ಚಂದ್ರನ ಮೇಲೆ ನಡೆದ ಕೊನೆಯ ಮಾನವ ಯೂಜಿನ್ ನಿಧನ

Posted By:
Subscribe to Oneindia Kannada

ಹೂಸ್ಟನ್, ಜನವರಿ 17: ಚಂದ್ರನತ್ತ ಒಟ್ಟು ಮೂರು ಬಾರಿ ಯಾನ ಕೈಗೊಂಡು, ಶಶಿಯ ಮೇಲ್ಮೈ ಮೇಲೆ ಓಡಾಡಿದ ಕೊನೆಯ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಖಗೋಳ ಯಾತ್ರಿಕ ಯುಜಿನ್ ಆ್ಯಂಡ್ರ್ಯೂ ಸೆನಾನ್ (82) ಸೋಮವಾರ ನಿಧನರಾಗಿದ್ದಾರೆ. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಟ್ವೀಟರ್ ಮೂಲಕ ಈ ಬಗ್ಗೆ ಅಧಿಕೃತವಾಗಿ ಹೇಳಿದೆ.

1972ರ ಡಿ. 11ರಂದು ಚಂದ್ರನಲ್ಲಿಗೆ ನಾಸಾ ಕಳುಹಿಸಿದ್ದ ಮಾನವ ಸಹಿತ ಅಪೊಲೊ 17 ಗಗನ ನೌಕೆಯ ಕಮಾಂಡರ್ ಆಗಿದ್ದ ಅವರು, ಚಂದ್ರನ ಮೇಲೆ ಅಡ್ಡಾಡಿ ಮರಳಿದ್ದರು. ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಮಾನವ ಚಂದ್ರನ ಮೇಲೆ ಕಾಲಿಟ್ಟಿಲ್ಲ.

1934ರ ಮಾರ್ಚ್ 14ರಂದು ಜನಿಸಿದ್ದ ಶಿಕಾಗೋನಲ್ಲಿ ಜನಿಸಿದ್ದ ಅವರು, ಅಮೆರಿಕದ ನೌಕಾಪಡೆಯ ಕಮಾಂಡರ್ ಆಗಿಯೂ ಸೇವೆ ಸಲ್ಲಿಸಿದ್ದರು.

ಮೇವುಡ್ ನಲ್ಲಿರುವ ಪ್ರೊವಿಸೊ ಟೌನ್ ಶಿಪ್ ಹೈಸ್ಕೂಲಿನಿಂದ ಅವರು, ಪದವಿ ಪಡೆದಿದ್ದರು. ಪರ್ಡು ವಿಶ್ವವಿದ್ಯಾಲಯದಿಂದ 1956ರಲ್ಲಿ ಅವರು, ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದರು. ಆನಂತರ, ಕ್ಯಾಲಿಫ್ ನಲ್ಲಿನ ಮಾಂಟೆರೇಯಲ್ಲಿರುವ ಯುಎಸ್ ನೇವಲ್ ಕಾಲೇಜಿನಲ್ಲಿ ಅವರು, ಏರೋನಾಟಿಕಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.(ಚಿತ್ರ ಕೃಪೆ: ನಾಸಾ)

ಆನಂದದೇ ತೇಲಾಡುವ

ಆನಂದದೇ ತೇಲಾಡುವ

ಜೆಟ್ ವಿಮಾನಗಳಲ್ಲಿ ಹಾರಾಡುವುದನ್ನು ತುಂಬಾ ಇಷ್ಟಪಡುತ್ತಿದ್ದ ಅವರು, ನೌಕಾ ಪಡೆಯ ಸೇವೆಯಲ್ಲಿದ್ದಾಗ ಒಟ್ಟಾರೆಯಾಗಿ ಸುಮಾರು 5 ಸಾವಿರ ಗಂಟೆಗಳಷ್ಟು ಕಾಲ ಜೆಟ್ ವಿಮಾನ ಹಾರಾಡಿಸಿರುವ ಖ್ಯಾತಿ ತಮ್ಮದಾಗಿಸಿಕೊಂಡಿದ್ದರು.

ಚಂದದಿಂದ ಆತನೊಡವಾಡುವಾಸೆ

ಚಂದದಿಂದ ಆತನೊಡವಾಡುವಾಸೆ

ಇದೇ ಹಾರಾಡುವ ಅಭೀಪ್ಸೆಯು ನೌಕಾಪಡೆಯಿಂದ ನಿವೃತ್ತಿ ಹೊಂದಿದ ನಂತರ ಅವರಿಗೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ನಾಸಾ) ಹೆಬ್ಬಾಗಿಲು ತೆರೆಯುವಂತೆ ಮಾಡಿತ್ತು. ಖಗೋಳ ಯಾತ್ರಿಕರಾಗಿ ನಾಸಾಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡ ನಂತರ, 1966ರ ಜೂನ್ ಹಾಗೂ 1969ರ ಮೇ ತಿಂಗಳುಗಳಲ್ಲಿ ಕೈಗೊಳ್ಳಲಾಗಿದ್ದ ಚಂದ್ರ ಯಾನಗಳಲ್ಲೂ ಭಾಗವಹಿಸಿ ಚಂದ್ರನಲ್ಲಿಗೆ ತೆರಳಿ ಬಂದಿದ್ದರು.

ಮೇಲೇರುವ ಬಾರಾ, ಬಾರಾ

ಮೇಲೇರುವ ಬಾರಾ, ಬಾರಾ

ಅಮೆರಿಕದ ಈ ಖಗೋಳಯಾತ್ರಿಕ 1972ರ ಡಿ. 11ರಂದು ಚಂದ್ರನಲ್ಲಿಗೆ ನಾಸಾ ಕಳುಹಿಸಿದ್ದ ಮಾನವ ಸಹಿತ ಅಪೊಲೊ 17 ಗಗನ ನೌಕೆಯ ಕಮಾಂಡರ್ ಆಗಿ ಚಂದ್ರನತ್ತ ಪ್ರಯಾಣ ಬೆಳೆಸಿದ್ದರು.

ಇದ್ದರೆ ಇಲ್ಲಿ, ಹೋದರೆ ಮತ್ತೊಂದರಲ್ಲಿ!

ಇದ್ದರೆ ಇಲ್ಲಿ, ಹೋದರೆ ಮತ್ತೊಂದರಲ್ಲಿ!

1972ರ ಆ ಪಯಣದಲ್ಲಿ ರೊನಾಲ್ಡ್ ಇವಾಸ್, ಹ್ಯಾರಿಸನ್ ಶ್ಮಿಟ್ ಎಂಬ ಮತ್ತಿಬ್ಬರು ಖಗೋಳ ಯಾತ್ರಿಗಳಿದ್ದರು. ಆ ಯಾತ್ರೆಯಲ್ಲಿ ಯೂಜಿನ್, ಹ್ಯಾರಿಸನ್ ಜತೆಗೂಡಿ ಸುಮಾರು ಮೂರು ದಿನಗಳ ಕಾಲ ಚಂದ್ರನನ್ನು ತಮ್ಮ ಮನೆಯನ್ನಾಗಿಸಿ ತಂಗಿದ್ದರು.

ಅಲ್ಲಿದ್ದೆ ಸುಮ್ಮನೆ!

ಅಲ್ಲಿದ್ದೆ ಸುಮ್ಮನೆ!

ಮೂರು ದಿನಗಳ ಕಾಲ ಅಲ್ಲಿಯೇ ತಂಗಿದ್ದ ಅವರು, ಹ್ಯಾರಿಸನ್ ಜತೆಗೂಡಿ ಚಂದ್ರನ ಮೇಲ್ಮೈ ಮೇಲೆ ನಾಸಾ ಸೂಚಿಸಿದ್ದ ಕೆಲವಾರು ಪರೀಕ್ಷೆಗಳನ್ನು ಕೈಗೊಂಡಿದ್ದರು. ರೊನಾಲ್ಡ್ ಅವರು ಗಗನ ನೌಕೆಯಲ್ಲೇ ಕುಳಿತು ಅಲ್ಲಿನ ಯಂತ್ರೋಪಕರಣಗಳನ್ನು ನಿಯಂತ್ರಿಸಿದ್ದರು. ಮೂರು ದಿನಗಳ ನಂತರ, ಈ ಮೂವರೂ ಭೂಮಿಗೆ ವಾಪಸ್ಸಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The last person to leave footprints on the moon has died. NASA reported that Gene Cernan died Monday at the age of 82. Former astronaut was final person to leave footprints on lunar surface as commander of Apollo 17 in 1972.
Please Wait while comments are loading...