10 ಸಾವಿರ ವರ್ಷಗಳ ಬಳಿಕ ಜ್ವಾಲಾಮುಖಿ ಸ್ಫೋಟ; ಭಾರತದತ್ತ ದಟ್ಟ ಹೊಗೆ: ವಿಮಾನ ಸಂಚಾರದಲ್ಲಿ ವ್ಯತ್ಯಯ!
ಬರೋಬ್ಬರಿ 10 ಸಾವಿರ ವರ್ಷಗಳಿಂದ ಪ್ರಶಾಂತವಾಗಿದ್ದ ಜ್ವಾಲಾಮುಖಿ ಮೊದಲ ಬಾರಿಗೆ ಸ್ಫೋಟಗೊಂಡಿದೆ. ಇಥಿಯೋಪಿಯಾದಲ್ಲಿ ಜ್ವಾಲಾಮುಖಿಯೊಂದು ಸ್ಫೋಟಗೊಂಡಿದ್ದು, ವಿಜ್ಞಾನಿಗಳು ಇದನ್ನ ಬಹಳ ಅಪರೂಪದಲ್ಲೇ ಅಪರೂಪದ ವಿದ್ಯಾಮಾನ ಎಂದು ಹೇಳಿದ್ದಾರೆ. ಜ್ವಾಲಾಮುಖಿ ಸ್ಫೋಟದಿಂದ ಆಕಾಶದಲ್ಲಿ ಹೊಗೆ ಮತ್ತು ಬೂದಿ ಆವರಿಸಿದೆ.
ಹೈಲಿ ಗುಬ್ಬಿ ಬಳಿ ಜ್ವಾಲಾಮುಖಿ ಸ್ಫೋಟವಾಗಿ, ಬೂದಿ ತುಂಬಿದ ದಟ್ಟವಾದ ಹೊಗೆ ಆವರಿಸಿದೆ. ಈ ಸ್ಫೋಟದ ಪರಿಣಾಮ ಭಾರತದ ಮೇಲೆ ವಿಶೇಷವಾಗಿ ವಾಯುವ್ಯ ಭಾರತದ ಮೇಲೆ ಆಗಲಿದೆ. ಸೋಮವಾರ ರಾತ್ರಿ ಹೊತ್ತಿಗೆ ಬೂದಿಯುಕ್ತ ಮೋಡಗಳು ಗುಜರಾತ್‌ನತ್ತ ಚಲಿಸಿ, ನಂತರ ರಾಜಸ್ಥಾನ, ದೆಹಲಿ-ಎನ್‌ಸಿಆರ್ ಪ್ರದೇಶಗಳು ಮತ್ತು ಪಂಜಾಬ್ ರಾಜ್ಯಗಳತ್ತ ಬರಲಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಜ್ವಾಲಾಮುಖಿ ಸ್ಫೋಟದಿಂದ ಆವರಿಸಿದ ದಟ್ಟ ಹೊಗೆ, ಬೂದಿಯುಕ್ತ ಗಾಳಿಯಿಂದಾಗಿ ಹಲವು ವಿಮಾನಗಳ ಸಂಚಾರಕ್ಕೆ ಅಡಚಣೆಯಾಗಿದೆ.

ಭೂಮಿಯ ಮೇಲಿನ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾದ ಮತ್ತು ನಿರಂತರ ಲಾವಾ ಸರೋವರಕ್ಕೆ ನೆಲವಾಗಿರುವ ಎರ್ಟಾ ಏಲ್ ಜ್ವಾಲಾಮುಖಿಯಿಂದ ಸುಮಾರು 15 ಕಿ.ಮಿ ದೂರದಲ್ಲಿರುವ ಹೈಲಿ ಗುಬ್ಬಿ ಜ್ವಾಲಾಮುಖಿ ಇದೀಗ ಸ್ಫೋಟಗೊಂಡಿರೋದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಜ್ವಾಲಾಮುಖಿ ಸ್ಫೋಟದಿಂದ ಹುಟ್ಟಿರುವ ಬೂದಿಯ ಉಂಡೆಗಳಲ್ಲಿ, ಸಲ್ಫರ್ ಡೈಆಕ್ಸೈಡ್, ಬಂಡೆಗಳ ಸಣ್ಣಸಣ್ಣ ಕಣಗಳು ಸೇರಿವೆ. ಈ ಉಂಡೆಗಳು ಗಾಳಿಯೊಂದಿಗೆ ಚಲಿಸುತ್ತವೆ ಮತ್ತು ಮೇಲ್ಮೈಯಿಂದ 10-15 ಕಿಮೀ ಎತ್ತರದಲ್ಲಿವೆ. ಇನ್ನೂ ಇದು ವಿಮಾನಗಳ ಹಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕಾರಣ, ನಿರ್ದಿಷ್ಟ ಮಾರ್ಗದ ವಿಮಾನಗಳ ಸಂಚಾರ ನಿಲ್ಲಿಸಲಾಗಿದೆ. ಕೆಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದೂ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಸುಮಾರು 10,000 ವರ್ಷಗಳ ನಂತರ ಮೊದಲ ಬಾರಿಗೆ ದೀರ್ಘಕಾಲ ಮೌನವಾಗಿದ್ದ ಜ್ವಾಲಾಮುಖಿ ಸ್ಫೋಟಗೊಂಡ ನಂತರ, ಇಥಿಯೋಪಿಯಾದ ಹೈಲಿ ಗುಬ್ಬಿಯಿಂದ ಬೃಹತ್ ಬೂದಿ ಮೋಡವು ಉತ್ತರ ಭಾರತದ ಕಡೆಗೆ ಚಲಿಸಲು ಪ್ರಾರಂಭಿಸಿದೆ. ಈ ಸ್ಫೋಟವು ಹತ್ತಿರದ ಅಫ್ಡೆರಾ ಗ್ರಾಮವನ್ನು ಧೂಳಿನಿಂದ ಮುಚ್ಚಿತು ಮತ್ತು ಮೋಡವು ಪೂರ್ವಕ್ಕೆ ಚಲಿಸುವ ಮೊದಲು ಕೆಂಪು ಸಮುದ್ರದಾದ್ಯಂತ ದಪ್ಪವಾದ ಗರಿಗಳನ್ನು ಯೆಮೆನ್ ಮತ್ತು ಓಮನ್ ಕಡೆಗೆ ತಳ್ಳಿತು.
ಹೈಲಿ ಗುಬ್ಬಿಯಲ್ಲಿ ಜ್ವಾಲಾಮುಖಿ ಸ್ಫೋಟದಿಂದಾಗಿ ಭಾರತದ ಮೇಲೂ ಭಾರೀ ಪರಿಣಾಮ ಬೀರಲಿದೆ. ಈಗಾಗಲೇ ಕೆಂಪು ಸಮುದ್ರದ ತೀರದ ದೇಶಗಳಾದ ಒಮೆನ್, ಯೆಮನ್ ಸೇರಿದಂತೆ ಹಲವು ದೇಶಗಳಲ್ಲಿ ಜ್ವಾಲಾಮುಖಿಯ ಹೊಗೆ ಮತ್ತು ಬೂದಿ ಆವರಿಸಿಕೊಂಡಿದೆ. ಸೋಮವಾರ ರಾತ್ರಿ ವಾಯುವ್ಯ ಭಾರತದ ಮೇಲೆ ದಟ್ಟ ಹೋಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ನಿರೀಕ್ಷೆಯಂತೆ ಗುಜರಾತ್ ಪ್ರವೇಶಿಸುವ ಜ್ವಾಲಾಮುಖಿಯ ಹೊಗೆ ಕೆಲವು ಗಂಟೆಗಳ ನಂತರ ರಾಜಸ್ಥಾನ, ದೆಹಲಿ ಮತ್ತು ಪಂಜಾಬ್ಗೆ ತಲುಪುವ ಸಾಧ್ಯತೆ ಇದೆ.












Click it and Unblock the Notifications