Fact Check: ಸಂಸದೆ ಮನೆಯಲ್ಲಿ 542.69 ಕೋಟಿ ನಗದು, 27 ಕೆ.ಜಿ. ಚಿನ್ನದ ಒಳಉಡುಪುಗಳ ಪತ್ತೆ, ಇಲ್ಲಿದೆ ಅಸಲಿ ಸತ್ಯ

Fact Check Gold: ಇತ್ತೀಚಿನ ದಿನಗಳಲ್ಲಿ ನಿಧಿ ಪತ್ತೆಯಂತಹ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ನಡುವೆಯೇ ಸಂಸದೆಯೊಬ್ಬರ ಮನೆಯಲ್ಲಿ 57 ಮಿಲಿಯನ್ ಯುಎಸ್‌ ಡಾಲರ್‌ ನಗದು, 27 ಕೆ.ಜಿ.ಯಷ್ಟು ಬಂಗಾರದಿಂದ ತಯಾರಿಸಿದ ಒಳ ಉಡುಪುಗಳು ಪತ್ತೆಯಾಗಿವೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಾಗಾದ್ರೆ ಅಸಲಿ ಸತ್ಯ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಇರಾಕ್ ಸಂಸದೆ ಹಿಂದ್-ಅಲ್ ಅಬ್ಬಾಸಿ ಅವರ ಮನೆಯ ಮೇಲಿನ ದಾಳಿ ನಡೆಸಿದ್ದು, ಈ ವೇಳೆ ಅಲ್ಲಿ ಅಪಾರ ಪ್ರಮಾಣದ ನಗದು ಹಾಗೂ ಚಿನ್ನದ ಒಳ ಉಡುಪುಗಳ ಸಿಕ್ಕಿವೆ ಎನ್ನುವ ಸುದ್ದಿ ಜಾಗತಿಕ ಮಟ್ಟದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ವೈರಲ್ ಸುದ್ದಿಯ ಹಿಂದಿನ ಸತ್ಯಾಸತ್ಯತೆಯನ್ನು ಇಲ್ಲಿ ತಿಳಿಯಿರಿ.

Fact Check Were 57 Million Cash and Gold Underwear Found at Iraqi MP s House Truth Revealed

ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆ

ಇರಾಕ್ ಪ್ರಧಾನಿ ಅಲಿ ಅಲ್-ಜೈದಿ ಅವರ ಸರ್ಕಾರದ ಆದೇಶದ ಮೇರೆಗೆ ಇರಾಕ್‌ನಲ್ಲಿ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ದೇಶದ ಭಯೋತ್ಪಾದನಾ ನಿಗ್ರಹ ದಳ ಮತ್ತು ವಿಶೇಷ ಕಾರ್ಯಾಚರಣೆ ಪಡೆಗಳು ಬಾಗ್ದಾದ್‌ನ ಅತ್ಯಂತ ಸುರಕ್ಷಿತ ವಲಯವಾದ ಗ್ರೀನ್ ಝೋನ್ ಸೇರಿದಂತೆ ಹಲವು ಭಾಗಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿವೆ. ಈ ವೇಳೆ ಹಾಲಿ ಹಾಗೂ ಮಾಜಿ ಸಚಿವರು, ಅಧಿಕಾರಿಗಳು ಸೇರಿದಂತೆ ಸುಮಾರು 53ಕ್ಕೂ ಹೆಚ್ಚು ಪ್ರಭಾವಿ ರಾಜಕಾರಣಿಗಳನ್ನು ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಚಟುವಟಿಕೆಗಳ ಆರೋಪದಡಿ ಬಂಧಿಸಲಾಗಿದೆ. ಇದರಲ್ಲಿ ಮಹಿಳಾ ಸಂಸದೆ ಹಿಂದ್-ಅಲ್ ಅಬ್ಬಾಸಿ ಅವರೂ ಒಬ್ಬರಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್

ಸಂಸದೆ ಹಿಂದ್-ಅಲ್ ಅಬ್ಬಾಸಿ ಅವರ ಮನೆಯ ಮೇಲಿನ ದಾಳಿಯ ನಂತರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಪೋಸ್ಟ್‌ಗಳು ಹರಿದಾಡಲಾರಂಭಿಸಿದವು. ಅವುಗಳಲ್ಲಿ 'ಸಂಸದೆಯ ಮನೆಯಿಂದ ತನಿಖಾಧಿಕಾರಿಗಳು 57 ಮಿಲಿಯನ್ ಯುಎಸ್ ಡಾಲರ್ (ಭಾರತ ರೂಪಾಯಿ ಮೌಲ್ಯದಲ್ಲಿ ಸುಮಾರು 542.69 ಕೋಟಿ ರೂ.) ನಗದು ಹಣ, 27 ಕೆಜಿ ಪರಿಶುದ್ಧ ಚಿನ್ನದ ಬಿಸ್ಕೆಟ್‌ಗಳು ಮತ್ತು ಸಂಪೂರ್ಣ ಚಿನ್ನದಿಂದ ತಯಾರಿಸಲಾದ ಒಳ ಉಡುಪುಗಳನ್ನು ವಶಪಡಿಸಿಕೊಂಡಿದ್ದಾರೆ,' ಎಂದು ಹೇಳಲಾಗಿತ್ತು. ಕೆಲವು ಪೋಸ್ಟ್‌ಗಳಲ್ಲಿ ಚಿನ್ನದ ಒಳ ಉಡುಪುಗಳ ಚಿತ್ರಗಳನ್ನೂ ಜೋಡಿಸಿ ಶೇರ್ ಮಾಡಿಕೊಳ್ಳಲಾಗಿದೆ.

ಅಸಲಿ ಸತ್ಯ ಏನು?

ಈಗ ಸಿಕ್ಕಿರುವ ಮಾಹಿತಿ ಪ್ರಕಾರ, ಇರಾಕ್ ಸರ್ಕಾರವು ಭ್ರಷ್ಟಾಚಾರದ ಆರೋಪದ ಮೇಲೆ ಸಂಸದೆ ಹಿಂದ್-ಅಲ್ ಅಬ್ಬಾಸಿ ಮತ್ತು ಇತರ ರಾಜಕಾರಣಿಗಳ ಮನೆಗಳ ಮೇಲೆ ದಾಳಿ ನಡೆಸಿ, ಅವರನ್ನು ಬಂಧಿಸಿರುವುದು ಹಾಗೂ ಅವರ ನಿವಾಸಗಳಿಂದ ಕೋಟ್ಯಂತರ ಮೌಲ್ಯದ ಅಧಿಕೃತ ನಗದು ಹಾಗೂ ಬಂಗಾರವನ್ನು ಜಪ್ತಿ ಮಾಡಿರುವುದು ನೂರಕ್ಕೆ ನೂರು ನಿಜ.

ತನಿಖಾ ಸಂಸ್ಥೆಗಳು ಹೇಳುವುದೇನು?

ಆದರೆ ಇರಾಕ್‌ನ ತನಿಖಾ ಸಂಸ್ಥೆಗಳು, ಅಧಿಕೃತ ಸರ್ಕಾರಿ ಮಾಧ್ಯಮಗಳು ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಚಿನ್ನದ ಒಳ ಉಡುಪು ಪತ್ತೆಯಾಗಿದೆ ಎಂಬ ಯಾವುದೇ ಉಲ್ಲೇಖವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿರುವ ಚಿತ್ರಗಳು ಹಳೆಯದಾಗಿದ್ದು, ಈ ದಾಳಿಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಭ್ರಷ್ಟ ರಾಜಕಾರಣಿಗಳ ಐಷಾರಾಮಿ ಜೀವನ ಶೈಲಿಯನ್ನು ಕಂಡು ಸ್ಥಳೀಯ ಸಾಮಾಜಿಕ ಜಾಲತಾಣ ಬಳಕೆದಾರರು ವದಂತಿಗಳನ್ನು ಸೃಷ್ಟಿಸಿದ್ದಾರೆ ಎಂದು ತಿಳಿದುಬಂದಿದೆ.

ಇರಾಕ್ ಸಂಸದೆಯ ಮನೆಯಲ್ಲಿ ಭ್ರಷ್ಟಾಚಾರದ ಕಪ್ಪುಹಣ ಮತ್ತು ಚಿನ್ನದ ನಿಧಿ ಪತ್ತೆ ಆಗಿರುವುದು ಸತ್ಯ. ಆದರೆ ಅಲ್ಲಿ ಸಿಕ್ಕಿದೆ ಎನ್ನಲಾದ 490 ಕೋಟಿ ರೂಪಾಯಿ ಮೊತ್ತ ಹಾಗೂ ಚಿನ್ನದ ಒಳ ಉಡುಪುಗಳ ಕಥೆ ಕೇವಲ ಸಾಮಾಜಿಕ ಜಾಲತಾಣಗಳ ವೈರಲ್ ವದಂತಿ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+