97 ಹೆಂಡಿರ ಗಂಡ, 200 ಮಕ್ಕಳ ತಂದೆ 93ನೇ ವಯಸ್ಸಲ್ಲಿ ನಿಧನ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಿನ್ನಾ(ನೈಜೀರಿಯಾ), ಜನವರಿ 31: ಇಸ್ಲಾಂ ಪ್ರವಚನಕಾರ 90ಕ್ಕೂ ಹೆಚ್ಚು ಹೆಂಡತಿಯರಿದ್ದ, ಇನ್ನೂರಕ್ಕೂ ಹೆಚ್ಚು ಮಕ್ಕಳಿದ್ದ ಅಲ್ಹಾಜೀ ಮೊಹಮ್ಮದ್ ಬೆಲೋ ಅಬೂಬಕರ್ (93) ಜನವರಿ 28ರಂದು ಮೃತಪಟ್ಟಿದ್ದಾರೆ. ಅಲ್ಪ ಕಾಲದ ಅನಾರೋಗ್ಯದ ನಂತರ ನೈಜೀರಿಯಾದ ಬಿಡಾದಲ್ಲಿ ಆತ ಕೊನೆಯುಸಿರೆಳೆದಿದ್ದಾರೆ.

ಮೃತಪಡುವ ಮೂರು ದಿನ ಮುಂಚಿನಿಂದಲೂ ಸಾರ್ವಜನಿಕವಾಗಿ ಅವರು ಕಾಣಿಸಿಕೊಳ್ಳುತ್ತಿರಲಿಲ್ಲ. ಅಬೂಬಕರ್ ಅವರ ಆಪ್ತ ಸಹಾಯಕ ಅಲ್ಹಾಜೀ ಮುತೈರು ಸಲಾವುದ್ದೀನ್ ಬೆಲ್ಲೋ ನಿಧನ ಸುದ್ದಿಯನ್ನು ಖಾತ್ರಿ ಪಡಿಸಿದ್ದಾರೆ. ಸಾವಿನ ಬಗ್ಗೆ ಅಬೂಬಕರ್ ಅವರಿಗೆ ಮುಂಚೆಯೇ ತಿಳಿದಿದ್ದಂತೆ. ಅದಕ್ಕಾಗಿ ಎಲ್ಲವೂ ಸಿದ್ಧಪಡಿಸಿಕೊಳ್ಳಿ ಎಂದು ಕೂಡ ತಿಳಿಸಿದ್ದರಂತೆ.[ಸೇನೆ ತಪ್ಪಿನಿಂದಾಗಿ ನೈಜೀರಿಯಾದಲ್ಲಿ 100ಕ್ಕೂ ಹೆಚ್ಚು ನಿರಾಶ್ರಿತರ ಹತ್ಯೆ]

Former Muslim preacher with 97 wives dies at 93

2008ರಲ್ಲಿ ಅಬೂಬಕರ್ ಬಗ್ಗೆ ಇತರ ಧರ್ಮಗುರುಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ 86 ಮಂದಿಯನ್ನು ಮದುವೆಯಾಗಿದ್ದ ಅಬೂಬಕರ್ ಗೆ, "ಇನ್ನು 48 ಗಂಟೆಗಳಲ್ಲಿ 82 ಮಂದಿಗೆ ವಿಚ್ಛೇದನ ನೀಡಬೇಕು" ಎಂದು ಒತ್ತಾಯಿಸಿದ್ದರು. "ಮದುವೆ ಆಗುವುದು ನನ್ನ ಪವಿತ್ರ ಕರ್ತವ್ಯ" ಎಂದು ಸಮರ್ಥನೆ ಮಾಡಿಕೊಂಡಿದ್ದರು ಅಬೂಬಕರ್.

ಆತ ಮದುವೆಯಾದ ಮಹಿಳೆಯರ ಪೈಕಿ ಬಹುತೇಕರು ಮದುವೆ ವೇಳೆಗಾಗಲೇ ಗರ್ಭಿಣಿಯರಾಗಿದ್ದವರಿದ್ದರು. ಇನ್ನು ಅಬೂಬಕರ್ ಗೆ 203 ಮಕ್ಕಳಿದ್ದಾರೆ. "ನಾನಾಗಿಯೇ ಯಾರನ್ನೂ ಹುಡುಕಿಕೊಂಡು ಹೋಗಿಲ್ಲ. ಅವರಾಗಿಯೇ ನನ್ನ ಬಳಿ ಬಂದವರು" ಎಂದು ತನ್ನ ಮದುವೆ ಬಗ್ಗೆ ಬಿಬಿಸಿ ಚಾನಲ್ ಗೆ ನೀಡಿದ ಸಂದರ್ಶನದಲ್ಲಿ ಅಬೂಬಕರ್ ಹೇಳಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A former Muslim preacher, who rose to fame in Nigeria for marrying more than 100 women, has died at the age of 93, media reports said. Mohammed Bello Abubakar died from an unknown illness on Saturday in Bida of Nigeria.
Please Wait while comments are loading...