ಆಕಾಶದಿಂದ ಬಿದ್ದ ಉಲ್ಕೆಯಿಂದ ತಯಾರಾದ ಆಭರಣಗಳು! 3,200 ವರ್ಷದ ರಹಸ್ಯಕ್ಕೆ ಸಿಕ್ಕಿತು ಉತ್ತರ
ಸುಮಾರು 3,000 ವರ್ಷಗಳಷ್ಟು ಹಿಂದಿನ ಹಳೆಯದಾದ ಬಂಗಾರದ ಖಜಾನೆಯಲ್ಲಿದ್ದ ಎರಡು ಅಪರೂಪದ ವಸ್ತುಗಳು ಭೂಮಿಯ ಕಬ್ಬಿಣದಿಂದಲ್ಲ, ಬಾಹ್ಯಾಕಾಶದಿಂದ ಭೂಮಿಗೆ ಮೇಲೆ ಬಿದ್ದ ಉಲ್ಕೆಯ ಕಬ್ಬಿಣದಿಂದ ತಯಾರಾಗಿವೆ ಎಂಬ ಅಚ್ಚರಿಯ ಮಾಹಿತಿಯನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.
ಸ್ಪೇನ್‌ನ ದೇಶದ ಪುರಾತತ್ವ ಸಂಗ್ರಹಾಲಯದ ಮಾಜಿ ಸಂರಕ್ಷಣಾ ವಿಭಾಗದ ಮುಖ್ಯಸ್ಥ ಸಾಲ್ವಡೊರ್ ರೊವಿರಾ-ಲೊರೆನ್ಸ್ ನೇತೃತ್ವದ ಸಂಶೋಧನಾ ತಂಡವು ಈ ಅಧ್ಯಯನ ನಡೆಸಿದೆ. ಈ ಕುರಿತು 2024ರಲ್ಲಿ ಸಂಶೋಧನಾ ಪ್ರಬಂಧವೂ ಕೂಡ ಪ್ರಕಟವಾಗಿದೆ.

ವಿಲ್ಲೇನಾ ಖಜಾನೆ ಎಂದರೆ ಏನು ಇದರ ಒಂದು ಸಣ್ಣ ಪರಿಚಯ
'ವಿಲ್ಲೇನಾ ಖಜಾನೆ' ಎಂಬುದು ಯುರೋಪಿನ ಕಂಚಿನ ಯುಗದ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ಪುರಾತತ್ವ ಆವಿಷ್ಕಾರಗಳಲ್ಲಿ ಒಂದಾಗಿದೆ.
ಆವಿಷ್ಕಾರ: 1963ರಲ್ಲಿ ಸ್ಪೇನ್‌ನ ಅಲಿಕಾಂಟೆ ಪ್ರದೇಶದ ವಿಲ್ಲೇನಾ ಎಂಬ ಪ್ರದೇಶದಲ್ಲಿ ಪುರಾತತ್ವ ತಜ್ಞರು ಇದನ್ನು ಪತ್ತೆಹಚ್ಚಿದರು.
ಅಮೂಲ್ಯ ವಸ್ತುಗಳ ಸಂಗ್ರಹ: ಈ ಖಜಾನೆಯಲ್ಲಿ ಸಿಕ್ಕಿದ್ದು ಒಟ್ಟು 66 ಅಮೂಲ್ಯ ವಸ್ತುಗಳು, ಅವುಗಳಲ್ಲಿ ಬಹುತೇಕ ವಸ್ತುಗಳು ಅಪ್ಪಟ ಚಿನ್ನದಿಂದ ತಯಾರಿಸಲಾಗಿದೆ ಎಂದು ತಜ್ಞರ ಅಭಿಪ್ರಾಯಪಟ್ಟಿದ್ದಾರೆ. ಈ ಐತಿಹಾಸಿಕ ಹಿನ್ನೆಲೆಯುಳ್ಳ ಖಜಾನೆಗೆ 'ವಿಲ್ಲೇನಾ ಖಜಾನೆ' ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.
ಎರಡು ವಸ್ತುಗಳು ಮಾತ್ರ ಎಲ್ಲರ ಗಮನ ಸೆಳೆದವು
ಈ ಖಜಾನೆಯಲ್ಲಿ ಚಿನ್ನದ ಜೊತೆಗೆ ಕಬ್ಬಿಣದಂತೆ ಕಾಣುವ ಎರಡು ವಸ್ತುಗಳು ಪತ್ತೆಯಾಗಿದ್ದವು.
ಖಜಾನೆಯಲ್ಲಿ ಪತ್ತೆಯಾದ ಎರಡು ವಸ್ತುಗಳು ಗಮನ ಸೆಳೆದವು.
ಆ ಖಜಾನೆಯಲ್ಲಿ ಚಿನ್ನದ ಜೊತೆಗೆ ಕಬ್ಬಿಣದ ಆಕಾರದ ಎರಡು ವಿಭಿನ್ನವಾದ ವಸ್ತುಗಳು ಕೂಡ ಪತ್ತೆಯಾಗಿದ್ದವು. ಆದರೆ ಇಡೀ ಸಂಗ್ರಹದಲ್ಲಿ ಎಲ್ಲರ ಗಮನ ಸೆಳೆದಿದ್ದು ಕೇವಲ ಆ ಎರಡು ವಸ್ತುಗಳು ಮಾತ್ರ.
ಪತ್ತೆಯಾದ ಪುರಾತನ ವಸ್ತುಗಳು
* ಕೈಗೆ ಧರಿಸುವ ಬಳೆ
* ರಾಜದಂಡ ಅಥವಾ ಕತ್ತಿಯ ಹಿಡಿದು ಭಾಗವಾಗಿರಬಹುದಾದ ಅರ್ಧ ಗೋಳಾಕಾರದ ಒಂದು ಸಣ್ಣ ವಸ್ತು.
ಮೇಲ್ನೋಟಕ್ಕೆ ಈ ಎರಡೂ ವಸ್ತುಗಳು ಲೋಹದಿಂದ ಮಾಡಲ್ಪಟ್ಟಂತೆ ಕಂಡುಬಂದರೂ, ಇವುಗಳು ಯಾವ ಕಾಲಕ್ಕೆ ಸೇರಿದವು ಎಂಬು ಪ್ರಶ್ನೆ ಮಾತ್ರ ಸಂಶೋಧಕರಲ್ಲಿ ಇಂದಿಗೂ ನಿಗೂಢವಾಗಿ ಉಳಿದಿದೆ.
ಯಾಕೆಂದರೆ... ಆಗ ಲೋಹದ ಯುಗವೇ ಆರಂಭವಾಗಿರಲಿಲ್ಲ!
ವಿಲ್ಲೇನಾ ಖಜಾನೆಯಲ್ಲಿ ಇರುವ ಚಿನ್ನದ ವಸ್ತುಗಳು ಕ್ರಿ.ಪೂ. 1200ರಿಂದ 1500ರ ಅವಧಿಯವು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಈ ಐಬೇರಿಯನ್ ಪ್ರದೇಶದಲ್ಲಿ ಲೋಹದ ಬಳಕೆ ಆರಂಭವಾಗಿದ್ದು ಕ್ರಿ.ಪೂ. 850ರ ನಂತರ. ಹಾಗಾದರೆ ಈ ಲೋಹದಿಂದ ತಯಾರಾದ ವಸ್ತುಗಳು ಅದಕ್ಕಿಂತ ಹಲವು ಶತಮಾನಗಳ ಹಿಂದೆಯೇ ಹೇಗೆ ತಯಾರಾಗಿದ್ದವು ಎಂಬುದು ಹಲವು ವರ್ಷಗಳಿಂದ ಸಂಶೋಧಕರಿಗೆ ಉತ್ತರ ಸಿಗದ ಪ್ರಶ್ನೆಯಾಗಿತ್ತು.
ಉತ್ತರ ಸಿಕ್ಕಿದ್ದು ಉಲ್ಕೆಗಳಲ್ಲಿ...
ಭೂಮಿಯಲ್ಲಿ ದೊರೆಯುವ ಕಬ್ಬಿಣದ ಜೊತೆಗೆ ಬಾಹ್ಯಾಕಾಶದಿಂದ ಭೂಮಿಗೆ ಬಿದ್ದ ಉಲ್ಕೆಗಳಲ್ಲಿಯೂ ಕಬ್ಬಿಣದ ಅಂಶವು ಇರುತ್ತದೆ. ವಿಶೇಷವೆಂದರೆ, ಪುರಾತನ ಕಾಲದಲ್ಲಿ ಕೆಲವು ಅಮೂಲ್ಯ ಆಯುಧಗಳು ಮತ್ತು ಆಭರಣಗಳನ್ನು ಇದೇ ಉಲ್ಕೆಯ ಕಬ್ಬಿಣದಿಂದ ತಯಾರಿಸಲಾಗುತ್ತಿತ್ತು.
ಉಲ್ಕೆಯ ಕಬ್ಬಿಣದಲ್ಲಿ ಸಾಮಾನ್ಯ ಕಬ್ಬಿಣಕ್ಕಿಂತ ನಿಕೆಲ್ ಪ್ರಮಾಣ ಅತ್ಯಧಿಕವಾಗಿರುತ್ತದೆ ಇರುತ್ತದೆ. ಇದೇ ಅಂಶವನ್ನು ಆಧರಿಸಿ ವಿಜ್ಞಾನಿಗಳು ಈ ಎರಡು ವಸ್ತುಗಳನ್ನು ಪರೀಕ್ಷಿಸಿ ಪತ್ತೆಹಚ್ಚಲಾಗಿದೆ.
ವೈಜ್ಞಾನಿಕ ಪರೀಕ್ಷೆಯಲ್ಲಿ ಬಹಿರಂಗವಾಯಿತು ಸತ್ಯ: ಉಲ್ಕೆಯ ಕಬ್ಬಣದಿಂದ ತಯಾರಾದ ವಸ್ತುಗಳು
ವಿಲ್ಲೇನಾ ಪುರಾತತ್ವ ಸಂಗ್ರಹಾಲಯದ ಅನುಮತಿ ಪಡೆದು ಸಂಶೋಧಕರು ಅಲ್ಲಿದ್ದ ಎರಡೂ ಪುರಾತನ ವಸ್ತುಗಳಿಂದ ಸಣ್ಣ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಿದರು. ಆ ಮಾದರಿಗಳನ್ನು ಮಾಸ್ ಸ್ಪೆಕ್ಟ್ರೋಮೆಟ್ರಿ ತಂತ್ರಜ್ಞಾನ ಬಳಸಿ ಅವುಗಳ ರಾಸಾಯನಿಕ ಸಂಯೋಜನೆಯನ್ನು ಒಳಪಡಿಸಿ ಪರೀಕ್ಷಿಸಲಾಯಿತು. ವಸ್ತುಗಳು ವಿಪರೀತ ತುಕ್ಕು ಹಿಡಿದಿದ್ದರೂ, ಅವುಗಳಲ್ಲಿ ಕಂಡುಬಂದ ನಿಕೆಲ್ ಪ್ರಮಾಣದ ಆಧಾರದ ಮೇಲೆ ಈ ಎರಡೂ ವಸ್ತುಗಳು ಬಾಹ್ಯಾಕಾಶದ ಉಲ್ಕೆಯ ಕಬ್ಬಿಣದಿಂದಲೇ ತಯಾರಾಗಿವೆ ಎಂಬುದಕ್ಕೆ ಬಲವಾದ ಸಾಕ್ಷ್ಯ ದೊರೆತಿದೆ.
3,200 ವರ್ಷಗಳ ಹಿಂದೆಯೇ ಉನ್ನತ ತಂತ್ರಜ್ಞಾನ!
ಈ ಸಂಶೋಧನೆಯಿಂದ ಐಬೇರಿಯನ್ ಪ್ರದೇಶದ ಜನರು ಸುಮಾರು ಕ್ರಿ.ಪೂ. 1400ರಿಂದ 1200ರ ನಡುವೆಯೇ ಉಲ್ಕೆಯ ಕಬ್ಬಿಣವನ್ನು ಸಂಸ್ಕರಿಸಿ ಉಪಯೋಗಿಸುವ ತಂತ್ರಜ್ಞಾನ ಹೊಂದಿದ್ದರು ಎಂಬುದು ಗೊತ್ತಾಗಿದೆ. ಇದು ಆ ಕಾಲದ ಲೋಹ ತಯಾರಿಕೆ ತಂತ್ರಜ್ಞಾನವು ಹಿಂದೆ ಅಂದಾಜಿಸಿದ್ದಕ್ಕಿಂತ ಹೆಚ್ಚು ಮುಂದುವರಿದಿತ್ತು ಎಂಬುದನ್ನು ಸೂಚಿಸುತ್ತದೆ.
3,200 ವರ್ಷಗಳ ಹಿಂದೆಯೇ ಇತ್ತೇ ಉನ್ನತ ತಂತ್ರಜ್ಞಾನ?
ಇತಿಹಾಸಕಾರರು ಮತ್ತು ವಿಜ್ಞಾನಿಗಳು ಹಿಂದೆ ಅಂದಾಜಿಸಿದ್ದಕ್ಕಿಂತಲೂ ಹಳೆಯ ಕಾಲದ ಲೋಹ ತಯಾರಿಕೆ ತಂತ್ರಜ್ಞಾನವು ಅತ್ಯಂತ ಮುಂದುವರಿದಿತ್ತು ಎಂಬುದು ಹೊಸ ಸಂಶೋಧನೆಯಿಂದ ಸಾಬೀತಾಗಿದೆ. ಐಬೇರಿಯನ್ ಪ್ರದೇಶದ ಜನರು ಸುಮಾರು ಕ್ರಿ.ಪೂ. 1400ರಿಂದ 1200ರ ಅವಧಿಯಲ್ಲೇ, ಅಂದರೆ ಇಂದಿಗೆ ಸುಮಾರು 3,200 ವರ್ಷಗಳ ಹಿಂದೆಯೇ ಆಕಾಶದಿಂದ ಬಿದ್ದ ಉಲ್ಕೆಯ ಕಬ್ಬಿಣವನ್ನು (Meteoritic Iron) ಸಂಸ್ಕರಿಸಿ, ಅದರಿಂದ ವಸ್ತುಗಳನ್ನು ತಯಾರಿಸುವ ಅದ್ಭುತ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿದ್ದರು ಎಂಬ ರೋಮಾಂಚಕ ವಿಷಯ ಈಗ ಬೆಳಕಿಗೆ ಬಂದಿದೆ.
ಇನ್ನಷ್ಟು ಅಧ್ಯಯನಕ್ಕೆ ಸಿದ್ಧತೆ
ಸಂಶೋಧಕರು ಈ ಫಲಿತಾಂಶಗಳು ಅತ್ಯಂತ ಬಲವಾದ ಸೂಚನೆ ನೀಡಿದರೂ, ವಸ್ತುಗಳು ಹೆಚ್ಚು ತುಕ್ಕು ಹಿಡಿದಿರುವುದರಿಂದ ಸಂಪೂರ್ಣ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಭವಿಷ್ಯದಲ್ಲಿ ಇನ್ನಷ್ಟು ಆಧುನಿಕ ಹಾಗೂ ವಸ್ತುಗಳಿಗೆ ಹಾನಿಯಾಗದ ಪರೀಕ್ಷಾ ವಿಧಾನಗಳನ್ನು ಬಳಸಿದರೆ, ಈ ಕಂಡುಹಿಡಿವಿಕೆಗೆ ಇನ್ನಷ್ಟು ದೃಢವಾದ ಸಾಕ್ಷ್ಯಗಳು ದೊರೆಯುವ ಸಾಧ್ಯತೆ ಇದೆ.














Click it and Unblock the Notifications