Nepal Protest: ನೇಪಾಳ ಅಲ್ಲೋಲ & ಕಲ್ಲೋಲ, ಮಾಜಿ ನ್ಯಾಯಮೂರ್ತಿಗೆ ಪ್ರಧಾನಿ ಪಟ್ಟ?
ನೇಪಾಳ ಪ್ರತಿಭಟನೆ ಜೋರಾಗಿದ್ದು, ಯುವ ಸಮುದಾಯ ಅಂದ್ರೆ ಜೆನ್-ಜೀ ಹೋರಾಟ ಇದೀಗ ಮತ್ತಷ್ಟು ತೀವ್ರವಾಗಿದೆ. ನೇಪಾಳ ಸೇನೆ ಕೊಟ್ಟಿರುವ ಎಚ್ಚರಿಕೆ ಹೊರತಾಗಿಯೂ ಈಗ ಅಲ್ಲಿ ಭಾರಿ ದೊಡ್ಡ ಹಿಂಸಾಚಾರ ಭುಗಿಲೆದ್ದಿದ್ದು, ಮುಂದಿನ ಪರಿಸ್ಥಿತಿ ಏನಾಗುತ್ತೋ? ಅಂತಾ ಅಲ್ಲಿನ ಜನರು ಚಿಂತೆ ಮಾಡುವಂತೆ ಆಗಿದೆ. ಇಂತಹ ಸಮಯದಲ್ಲೇ, ನೇಪಾಳ ಅಲ್ಲೋಲ & ಕಲ್ಲೋಲ, ಮಾಜಿ ನ್ಯಾಯಮೂರ್ತಿಗೆ ಪ್ರಧಾನಿ ಪಟ್ಟ?
ನೇಪಾಳ ಪ್ರತಿಭಟನೆ ಹೇಗಿದೆ ಅಂದ್ರೆ, ನೇಪಾಳದ ಸಂಸತ್ ಕಟ್ಟಡಕ್ಕೂ ಬೆಂಕಿಯನ್ನ ಹಚ್ಚಲಾಗಿದೆ. ಹೌದು, ನೇಪಾಳದಲ್ಲಿ ಶುರುವಾಗಿರುವ ಹೋರಾಟದ ಬೆಂಕಿ ಈಗ ಇಡೀ ದೇಶವನ್ನೇ ಸುಟ್ಟುಹಾಕಿದೆ. ದಿಢೀರ್ ಅಂತಾ ನೇಪಾಳ ಸರ್ಕಾರ ಯುಟ್ಯೂಬ್, ಎಕ್ಸ್, ಇನ್ಸ್‌ಟಾಗ್ರಾಮ್ & ಫೇಸ್‌ಬುಕ್ ಸೇರಿದಂತೆ ಒಟ್ಟು 26 ದೊಡ್ಡ ಸೋಷಿಯಲ್ ಮೀಡಿಯಾ ಆಪ್ ಬ್ಯಾನ್ ಮಾಡಿತ್ತು. ಈ ಸುದ್ದಿಯನ್ನು ತಿಳಿದ ಲಕ್ಷಾಂತರ ನೇಪಾಳ ಯುವತಿಯರು & ಯುವಕರು ಬೀದಿ ಬೀದಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿ ಇರುವಾಗಲೇ, ಹೋರಾಟಗಾರರು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ.

ಮಾಜಿ ನ್ಯಾಯಮೂರ್ತಿಗೆ ಪ್ರಧಾನಿ ಪಟ್ಟ?
ಹಿಂಸೆ... ಹಿಂಸೆ... ಹಿಂಸೆ... ಹೀಗೆಲ್ಲಾ, ನೇಪಾಳ ನೆಲದಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದಿದೆ. ಹೌದು, ಇದೀಗ ನೇಪಾಳದಲ್ಲಿ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರು ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲ್ ಕರ್ಕಿ ಅವರ ಬೆನ್ನಿಗೆ ನಿಂತಿದ್ದಾರೆ. ಈ ಮೂಲಕ ಅವರನ್ನೇ ನೇಪಾಳದ ಮುಂದಿನ ಪ್ರಧಾನಿ ಮಾಡಿ ಅಂತಾ ಒತ್ತಾಯ ಮಾಡುತ್ತಿದ್ದಾರೆ. ಈ ಮೂಲಕ ಇದೀಗ ನೇಪಾಳ ನೆಲದಲ್ಲಿ ಮತ್ತೊಂದು ಕ್ರಾಂತಿಯ ಕಹಳೆ ಮೊಳಗಿದೆಯಾ? ಎಂಬ ಚರ್ಚೆ ಕೂಡ ಶುರು ಆಗಿದೆ.
ನೇಪಾಳ ನೆಲದಲ್ಲಿ ಕಂಡಲ್ಲಿ ಗುಂಡು ಆದೇಶ?
ನೇಪಾಳ ಪ್ರಧಾನಿ & ರಾಷ್ಟ್ರಪತಿ ತಮ್ಮ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮತ್ತೆ ಹಿಂಸೆ ಭುಗಿಲೆದ್ದಿದೆ. ಪ್ರತಿಭಟನೆ ನಡೆಸುತ್ತಿರುವವರು ಬೆಂಕಿ ಹಚ್ಚುತ್ತಿದ್ದು, ಅಲ್ಲದೆ ಈ ರೀತಿಯಾಗಿ ಶುರುವಾಗಿದ್ದ ನೇಪಾಳ ಸೋಷಿಯಲ್ ಮೀಡಿಯಾ ಗಲಾಟೆಯಲ್ಲಿ 25 ಜನರ ಜೀವವೇ ಹೋಗಿದೆ. 500 ಜನರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಇಂತಹ ಸ್ಥಿತಿಯಲ್ಲೇ ಮತ್ತೊಂದು ಸುದ್ದಿ ನೇಪಾಳ ನೆಲದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಹಾಗಾದ್ರೆ ಮುಖ್ಯ ನ್ಯಾಯಮೂರ್ತಿ ಸುಶೀಲ್ ಕರ್ಕಿ ಅವರ ಆಯ್ಕೆ ಗ್ಯಾರಂಟಿ ಆಯ್ತಾ? ಅನ್ನೋ ಪ್ರಶ್ನೆ ಕೂಡ ಮೂಡಿದೆ. ಇದಕ್ಕೆಲ್ಲಾ ಇನ್ನೇನು ಕೆಲ ದಿನಗಳಲ್ಲಿ ಉತ್ತರ ಸಿಗುವ ನಿರೀಕ್ಷೆ ಇದೆ.












Click it and Unblock the Notifications