UK Indian Communities: ಜಗತ್ತು ಎಷ್ಟೇ ಬೆಳೆದರು ಅರಿಯದ ಜನರು, ಹೆಣ್ಣು ಭ್ರೂಣಗಳೇ ಇವರ ಟಾರ್ಗೆಟ್?
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಎನ್ನುವ ಮಾತು ಎಲ್ಲರಿಗೂ ಗೊತ್ತಿದೆ. ಯಾಕೆ ಅಂದ್ರೆ ಹೆಣ್ಣು ಮಕ್ಕಳು ಈ ಸಮಾಜವನ್ನು ತಿದ್ದುವ ಸಾಮರ್ಥ್ಯ ಇರುವವರು ಎಂದು. ಅಲ್ಲದೇ ಆಧುನಿಕ ಕಾಲಘಟ್ಟದಲ್ಲಿ ಹೆಣ್ಣು ಮಕ್ಕಳಿಗೆ ಸರ್ಕಾರ ಕೂಡ ಸಾಕಷ್ಟು ಸೌಲಭ್ಯ ನೀಡುತ್ತಾ, ಆ ಮೂಲಕ ಸಮಾಜದ ಮುಖ್ಯವಾಹಿನಿ ಪ್ರವೇಶಿಸಲು ಎಲ್ಲಾ ಅವಕಾಶ ನೀಡುತ್ತಿದೆ. ಹಾಗೇ ಹಿಂದೆ ಇದ್ದ ಸಾಮಾಜಿಕ ಪಿಡುಗುಗಳನ್ನೂ ದೂರ ಮಾಡಲಾಗುತ್ತಿದೆ, ಇಷ್ಟೆಲ್ಲಾ ಇದ್ದರೂ ಹೆಣ್ಣು ಭ್ರೂಣ ಹತ್ಯೆ ಮಾತ್ರ ನಿಲ್ಲುತ್ತಿಲ್ಲ ಸಮಾಜದಲ್ಲಿ. ಅದರಲ್ಲೂ ಹೊರ ದೇಶಗಳಲ್ಲಿ ಹೋಗಿ ನೆಲೆಸಿ ಕೋಟಿ ಕೋಟಿ ಹಣ ಮಾಡುತ್ತಿರುವ ನಮ್ಮ ಭಾರತೀಯರು, ಹೆಣ್ಣು ಭ್ರೂಣ ಹತ್ಯೆ ವಿಚಾರದಲ್ಲಿ ಸದ್ದು ಮಾಡುತ್ತಿದ್ದಾರೆ.
ಬ್ರಿಟನ್ ನೆಲದಲ್ಲಿ ಇದೀಗ ಭಾರತೀಯರ ಪ್ರಮಾಣ ಹೆಚ್ಚಾಗಿದ್ದು, ಅಲ್ಲಿ ಹೋಗಿ ನೆಲೆಸುತ್ತಿರುವ ಮತ್ತು ಉನ್ನತ ಹುದ್ದೆಗಳನ್ನ ಪಡೆಯುತ್ತಿರುವವರ ಪೈಕಿ ಭಾರತೀಯರು ಮುಂಚೂಣಿಯಲ್ಲಿದ್ದಾರೆ. ಹೀಗಿದ್ದರೂ ಹೆಣ್ಣು ಭ್ರೂಣ ಹತ್ಯೆ ವಿಚಾರದಲ್ಲಿ ಆಘಾತಕಾರಿ ಮಾಹಿತಿಯೊಂದು ಸಂಚಲನವನ್ನೇ ಸೃಷ್ಟಿಸಿದೆ. ಅಧಿಕೃತ ಜನನ ದತ್ತಾಂಶದ ವಿಶ್ಲೇಷಣೆ ನಂತರ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಹೋಗಿ ನೆಲೆಸಿರುವ ಭಾರತೀಯ ಪೋಷಕರಿಗೆ ಜನಿಸಿದ ಗಂಡು ಮತ್ತು ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ಭಾರಿ ಅಸಮತೋಲನ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ನಡೆದ ತನಿಖೆಯ ನಂತರ ಲಿಂಗ ಆಧಾರಿತ ಗರ್ಭಪಾತದ ಬಗ್ಗೆ ಆಘಾತಕಾರಿ ಮಾಹಿತಿ ಸಿಕ್ಕಿದೆ.

100 ಹೆಣ್ಣು ಮಕ್ಕಳಿಗೆ 118 ಗಂಡು ಮಕ್ಕಳು
ಯುಕೆ ರಾಷ್ಟ್ರೀಯ ಅಂಕಿ-ಅಂಶ ಕಚೇರಿ ಸಂಗ್ರಹಿಸಿದ ಮಾಹಿತಿಯಂತೆ ಇದೀಗ 2021 ಮತ್ತು 2025ರ ನಡುವೆ ಲಿಂಗ ಅಸಮಾನತೆ ಸ್ಪಷ್ಟವಾಗಿದೆ. ಪ್ರತಿ 100 ಹೆಣ್ಣು ಮಕ್ಕಳಿಗೆ ಸುಮಾರು 118 ಗಂಡು ಮಕ್ಕಳು ಭಾರತ ಮೂಲದ ತಾಯಂದಿರಿಗೆ ಜನಿಸಿದ್ದಾರೆ ಎಂಬುದು ಈ ಅಂಕಿ ಅಂಶದಿಂದ ಇದೀಗ ಗೊತ್ತಾಗಿದೆ. ಆದರೆ ಇದು 100 ಹೆಣ್ಣು ಮಕ್ಕಳಿಗೆ 105 ಗಂಡು ಮಕ್ಕಳ ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚುಕಮ್ಮಿ ಆಗಿದೆ. ಈ ಹಿನ್ನೆಲೆ ಲಿಂಗ ಆಧಾರಿತ ಗರ್ಭಪಾತ ನಡೆದಿರುವುದು ಬೆಳಕಿಗೆ ಬಂದಿದ್ದು, ಅಲ್ಲಿನ ಸರ್ಕಾರ ಅನುಮತಿ ನೀಡಿರುವ 100 ಹೆಣ್ಣು ಮಕ್ಕಳಿಗೆ 107 ಗಂಡು ಮಕ್ಕಳು ಎಂಬ ಗರಿಷ್ಠ ಮಿತಿಗಿಂತ ಈ ಅನುಪಾತ ಹೆಚ್ಚಾಗುತ್ತಾ ಸಾಗಿದೆ. ಅದರಲ್ಲೂ ಭಾರತದಿಂದ ಹೋಗಿ ನೆಲೆಸಿರುವ ಪೋಷಕರಲ್ಲಿ ಈ ರೀತಿಯ ಲಿಂಗ ಅಸಮಾನತೆ ಹೆಚ್ಚಾಗಿದೆ ಎಂಬ ಆರೋಪ ಕೇಳಿ ಬಂದಿದೆ.












Click it and Unblock the Notifications