Video: ಎಣ್ಣೆ ಏಟಿನಲ್ಲಿ ಸಖತ್ ಸ್ಟೆಪ್ಸ್ ಹಾಕಿದ ಪ್ರಧಾನಮಂತ್ರಿ!
ಹೆಲ್ಸಿಂಕಿ, ಆಗಸ್ಟ್ 19: ಫಿನ್ ಲ್ಯಾಂಡ್ ಪ್ರಧಾನಮಂತ್ರಿ ಸನ್ನಾ ಮರಿನ್ ಖಾಸಗಿ ಪಾರ್ಟಿಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹಲ್-ಚಲ್ ನಡೆಸಿದೆ. ಈ ಬಗ್ಗೆ ಸಾರ್ವಜನಿಕ ಟೀಕೆಯನ್ನು ಎದುರಿಸಿದ ಅಲ್ಲಿನ ಪ್ರಧಾನಿ ಈಗ ಮಾದಕದ್ರವ್ಯ ಪರೀಕ್ಷೆಯನ್ನು ಎದುರಿಸುವುದಕ್ಕೂ ಸಿದ್ಧ ಎಂದು ಹೇಳಿಕೊಂಡಿದ್ದಾರೆ.
ಸೆಲೆಬ್ರಿಟಿಗಳೊಂದಿಗೆ ಪಾರ್ಟಿ ಮಾಡುವ ವಿಡಿಯೋಗಳ ಬಗ್ಗೆ ಕೆಲವು ಟೀಕೆಗಳನ್ನು ಎದುರಿಸಿದ 36 ವರ್ಷ ವಯಸ್ಸಿನ ಸನ್ನಾ ಮರಿನ್, ಖಾಸಗಿ ಪಾರ್ಟಿಯಲ್ಲಿ ತೆಗೆದ ವಿಡಿಯೋಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ''ನನಗೆ ಮುಚ್ಚಿಡಲು ಏನೂ ಇಲ್ಲ. ನಾನು ಯಾವತ್ತೂ ಡ್ರಗ್ಸ್ ಸೇವಿಸಿಲ್ಲ,'' ಎಂದು ಅವರು ಹೇಳಿರುವ ಬಗ್ಗೆ ಉಲ್ಲೇಖಿಸಲಾಗಿದೆ.
ಅವರು ತಮ್ಮನ್ನು ತಾನು ಸಮರ್ಥಿಸಿಕೊಂಡಿದ್ದು, ವಿಜೃಂಭಣೆಯಿಂದ ಪಾರ್ಟಿ ಮಾಡುವುದಕ್ಕೆ ಡ್ರಗ್ಸ್ ಒಂದೇ ಕಾರಣವಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಸಂಬಂಧ ಕೆಲವು ಮಾಧ್ಯಮಗಳು ಕ್ಲಿಪ್‌ಗಳಲ್ಲಿ ಕೊಕೇನ್‌ಗೆ ಗ್ರಾಮ್ಯ ಪದವನ್ನು ಬಳಸಿದ ನಂತರದಲ್ಲಿ ಟೀಕೆಗಳು ಶುರುವಾಯಿತು. ಆದರೆ ಇತರರು ಇದನ್ನು ಮದ್ಯ ಎಂದು ಅರ್ಥೈಸುವ ಸಾಧ್ಯತೆ ಹೆಚ್ಚಾಗಿದೆ ಅಂತಾ ಹೇಳಿದರು.

ಪ್ರಧಾನಿ ಸನ್ನಾ ಮರಿನ್ ವಾದವೇನು?
ವೈಎಲ್‌ಇ ಪ್ರಕಾರ ಅವರು ಕೇವಲ ಮದ್ಯ ಸೇವಿಸಿದ್ದಾರೆ. ಯಾವುದೇ ಅಕ್ರಮ ಪದಾರ್ಥವನ್ನು ಯಾರಾದರೂ ಸೇವಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಪ್ರಧಾನಿ ಸನ್ನಾ ಮರಿನ್ ವಾದಿಸಿದರು.
ಪ್ರಧಾನಮಂತ್ರಿ ಸನ್ನಾ ಮರಿನ್ ಸ್ವಯಂಪ್ರೇರಿತರಾಗಿ ಡ್ರಗ್ಸ್ ಪರೀಕ್ಷೆಯನ್ನು ತೆಗೆದುಕೊಳ್ಳುವಂತೆ ವಿರೋಧ ಪಕ್ಷದ ಫಿನ್ಸ್ ಪಕ್ಷದ ನಾಯಕಿ ರಿಕ್ಕಾ ಪುರ್ರಾ ಕರೆ ನೀಡಿದರು. ಅವರ ಕರೆಯನ್ನು ಮರಿನ್ ಅವರ ಸಾಮಾಜಿಕ ಪ್ರಜಾಪ್ರಭುತ್ವವಾದಿಗಳ ಒಕ್ಕೂಟದ ಪಾಲುದಾರ ಅಗ್ರಿಯಾನ್ ಸೆಂಟರ್ ಪಾರ್ಟಿಯ ಮಿಕ್ಕೊ ಕರ್ಣ ಕೂಡಾ ಉಲ್ಲೇಖಿಸಿದ್ದರು.
ವಿಡಿಯೋ ವೈರಲ್:
ಫಿನ್‌ಲ್ಯಾಂಡ್‌ನ ಪ್ರಧಾನಿ ಸನ್ನಾ ಮರಿನ್ ತಮ್ಮ ಪಾರ್ಟಿಯ ವೀಡಿಯೊ ಸೋರಿಕೆಯಾದ ನಂತರ ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿದ ನಂತರ ಹಿನ್ನಡೆ ಎದುರಿಸುತ್ತಿದ್ದಾರೆ. ಮರಿನ್ ಸ್ನೇಹಿತರ ಗುಂಪಿನೊಂದಿಗೆ ಮದ್ಯಪಾನ ಮಾಡುವುದನ್ನು, ಫಿನ್ನಿಷ್ ರಾಪರ್ ಪೆಟ್ರಿ ನೈಗಾರ್ಡ್ ಮತ್ತು ಪಾಪ್ ಗಾಯಕ ಆಂಟಿ ಟುಯಿಸ್ಕು ಅವರ ಹಾಡುಗಳನ್ನು ಹಾಡುವುದು ಮತ್ತು ನೃತ್ಯ ಮಾಡುವುದು ಈ ವಿಡಿಯೋದಲ್ಲಿ ತೋರಿಸಲಾಗಿದೆ.
Finland’s Prime Minister @MarinSanna is in the headlines after a video of her partying was leaked today.
— Visegrád 24 (@visegrad24) August 17, 2022
She has previously been criticized for attending too many music festivals & spending too much on partying instead of ruling.
The critics say it’s not fitting for a PM. pic.twitter.com/FbOhdTeEGw
-
Viral Video: ಕಡಿಮೆ ಹಣದಲ್ಲಿ ಬದುಕೋದು ಹೇಗೆ ? ಬೆಂಗಳೂರು ಇಂಟರ್ನ್ ಹೇಳಿದ ಟ್ರಿಕ್ಗಳು -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ












Click it and Unblock the Notifications