ರಷ್ಯಾ ವಿರುದ್ಧ ಫ್ರಾನ್ಸ್ & ಅಮೆರಿಕ ಒಗ್ಗಟ್ಟಿನ ಮಂತ್ರ!
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ ನಂತರ ಪಾಶ್ಚಿಮಾತ್ಯ ದೇಶಗಳು ಒಂದಾಗಿ ಕಳೆದ 2 ವರ್ಷಗಳಿಂದ ಉಕ್ರೇನ್ ಬೆನ್ನಿಗೆ ನಿಂತಿವೆ. ಈ ಪೈಕಿ ಅಮೆರಿಕ ಈಗಾಗಲೇ ಲಕ್ಷ ಲಕ್ಷ ಕೋಟಿ ರೂಪಾಯಿ ನೆರವನ್ನು ಉಕ್ರೇನ್‌ಗೆ ನೀಡಿ, ಯುದ್ಧದಲ್ಲಿ ರಷ್ಯಾ ವಿರುದ್ಧ ನೆರವಾಗುತ್ತಿದೆ. ಈ ವಿಚಾರ ದೊಡ್ಡ ತಿಕ್ಕಾಟಕ್ಕೆ ಕಾರಣವಾಗಿರುವ ಸಮಯದಲ್ಲೇ ಫ್ರಾನ್ಸ್ & ಅಮೆರಿಕ ಪ್ಯಾರಿಸ್ ನೆಲದಲ್ಲಿ ನಿಂತು ಮಹತ್ವದ ಘೋಷಣೆ ಹೊರಡಿಸಿವೆ.
ಉಕ್ರೇನ್ ಸೇನೆಗೆ ಅಮೆರಿಕ ಮತ್ತು ಯುರೋಪ್ ದೇಶಗಳೇ ಆಧಾರ. ಯಾಕಂದ್ರೆ, ಇವರಿಂದ ನೆರವು ಸಿಗದೇ ಇದ್ದರೆ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್‌ಗೆ ಸಾಧ್ಯವೇ ಇಲ್ಲ. ಹೀಗಾಗಿ ಉಕ್ರೇನ್ ಸೇನೆ ಬೇರೆಯವರ ಮೇಲೆ ಅವಲಂಬಿತವಾಗಿ ನರಳುತ್ತಿದೆ. ಹೀಗಿದ್ದಾಗ ಮತ್ತೊಂದು ಮಹತ್ವದ ಘೋಷಣೆ ಹೊರಡಿಸಿರುವ ಫ್ರಾನ್ಸ್ & ಅಮೆರಿಕದ ನಾಯಕರು, ಉಕ್ರೇನ್ ಪರವಾಗಿ ನಾವು ಸದಾ ಬೆಂಬಲ ನೀಡುತ್ತೇವೆ ಎಂದಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ & ಅಮೆರಿಕ ಅಧ್ಯಕ್ಷ ಜೋ ಬೈಡನ್ ಜಂಟಿಯಾಗಿ ಈ ಹೇಳಿಕೆ ನೀಡಿರುವುದು ಮತ್ತೊಮ್ಮೆ ರಷ್ಯಾಗೆ ಕೋಪ ತರಿಸಿದೆ.

ಉಕ್ರೇನ್ ಮೇಲೆ ಆಕ್ರಮಣ ಅಪರಾಧ!
ರಷ್ಯಾ ಇದೀಗ ಉಕ್ರೇನ್ ವಿರುದ್ಧ ಕೈಗೊಂಡಿರುವ ಸೇನಾ ಕಾರ್ಯಾಚರಣೆ ಘೋರ ಅಪರಾಧ ಎಂದು ಎರಡೂ ದೇಶಗಳು ಹೇಳಿವೆ. ಇದನ್ನು ನೋಡಿ ನಾವು ಸುಮ್ಮನೆ ಇರುವುದಿಲ್ಲ. ಈ ವಿಚಾರದಲ್ಲಿ ರಷ್ಯಾ ಸುಮ್ಮನಾಗಿ, ಉಕ್ರೇನ್ ವಿರುದ್ಧದ ಯುದ್ಧ ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ಪರಿಸ್ಥಿತಿ ಘೋರವಾಗಿ ಇರಲಿದೆ ಎಂದಿದ್ದಾರೆ, ಅಮೆರಿಕ ಅಧ್ಯಕ್ಷ ಜೋ ಬೈಡನ್. ಹಾಗೇ ಮತ್ತೊಂದು ಕಡೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ಕೂಡ ಬೈಡನ್ ಹೇಳಿಕೆಗೆ ಬೆಂಬಲ ನೀಡಿದ್ದು ರಷ್ಯಾದ ಕೋಪ ಮತ್ತಷ್ಟು ಹೆಚ್ಚಿಸಿದೆ.
ಹತ್ತಾರು ಲಕ್ಷ ಜನರ ಬದುಕು ಬೀದಿಗೆ!
ಸಣ್ಣ ಕಿತ್ತಾಟದಂತೆ ಶುರುವಾಗಿದ್ದ ಉಕ್ರೇನ್ VS ರಷ್ಯಾ ಯುದ್ಧವು ಇದೀಗ ಭೀಕರತೆ ಪಡೆದಿದೆ. ಲಕ್ಷಾಂತರ ಜನರ ಜೀವ ಹೋಗಿದ್ದು, ಹತ್ತಾರು ಲಕ್ಷ ಜನರ ಬದುಕು ಬೀದಿಗೆ ಬಿದ್ದಿದೆ. ಹೀಗಿದ್ದಾಗ ರಷ್ಯಾ & ಉಕ್ರೇನ್ ಯುದ್ಧ 2 ವರ್ಷ ಮುಗಿಸಿ 3ನೇ ವರ್ಷಕ್ಕೆ ಎಂಟ್ರಿ ಕೊಟ್ಟಿದೆ. ಈ ಸಮಯದಲ್ಲೇ ಪಾಶ್ಚಿಮಾತ್ಯ ದೇಶಗಳಿಂದ ಉಕ್ರೇನ್‌ಗೆ ಭರ್ಜರಿ ಬೆಂಬಲ ಸಿಕ್ಕಿದೆ. ಅದ್ರಲ್ಲೂ, ಈ ಯುದ್ಧವನ್ನು ಯುರೋಪ್ ಮತ್ತು ಅಮೆರಿಕ ಪರ್ಸನಲ್ ಆಗಿ ಸ್ವೀಕಾರ ಮಾಡಿದೆ. ಹೀಗಾಗಿ ಉಕ್ರೇನ್ ಪರವಾಗಿ ನಿಲ್ಲುತ್ತಿರುವ ಅಮೆರಿಕ ಹಾಗೂ ಯುರೋಪ್ ಖಂಡದ ದೇಶಗಳು ದೊಡ್ಡ ಮೊತ್ತದ ಉಡುಗೊರೆ ನೀಡುತ್ತಿವೆ.












Click it and Unblock the Notifications