ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್ ಹೆಲಿಕಾಪ್ಟರ್ ದಾಳಿಗೆ ರಷ್ಯಾದಲ್ಲಿ ಹೊತ್ತಿ ಉರಿದ ತೈಲ ಸಂಗ್ರಹಿಸಿದ ಡಿಪೋ

|
Google Oneindia Kannada News

ಕೀವ್, ಏಪ್ರಿಲ್ 1: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ 37ನೇ ದಿನಕ್ಕೆ ಕಾಲಿಟ್ಟಿದೆ. ಇದರ ಮಧ್ಯೆ ಮೊದಲ ಬಾರಿಗೆ ರಷ್ಯಾದ ಗಡಿಗೆ ನುಗ್ಗಿದ ಉಕ್ರೇನ್ ಸೇನಾಪಡೆಗಳು ಹೆಲಿಕಾಪ್ಟರ್ ಮೂಲಕ ಮೊದಲ ಬಾರಿಗೆ ವೈಮಾನಿಕ ದಾಳಿ ನಡೆಸಿವೆ.
ರಷ್ಯಾದ ಬೆಲ್ಗೆರೊಡ್ ಪ್ರದೇಶದಲ್ಲಿರುವ ತೈಲ ಸಂಗ್ರಹ ಡಿಪೋದ ಮೇಲೆ ಉಕ್ರೇನ್ ಸೇನೆಗಳು ಫೈರಿಂಗ್ ನಡೆಸಿವೆ. ಹೆಲಿಕಾಪ್ಟರ್ ಮೂಲಕ ಗಡಿ ಪ್ರದೇಶಿಸಿ ನಡೆಸಿರುವ ದಾಳಿಯಿಂದ ಇಂಧನ ಸಂಗ್ರಹಿಸಿದ ಡಿಪೋ ಹೊತ್ತಿ ಉರಿದಿದೆ.

ಅರೇ ನಾವ್ ಮಾಡುತ್ತಿರುವುದು ಯುದ್ಧವೇ ಅಲ್ಲ; ರಷ್ಯಾ ಸಚಿವರೇ ಹೀಗೆ ಹೇಳುವುದಾ!?ಅರೇ ನಾವ್ ಮಾಡುತ್ತಿರುವುದು ಯುದ್ಧವೇ ಅಲ್ಲ; ರಷ್ಯಾ ಸಚಿವರೇ ಹೀಗೆ ಹೇಳುವುದಾ!?

1950ರ ಕೋರಿಯನ್ ಯುದ್ಧದ ನಂತರದಲ್ಲಿ ಮೊದಲ ಬಾರಿಗೆ ಬೇರೊಂದು ದೇಶದ ವಾಯುಪಡೆಗಳು ರಷ್ಯಾದ ಗಡಿಯನ್ನು ಪ್ರವೇಶಿಸಿ ದಾಳಿ ನಡೆಸಿರುವುದು ಎಂದು ಹೇಳಲಾಗುತ್ತಿದೆ. ಎಂ-24 ಚಾಪರ್ ಮೂಲಕ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ.

First time in 37 days war Ukraine Chopper attack on Russian Fuel Depot

ಆಕಾಶದಿಂದ ಬಿದ್ದ ಬೆಂಕಿಯ ಉಂಡೆ:
ಎತ್ತರದಲ್ಲಿ ಉಡಾವಣೆಯಾಗುತ್ತಿದ್ದ ರಾಕೆಟ್‌ನಿಂದ ಬೆಳಕಿನ ಉಂಡೆಗಳು ಬಿದ್ದಿದ್ದು, ತದನಂತರದಲ್ಲಿ ನೆಲದಲ್ಲಿ ಸ್ಫೋಟ ಸಂಭವಿಸಿದೆ. ಈ ದೃಶ್ಯಗಳು ಇಂಧನ ಸಂಗ್ರಹಿಸಿಟ್ಟಿದ್ದ ಡಿಪೋದ ಭದ್ರತಾ ಕ್ಯಾಮರಾದಲ್ಲಿ ಸೆರೆಯಾಗಿವೆ.
"ಎರಡು ಉಕ್ರೇನಿಯನ್ ಸೇನಾ ಹೆಲಿಕಾಪ್ಟರ್‌ಗಳು ನಡೆಸಿದ ವಾಯುದಾಳಿಯಿಂದಾಗಿ ಪೆಟ್ರೋಲ್ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿದೆ, ಅದು ಕಡಿಮೆ ಎತ್ತರದಲ್ಲಿ ರಷ್ಯಾದ ಪ್ರದೇಶವನ್ನು ಪ್ರವೇಶಿಸಿತು" ಎಂದು ಬೆಲ್ಗೊರೊಡ್ ಪ್ರದೇಶದ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೊವ್ ಟೆಲಿಗ್ರಾಮ್‌ನಲ್ಲಿ ಬರೆದಿದ್ದಾರೆ.
ಉಕ್ರೇನ್ ನಡೆಸಿರುವ ದಾಳಿಯಿಂದ ಶೇಖರಣಾ ಘಟಕದಲ್ಲಿದ್ದ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು. ಬೆಲ್ಗೊರೊಡ್‌ನಲ್ಲಿನ ಇಂಧನ ಡಿಪೋದಲ್ಲಿ ಸಂಭವಿಸಿದ ಭಾರಿ ದಾಳಿಯನ್ನು ಖಚಿತಪಡಿಸಲು ಅಥವಾ ನಿರಾಕರಿಸಲು ಸಾಧ್ಯವಿಲ್ಲ ಎಂದು ಉಕ್ರೇನ್ ಹೇಳಿದೆ.

Recommended Video

ಆಟದಲ್ಲಿ ಸೋತಾಗ ಅಥವಾ ಗೆದ್ದಾಗ ತಂಡದೊಳಗೆ ಏನೆಲ್ಲಾ ನಡೆಯುತ್ತೆ ಗೊತ್ತಾ? | Oneindia Kannada
First time in 37 days war Ukraine Chopper attack on Russian Fuel Depot

ಉಕ್ರೇನ್-ರಷ್ಯಾ ನಡುವಿನ ಯುದ್ಧ:
ಉಕ್ರೇನಿಯನ್ ನಗರವಾದ ಖಾರ್ಕಿವ್‌ನಿಂದ ಸುಮಾರು 80 ಕಿಲೋಮೀಟರ್‌ಗಳಷ್ಟು ದೂರದಲ್ಲಿ ಬೆಲ್ಗೊರೊಡ್ ಪ್ರದೇಶವಿದೆ. ಉಕ್ರೇನ್ ಮೇಲೆ ರಷ್ಯಾದ ಸೇನಾ ಕಾರ್ಯಾಚರಣೆ ಆರಂಭವಾಗಿದೆ ಒಂದೂವರೆ ತಿಂಗಳು ಕಳೆದಿದೆ. ಫೆಬ್ರವರಿ 24ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಸಮರ ಸಾರಿದರು. ಅಲ್ಲಿಂದ್ ಇಲ್ಲಿಯವರೆಗೆ ಉಭಯ ರಾಷ್ಟ್ರಗಳ ನಡುವೆ ದಾಳಿ-ಪ್ರತಿದಾಳಿ ನಡೆಯುತ್ತಿವೆ. ಉಕ್ರೇನಿನಲ್ಲಿ 153ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದು, 245 ಮಕ್ಕಳು ಗಾಯಗೊಂಡಿದ್ದಾರೆ. ಎರಡು ರಾಷ್ಟ್ರಗಳ ಮಧ್ಯೆ ಯುದ್ಧ ಆರಂಭವಾಗಿ 37 ದಿನಗಳೇ ಕಳೆದಿವೆ. ಆದರೆ ಈಗ ರಷ್ಯಾ ವಿದೇಶಾಂಗ ಸಚಿವರು ಮಾತ್ರ ನಾವು ಯುದ್ಧ ಮಾಡುತ್ತಿಲ್ಲ ಎನ್ನುತ್ತಿದ್ದಾರೆ.

English summary
First time in 37 days war Ukraine Chopper attack on Russian Fuel Depot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X