ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಿಡೆಲ್ ಕ್ಯಾಸ್ಟ್ರೋ ಹಿರಿಯ ಮಗ ಅಣು ವಿಜ್ಞಾನಿ ಆತ್ಮಹತ್ಯೆ

By Mahesh
|
Google Oneindia Kannada News

ಮಿಯಾಯಿ, ಫೆಬ್ರವರಿ 02: ಫಿಡೆಲಿಟೋ -ಲಿಟ್ಲ್ ಫಿಡೆಲ್ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಫಿಡೆಲ್ ಕ್ಯಾಸ್ಟ್ರೋ ಡಿಯಾಜ್ ಬಲಾರ್ಟ್ ಅವರು ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಮೆರಿಕಕ್ಕೆ ಸೆಡ್ಡು ಹೊಡೆದಿದ್ದ ಕ್ಯೂಬಾದ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋ ಅವರ ಹಿರಿಯ ಮಗ ಡಿಯಾಜ್ ಅವರು ತಮ್ಮದೇ ಆದ ವೃತ್ತಿ ಬದುಕು ಕಂಡುಕೊಂಡಿದ್ದರು. ಕ್ಯಾಸ್ಟ್ರೋ ಸೀನಿಯರ್ ಜತೆ ಅಷ್ಟಾಗಿ ಉತ್ತಮ ಸಂಬಂಧವನ್ನು ಹೊಂದಿರಲಿಲ್ಲ.

Fidel Castro's Eldest Son, A Bookish Nuclear Scientist, Commits Suicide

ತಂದೆ ನಡೆದ ಹಾದಿಯನ್ನು ತುಳಿಯದೇ ಇಡೀ ಜೀವನವನ್ನು ವಿಜ್ಞಾನಕ್ಕಾಗಿ ಮುಡಿಪಿಟ್ಟಿದ್ದರು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದರು.

68 ವರ್ಷ ವಯಸ್ಸಿನ ಡಿಯಾಜ್ ಅವರು ನೋಡಲು ಫಿಡೆಲ್ ಕ್ಯಾಸ್ಟ್ರೋ ರೀತಿಯೇ ಇದ್ದರು. ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಡಿಯಾಜ್ ಅವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಕ್ಯೂಬಾದ ಸರ್ಕಾರಿ ಮಾಧ್ಯಮ ಸಂಸ್ಥೆ ಹೇಳಿದೆ.

ಸೋವಿಯೇಟ್ ಯೂನಿಯನ್ ನಲ್ಲಿ ಶಿಕ್ಷಣ ಪಡೆದು ಕ್ಯೂಬಾದ ಕೌನ್ಸಿಲ್ ಆಫ್ ಸ್ಟೇಟ್ ನ ಸಲಹೆಗಾರ ಹಾಗೂ ಅಕಾಡೆಮಿ ಆಫ್ ಸೈನ್ಸ್ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಫಿಡೆಲ್ ಕ್ಯಾಸ್ಟ್ರೋ 90ನೇ ವಯಸ್ಸಿನಲ್ಲಿ ನವೆಂಬರ್ 26, 2016ರಂದು ನಿಧನರಾಗಿದ್ದರು.

English summary
Fidel Castro Diaz-Balart, the late Cuban leader's eldest son, took his own life after a struggle with depression, Cuba's state media reported on Thursday reported Washington Post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X