ಮಾಜಿ ಪೋಪ್ ಬೆನೆಡಿಕ್ಟ್ XVI 95 ನೇ ವಯಸ್ಸಿನಲ್ಲಿ ನಿಧನ
ವ್ಯಾಟಿಕನ್ ಸಿಟಿ,ಡಿಸೆಂಬರ್ 31: ಮಾಜಿ ಪೋಪ್ ಬೆನೆಡಿಕ್ಟ್ XVI ಅವರು ಶನಿವಾರ 95 ನೇ ವಯಸ್ಸಿನಲ್ಲಿ ನಿಧನರಾದರು ಎಂದು ವ್ಯಾಟಿಕನ್ ಘೋಷಿಸಿದೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬೆನೆಡಿಕ್ಟ್ XVI ಅವರು ವ್ಯಾಟಿಕನ್‌ನ ಮೇಟರ್ ಎಕ್ಲೆಸೀಯೆ ಮಾನಸ್ಟರಿಯಲ್ಲಿ ಶನಿವಾರ ಬೆಳಗ್ಗೆ 9.40ಕ್ಕೆ ನಿಧನರಾದರು ಎಂದು ದುಃಖದೊಂದಿಗೆ ನಿಮಗೆ ತಿಳಿಸುತ್ತಿದ್ದೇನೆ. ಹೆಚ್ಚಿನ ಮಾಹಿತಿಯನ್ನು ಸಾಧ್ಯವಾದಷ್ಟು ಬೇಗನೆ ನೀಡಲಾಗುವುದು" ಎಂದು ವ್ಯಾಟಿಕನ್ ವಕ್ತಾರ ಮ್ಯಾಟಿಯೊ ಬ್ರೂನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಮಾರು ಒಂದು ದಶಕದ ನಂತರ ಅವರು ಆರು ಶತಮಾನಗಳಲ್ಲಿ ರಾಜೀನಾಮೆ ನೀಡಿದ ಮೊದಲ ಮಠಾಧೀಶರಾದರು. ಜರ್ಮನಿಯವರಾದ ಪೋಪ್ ಎಮೆರಿಟಸ್ ಬೆನೆಡಿಕ್ಟ್ ಅವರ ಮೂಲ ಹೆಸರು ಜೋಸೆಫ್ ರಟ್ಜಿಂಗರ್ ಆಗಿದ್ದು, ಫೆಬ್ರವರಿ 2013 ರಲ್ಲಿ ಅನಾರೋಗ್ಯದ ಕಾರಣ ನೀಡಿ ಬೆನೆಡಿಕ್ಟ್ ಅವರು ಪೋಪ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಬೆನೆಡಿಕ್ಟ್ XVI ಜರ್ಮನಿಯಲ್ಲಿ ಜನಿಸಿದರು ಮತ್ತು ಅವರ ಬಾಲ್ಯದ ಹೆಸರು ಜೋಸೆಫ್ ರಾಟ್ಜಿಂಗರ್. ಬೆನೆಡಿಕ್ಟ್ 2005 ರಲ್ಲಿ ವ್ಯಾಟಿಕನ್ ಸಿಟಿಯ ಪೋಪ್ ಆಗಿ ಆಯ್ಕೆಯಾದರು. ಆ ಸಮಯದಲ್ಲಿ ಅವರು 78 ವರ್ಷ ವಯಸ್ಸಿನವರಾಗಿದ್ದರು ಮತ್ತು ಅತ್ಯಂತ ಹಳೆಯ ಪೋಪ್ಗಳಲ್ಲಿ ಒಬ್ಬರಾಗಿದ್ದರು. ಅವರು ಸುಮಾರು ಎಂಟು ವರ್ಷಗಳ ಕಾಲ ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪೋಪ್ ಆಗಿದ್ದರು. 2013 ರಲ್ಲಿ ಪದತ್ಯಾಗ ಮಾಡಿದರು, ಅವರು 1415 ರಲ್ಲಿ ಗ್ರೆಗೊರಿ XII ನಂತರ ರಾಜೀನಾಮೆ ನೀಡಿದ ಮೊದಲ ಪೋಪ್ ಆದರು. ಅವರು ಯುರೋಪ್ನಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದರು.
ಮಾಜಿ ಪೋಪ್ ಬೆನೆಡಿಕ್ಟ್ XVI 95 ನೇ ವಯಸ್ಸಿನಲ್ಲಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
ಬೆನೆಡಿಕ್ಟ್ XVI ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ ಮತ್ತು ಮಾಜಿ ಕ್ಯಾಥೋಲಿಕ್ ಪೋಪ್ ಅವರು ಸಮಾಜಕ್ಕೆ ನೀಡಿದ ಅಮೂಲ್ಯವಾದ ಸೇವೆಯನ್ನು ಸ್ಮರಿಸಲಾಗುವುದು ಎಂದು ಹೇಳಿದರು. ತಮ್ಮ ಇಡೀ ಜೀವನವನ್ನು ಚರ್ಚ್ ಮತ್ತು ಯೇಸುಕ್ರಿಸ್ತನ ಬೋಧನೆಗಳಿಗಾಗಿ ಮುಡಿಪಾಗಿಟ್ಟ ಪೋಪ್ ಎಮೆರಿಟಸ್ ಬೆನೆಡಿಕ್ಟ್ XVI ರ ನಿಧನದಿಂದ ದುಃಖಿತನಾಗಿದ್ದೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಸಮಾಜಕ್ಕೆ ಅವರ ಅಮೂಲ್ಯ ಸೇವೆಯನ್ನು ಸ್ಮರಿಸಲಾಗುವುದು. ಅವರ ಅಗಲಿಕೆಯಿಂದ ದುಃಖಿತರಾಗಿರುವವರಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.












Click it and Unblock the Notifications