Get Updates
Get notified of breaking news, exclusive insights, and must-see stories!

ಪ್ರಿಯಕರನ ಪ್ರಾಣಕ್ಕೆ ತುತ್ತಾಯ್ತು ಯುಟ್ಯೂಬ್ ವಿಡಿಯೋ ಹುಚ್ಚು

ಮಿನ್ನೇಸೋಟ(ಅಮೆರಿಕ), ಜೂನ್ 29: ಯೂಟ್ಯೂಬ್ ನಲ್ಲಿ ಅಪಾಯಕಾರಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಬೇಕೆಂಬ ಹುಚ್ಚಿಗೆ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಅಮೆರಿಕದ ಮಿನ್ನೇಸೋಟದಲ್ಲಿ ನಡೆದಿದೆ.

ತನ್ನ ಎದೆಗೆ ಪುಸ್ತಕವೊಂದನ್ನು ಅಡ್ಡ ಹಿಡಿದು, ಪುಸ್ತಕಕ್ಕೆ ಗುಂಡು ಹೊಡೆಯುವಂತೆ ಪೆಡ್ರೋ ರುಯಿಜ್(22) ಎಂಬಾತ ತನ್ನ ಪ್ರೇಯಸಿ ಮೊನಾಲಿಸಾ ಪೆರೇಜ್ (19) ಗೆ ಹೇಳಿದ್ದಾನೆ. ಇಬ್ಬರೂ ಅಪಾಯಕಾರಿ ವಿಡಿಯೋವೊಂದನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡುವುದಾಗಿ ಟ್ವೀಟ್ ಸಹ ಮಾಡಿದ್ದರು.

Girlfriend kills her boyfriend in Minnesota, America

ಗರ್ಭಿಣಿಯಾಗಿ, ಮಗುವನ್ನು ನಿರೀಕ್ಷಿಸುತ್ತಿದ್ದ ಮೊನಾಲಿಸಾ ತನ್ನ ಪ್ರಿಯತಮನ ಮಾತಿನಂತೆಯೇ ಆತ ಹಿಡಿದ ಪುಸ್ತಕಕ್ಕೆ ಗುರಿಯಿಟ್ಟು ಗುಂಡುಹಾರಿಸಿದ್ದಾಳೆ. ಆದರೆ ಗುಂಡು ಪುಸ್ತಕವನ್ನು ತೂರಿ ಪೆಡ್ರೋನ ಎದೆಯನ್ನೂ ಸೀಳಿದೆ! ಇದರಿಂದ ದಿಗ್ಭ್ರಾಂತಳಾದ ಮೊನಾಲಿಸಾ ತಕ್ಷಣವೇ ಆತನನ್ನು ಆಸ್ಪತ್ರೆಗೆ ಸೇರಿಸಿದ್ದರೂ, ಆತ ಸಾವಿಗೀಡಾಗಿದ್ದಾನೆಂದು ವೈದ್ಯರು ಘೋಷಿಸಿದ್ದಾರೆ.

ಈ ಇಬ್ಬರ ಹುಚ್ಚಾಟದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇಂಥ ಅಪಾಯಕಾರಿ ಕೆಲಸಗಳನ್ನು ಮಾಡುವುದು ಮೂರ್ಖತನ ಎಂದು ಹಲವರು ದೂರಿದ್ದಾರೆ. ಇದೀಗ ಪ್ರಿಯತಮನನ್ನೇ ಕೊಲೆ ಮಾಡಿದ ಕಪ್ಪುಪಟ್ಟಿ ಸೇರಿರುವ ಮೊನಾಲಿಸಾ ಕುರಿತು ಹಲವರು ಅನುಕಂಪ ವ್ಯಕ್ತಪಡಿಸಿದ್ದಾರೆ.

ಆಕೆಯದೇನೂ ತಪ್ಪಿಲ್ಲ, ಪೆಡ್ರೋ ಒತ್ತಾಯಿಸಿದ್ದಕ್ಕಾಗಿ ಆಕೆ ಹಾಗೆ ಮಾಡಿದ್ದಾಳೆ. ಆಕೆಗೆ ಅಪಾಯದ ಅರಿವಿರಲಿಲ್ಲ ಎಂದು ಹಲವರು ಮೊನಾಲಿಸಾ ಪರ ವಾದಿಸಿದ್ದಾರೆ.
ಏನೇ ಆದರೂ ಇದೊಂದು ಕೊಲೆ ಪ್ರಕರಣ ಎಂದು ದಾಖಲಾಗಿದ್ದು, ಮೊನಾಲಿಸಾಳನ್ನು ಪೊಲಿಸರು ಬಂಧಿಸಿದ್ದಾರೆ.

ಅಪಾಯಕಾರಿ ಹುಡುಗಾಟಕ್ಕೆ ಒಂದು ಪುಟ್ಟ ಕುಟುಂಬದ ನೆಮ್ಮದಿ, ನಗು ಎಲ್ಲವೂ ಬಲಿಯಾದಂತಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+