾಮಗಾರಿಯಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಕೋಬೆ ಎಂಬ 18 ವರ್ಷದ ಯುವಕ ಮತ್ತು ಆತನ ಸಹೋದ್ಯೋಗಿಗಳು ಚರಂಡಿ ಪೈಪ್ ಬದಲಾಯಿಸುವ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಭೂಮಿಯ ಅಡಿಯಲ್ಲಿ ಹಳೆಯ ಕಟ್ಟಡವೊಂದರ ಇಟ್ಟಿಗೆಯ ಗೋಡೆಯ ಮರೆಯಲ್ಲಿ ಇಟ್ಟಿದ್ದ ಚೀಲವೊಂದು ಅವರ ಕಣ್ಣಿಗೆ ಬಿದ್ದಿದೆ.

ಹಿಂದಿನ ಕಾಲದ ಈ ಬಂಗಲೆ ರಹಸ್ಯ..

ಆರಂಭದಲ್ಲಿ ಕೋಬೆ ಅಲ್ಲಿ ಬಿದ್ದಿರುವುದು ಯುರೋ ನಾಣ್ಯಗಳು ಇರಬಹುದು ಎಂದು ಅಂದುಕೊಂಡಿದ್ದರು. ಆದರೆ ಸಮೀಪಕ್ಕೆ ಹೋಗಿ ಪರಿಶೀಲಿಸಿದಾಗ ಅಲ್ಲಿ ಚಿನ್ನದ ಬಿಸ್ಕೆಟ್‌ಗಳು ಮತ್ತು ಚಿನ್ನದ ನಾಣ್ಯಗಳು ಇರುವುದು ಕಂಡುಬಂದಿದೆ. ಈ ನಿಧಿಯನ್ನು ಹಿಂದಿನ ಕಾಲದಲ್ಲಿ ನಿರ್ಮಿಸಲಾದ ಬೃಹತ್ ಬಂಗಲೆಯ ನೆಲಮಾಳಿಗೆಯ ಗೋಡೆಯೊಳಗೆ ಭದ್ರವಾಗಿ ಇಡಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಐತಿಹಾಸಿಕ ಕಟ್ಟಡವು 1899ರಲ್ಲಿ ಸ್ಥಾಪನೆಯಾಗಿದ್ದ ಮದ್ಯ ತಯಾರಿಕಾ ಘಟಕದ ಮಾಲೀಕರಾದ 'ಥಿಯೋಫಿಲಸ್ ವ್ಯಾನ್ ಆಸ್ಚೆ' ಅವರಿಗೆ ಸೇರಿದ್ದಾಗಿದೆ. ಈಗ ಈ ಕಟ್ಟಡವನ್ನು ಸಾಮಾಜಿಕ ಕಲ್ಯಾಣ ಸಂಸ್ಥೆಯೊಂದು ಹೊಸ ಕಚೇರಿ ಹಾಗೂ ವಸತಿ ಸಂಕೀರ್ಣವನ್ನಾಗಿ ಪರಿವರ್ತಿಸುವ ಕಾರ್ಯ ಮುಂದುವರೆದಿತ್ತು ಎಂದು ತಿಳಿದುಬಂದಿದೆ.

ನಿಧಿ ಪತ್ತೆಯಾದ ಸ್ಥಳದ ಮಾಲೀಕರು ಯಾರು?

ನಿಧಿ ಪತ್ತೆಯಾದ ತಕ್ಷಣವೇ ಸ್ಥಳೀಯ ಆಡಳಿತವು ಆ ಜಾಗವನ್ನು ವಶಕ್ಕೆ ತೆಗೆದುಕೊಂಡು, ಭದ್ರತೆ ಒದಗಿಸಿದೆ. ಸಂಪೂರ್ಣ ನಿಧಿಯನ್ನು ಬ್ರಸೆಲ್ಸ್‌ನ ಖಜಾನೆಗೆ ವರ್ಗಾಯಿಸಲಾಗಿದೆ. ಸದ್ಯ ಬೆಲ್ಜಿಯಂನ ಈಸ್ಟ್ ಫ್ಲಾಂಡರ್ಸ್ ಪ್ರಾಸಿಕ್ಯೂಟರ್ ಕಚೇರಿಯು ಈ ಚಿನ್ನದ ಮೂಲದ ಕುರಿತು ಕಾನೂನುಬದ್ಧ ತನಿಖೆ ಆರಂಭಿಸಿದೆ. ಇದು ಯಾವುದೇ ಅಪರಾಧ ಅಥವಾ ಕಳ್ಳತನಕ್ಕೆ ಸಂಬಂಧಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವುದು ತನಿಖಾಧಿಕಾರಿಗಳ ಮೊದಲ ಆದ್ಯತೆಯಾಗಿದೆ.

ಬೆಲ್ಜಿಯಂ ಕಾನೂನಿನ ಪ್ರಕಾರ, ಯಾವುದೇ ನಿಧಿ ಸಿಕ್ಕರೆ ಅದರ ನಿಜವಾದ ಮಾಲೀಕರು ಅಥವಾ ಉತ್ತರಾಧಿಕಾರಿಗಳು ಬಂದು ಹಕ್ಕು ಮಂಡಿಸಲು ಕನಿಷ್ಠ 5 ವರ್ಷಗಳ ಕಾಲ ಕಾಯಬೇಕಾಗುತ್ತದೆ. ಪ್ರಸ್ತುತ ಈ ಚಿನ್ನಕ್ಕಾಗಿ ಕಟ್ಟಡ ಕಾಮಗಾರಿ ಗುತ್ತಿಗೆದಾರರು, ನವೀಕರಣ ಮಾಡಿಸುತ್ತಿರುವ ಆ ಹಳೆಯ ಕಟ್ಟಡದ ಮೂಲ ಮಾಲೀಕರಾದ 'ವ್ಯಾನ್ ಆಸ್ಚೆ' ಕುಟುಂಬದ ವಂಶಸ್ಥರ ನಡುವೆ ಕಾನೂನು ಸಮರ ಏರ್ಪಡುವ ಸಾಧ್ಯತೆಯಿದೆ.

ಇಷ್ಟೊಂದು ದೊಡ್ಡ ಮಟ್ಟದ ನಿಧಿ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯಿಸಿದ ಯುವಕ ಕೋಬೆ, 'ಇದು ಅತ್ಯಂತ ದೊಡ್ಡ ಮೊತ್ತದ ನಿಧಿ ಆಗಿದ್ದರಿಂದ ನಾವು ತಕ್ಷಣವೇ ಸರ್ಕಾರಕ್ಕೆ ಒಪ್ಪಿಸಿದೆವು. ಒಂದು ವೇಳೆ ಮಾಲೀಕರು ಸಿಗದಿದ್ದರೆ ಅಥವಾ ಕಾನೂನು ಪ್ರಕ್ರಿಯೆ ಮುಗಿದ ನಂತರ ನಮಗೂ ಏನಾದರೂ ಹುಡುಕಿ ಕೊಟ್ಟಿದ್ದಕ್ಕೆ ಬಹುಮಾನ ಸಿಗಬಹುದು ಎಂಬ ಭರವಸೆಯಿದೆ,' ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಇದೀಗ ಈ ಕುರಿತು ತನಿಖೆ ನಡೆಯುತ್ತಿದ್ದು, ಏನು ನಿರ್ಧಾರ ಹೊರಬೀಳಲಿದೆಯೋ ಎಂದು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+