ಫೋರ್ಬ್ಸ್ 2016 ವಿಶ್ವದ ಭಾರೀ ಕುಳಗಳು: ಪಟ್ಟಿಯಲ್ಲಿನ ಭಾರತೀಯರು

Posted By:
Subscribe to Oneindia Kannada

ವಿಶ್ವದ ಶ್ರೀಮಂತರ ಪಟ್ಟಿಯನ್ನು (2016) ಖ್ಯಾತ ನಿಯತಕಾಲಿಕ ಫೋರ್ಬ್ಸ್ ಬಿಡುಗಡೆ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹಲವು ಬಿಲಿನೇಯರ್ ಗಳ ಆಸ್ತಿಯು ಸ್ವಲ್ಪ ಮಟ್ಟಿಗೆ ಕರಗಿದ್ದರೆ, ಮತ್ತಷ್ಟು ಜನರದ್ದು ಆಸ್ತಿಪಾಸ್ತಿ ಒಂದೇ ಸಮನೆ ಏರುತ್ತಿದೆ.

2015 ರಿಂದ 2016ರ ಅವಧಿಯಲ್ಲಿ ಆಸ್ತಿಮೌಲ್ಯದಲ್ಲಿ ಭಾರೀ ಏರಿಕೆ ಕಂಡು, ಹತ್ತು ಸ್ಥಾನ ಮೇಲಕ್ಕೇರಿದ್ದು ಫೇಸ್ ಬುಕ್ ಮಾಲೀಕ ಮಾರ್ಕ್ ಜ್ಯೂಕರ್ಬರ್ಗ್. (ಫೋರ್ಬ್ಸ್ ವಿಶ್ವದ ಪ್ರಭಾವಿ ವ್ಯಕ್ತಿಗಳ ಪಟ್ಟಿ)

ಪಟ್ಟಿಯಲ್ಲಿ ಚೀನಾ ಮತ್ತು ಅಮೆರಿಕಾದ 33 ಉದ್ಯಮಿಗಳು ಹೊಸ ಎಂಟ್ರಿ ಪಡೆದಿದ್ದರೆ, 42 ಉದ್ಯಮಿಗಳು ಪಟ್ಟಿಯಿಂದ ಹೊರಬಿದ್ದಿದ್ದಾರೆ.

ನಾರ್ವೇ ದೇಶದ ಅಲೆಕ್ಸಾಂಡರ್ ಅಂಡರ್ಸನ್ (19) ಮತ್ತು ಅವರ ಸಹೋದರಿ ಕತ್ರಿನಾ ಅಂಡರ್ಸನ್ (20) ಪಟ್ಟಿಯಲ್ಲಿರುವ ಯುವ ಮುಖಗಳು. (ದೇಶದ 100 ಶ್ರೀಮಂತ ಸೆಲೆಬ್ರಿಟಿಗಳು)

ಫೋರ್ಬ್ಸ್ ಪಟ್ಟಿಯಲ್ಲಿ ರಷ್ಯಾದ 77, ಭಾರತದ 84, ಜರ್ಮನಿಯ 120, ಚೀನಾದ 251 ಮತ್ತು ಅಮೆರಿಕಾದ 540 ಬಿಲಿನೇಯರ್ ಗಳು ಸ್ಥಾನ ಪಡೆದಿದ್ದಾರೆ. ಪಟ್ಟಿಯಲ್ಲಿರುವ ಭಾರತೀಯರು, ಸ್ಲೈಡ್ ನಲ್ಲಿ ಮುಂದುವರಿಸಲಾಗಿದೆ (ಮೌಲ್ಯ ಅಮೆರಿಕನ್ ಡಾಲರ್ ನಲ್ಲಿ)

ಮೈಕ್ರೋಸಾಫ್ಟ್ ಮಾಲೀಕ

ಮೈಕ್ರೋಸಾಫ್ಟ್ ಮಾಲೀಕ

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮೈಕ್ರೋಸಾಫ್ಟ್ ಮಾಲೀಕ ಬಿಲ್ ಗೇಟ್ಸ್ ಮುಂದುವರಿದಿದ್ದಾರೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಅವರ ಆಸ್ತಿಯಲ್ಲಿ ನಿವ್ವಳ 79.2 ಬಿಲಿಯನ್ ನಿಂದ 75 ಬಿಲಿಯನ್ ಗೆ ಇಳಿದಿದೆ.

ಎರಡರಿಂದ ಆರನೇ ಸ್ಥಾನದ ವರೆಗೆ ಇರುವವರು

ಎರಡರಿಂದ ಆರನೇ ಸ್ಥಾನದ ವರೆಗೆ ಇರುವವರು

2. ಸ್ಪೈನ್ ಮೂಲದ ಜವಳಿ ಉದ್ಯಮಿ ಝರಾ ಸಮೂಹ ಸಂಸ್ಥೆಯ ಮಾಲೀಕ ಅಮಾನಿಕೋ ಒರ್ಟೆಗಾ
3. ಅಮೆರಿಕಾ ಮೂಲದ ಹೂಡಿಕೆದಾರ ವಾರೆನ್ ಎಡ್ವರ್ಡ್ ಬಫೆಟ್
4. ಟೆಲಿಕಾಂ ಕ್ಷೇತ್ರದ ದಿಗ್ಗಜ, ಮೆಕ್ಸಿಕೋ ಮೂಲದ ಕಾರ್ಲೋಸ್ ಸ್ಲಿಮ್
5. ಅಮೆಜಾನ್ ಸಂಸ್ಥೆಯ ಮಾಲೀಕ ಜೆಫ್ ಬೆಜಾಸ್
6. ಫೇಸ್ ಬುಕ್ ಮಾಲೀಕ ಮಾರ್ಕ್ ಜ್ಯೂಕರ್ಬರ್ಗ್
(ಚಿತ್ರದಲ್ಲಿ ವಾರೆನ್ ಬಫೆಟ್)

ಫೇಸ್ ಬುಕ್ ಮಾಲೀಕ ಮಾರ್ಕ್ ಜ್ಯೂಕರ್ಬರ್ಗ್

ಫೇಸ್ ಬುಕ್ ಮಾಲೀಕ ಮಾರ್ಕ್ ಜ್ಯೂಕರ್ಬರ್ಗ್

ಸಾಮಾಜಿಕ ಜಾಲತಾಣದ ದೈತ್ಯ ಫೇಸ್ ಬುಕ್ ಮಾಲೀಕ ಮಾರ್ಕ್ ಜ್ಯೂಕರ್ಬರ್ಗ್ ಅವರ ಆಸ್ತಿಮೌಲ್ಯ 44.6 ಬಿಲಿಯನ್,. ಕಳೆದ ವರ್ಷ ಇವರ ಆಸ್ತಿಮೌಲ್ಯ 33.4 ಬಿಲಿಯನ್ ಇದ್ದು, 2016ರ ಫೋರ್ಬ್ಸ್ ಪಟ್ಟಿಯ ಪ್ರಕಾರ ಜ್ಯೂಕರ್ಬರ್ಗ್ ಆರನೇ ವಿಶ್ವದ ಆರನೇ ಶ್ರೀಮಂತ ಬಿಲಿನೇಯರ್.

ಪಟ್ಟಿಯಲ್ಲಿರುವ ಭಾರತೀಯರು

ಪಟ್ಟಿಯಲ್ಲಿರುವ ಭಾರತೀಯರು

ರಿಲಯನ್ಸ್ ಸಂಸ್ಥೆಯ ಮಾಲೀಕ ಮುಖೇಶ್ ಅಂಬಾನಿ - 19.3 ಬಿಲಿಯನ್, ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ 36ನೇ ಸ್ಥಾನ.

ಬಿಲಿನೇಯರ್ ಭಾರತೀಯರ ಪಟ್ಟಿ
ಸನ್ ಫಾರ್ಮಾದ ಮಾಲೀಕ ದಿಲೀಪ್ ಸಾಂಘ್ವಿ - 16.7 ಬಿಲಿಯನ್, ಎರಡನೇ ಸ್ಥಾನ
ವಿಪ್ರೋ ಮಾಲೀಕ ಅಜೀಂ ಪ್ರೇಂಜಿ - 15 ಬಿಲಿಯನ್, ಮೂರನೇ ಸ್ಥಾನ
HCL ಮಾಲೀಕ ಶಿವ್ ನಡಾರ್ - 11.1 ಬಿಲಿಯನ್, ನಾಲ್ಕನೇ ಸ್ಥಾನ
ಪೂನಾವಾಲ ಗ್ರೂಪ್ ಮಾಲೀಕ, ಸಿ ಎಸ್ ಪೂನಾವಾಲ - 8.5 ಬಿಲಿಯನ್, ಐದನೇ ಸ್ಥಾನ
(ಚಿತ್ರದಲ್ಲಿ ಸಿ ಎಸ್ ಪೂನಾವಾಲ)

ಆರರಿಂದ ಹತ್ತನೇ ಸ್ಥಾನದ ವರೆಗೆ ಇರುವ ಭಾರತೀಯರು

ಆರರಿಂದ ಹತ್ತನೇ ಸ್ಥಾನದ ವರೆಗೆ ಇರುವ ಭಾರತೀಯರು

ಎರ್ಸಲಾರ್ ಮಿತ್ತಲ್ ಸಂಸ್ಥೆಯ ಮಾಲೀಕ, ಲಕ್ಷ್ಮೀ ಮಿತ್ತಲ್ - 8.4 ಬಿಲಿಯನ್, ಆರನೇ ಸ್ಥಾನ
ಕೋಟಾಕ್ ಮಹೀಂದ್ರಾ ಗ್ರೂಪಿನ ಎಂಡಿ, ಉದಯ್ ಕೋಟಾಕ್ - 6.3 ಬಿಲಿಯನ್, ಏಳನೇ ಸ್ಥಾನ
ಆದಿತ್ಯಾ ಬಿರ್ಲಾ ಗ್ರೂಪ್ ಮಾಲೀಕ, ಕುಮಾರ ಮಂಗಲಂ ಬಿರ್ಲಾ - 6.1 ಬಿಲಿಯನ್, ಎಂಟನೇ ಸ್ಥಾನ
ಭಾರ್ತಿ ಎಂಟರ್ಪ್ರೈಸಸ್ ಮಾಲೀಕ, ಸುನಿಲ್ ಮಿಠಲ್, 5.7 ಬಿಲಿಯನ್, ಒಂಬತ್ತನೇ ಸ್ಥಾನ
ಲುಪಿನ್ ಫಾರ್ಮಾ ಮಾಲೀಕ, ದೇಶ್ ಬಂಧು ಗುಪ್ತಾ, 5.5 ಬಿಲಿಯನ್, ಹತ್ತನೇ ಸ್ಥಾನ
(ಚಿತ್ರದಲ್ಲಿ: ದೇಶ್ ಬಂಧು ಗುಪ್ತಾ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Forbes released richest list 2016: Only one Indian in top fifty. Top ten list of Indians in the list.
Please Wait while comments are loading...