• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್‌ ಗರ್ಲ್‌ಫ್ರೆಂಡ್‌ಗೆ ಕೊರೊನಾ ಪಾಸಿಟಿವ್

|

ವಾಷಿಂಗ್ಟನ್, ಜನವರಿ 11: ಇತ್ತೀಚೆಗಷ್ಟೇ ಅಮೆಜಾನ್‌ನ ಜೆಫ್‌ ಬೇಜೋಸ್‌ರನ್ನೇ ಹಿಂದಿಕ್ಕಿ ವಿಶ್ವದ ನಂಬರ್ 1 ಶ್ರೀಮಂತನಾಗಿದ್ದ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್‌ ಸಂಸ್ಥಾಪಕ ಎಲೋನ್ ಮಸ್ಕ್‌ ಗರ್ಲ್‌ಫ್ರೆಂಡ್ ಕೋವಿಡ್ -19 ಪಾಸಿಟಿವ್ ಆಗಿರುವುದಾಗಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.

ಕೆನಡಾದ ಗಾಯಕಿ ಮತ್ತು ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ ಮಸ್ಕ್‌ರವರ ಗರ್ಲ್‌ಫ್ರೆಂಡ್ ಗ್ರಿಮ್ಸ್ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಈ ಸುದ್ದಿ ಹಂಚಿಕೊಂಡಿದ್ದಾರೆ.

ಜೆಫ್ ಬೇಜೋಸ್‌ರನ್ನ ಹಿಂದಿಕ್ಕಿದ ಎಲೋನ್ ಮಸ್ಕ್‌: ವಿಶ್ವದ ನಂಬರ್ 1 ಶ್ರೀಮಂತ

"ಅಂತಿಮವಾಗಿ ಕೋವಿಡ್-19 ಬಂದಿದೆ. ಆದರೆ ವಿಲಕ್ಷಣವಾಗಿ ಡೇಕ್ವಿಲ್ ಜ್ವರ ಕನಸನ್ನು ಆನಂದಿಸುತ್ತಿದೆ ... 2021" ಎಂದು ಗ್ರಿಮ್ಸ್ ಬರೆದಿದ್ದಾರೆ. ಆದರೆ ಆಕೆಯ ಮಗು ಮತ್ತು ಎಲೋನ್‌ ಮಸ್ಕ್‌ಗೆ ಸೋಂಕು ತಗುಲಿದೆಯೇ ಎಂಬುದನ್ನು ಬರೆದಿಲ್ಲ.

ಈ ಮೊದಲು ಎಲೋನ್‌ ಮಸ್ಕ್‌ರವರು ತಮ್ಮ ಕೋವಿಡ್-19 ಪರೀಕ್ಷೆಗಳನ್ನು ನಕಲಿ ಎಂದು ಕರೆದಾಗ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಮಸ್ಕ್‌ ಹೇಳಿಕೆಯ ಪ್ರಕಾರ ಒಂದೇ ದಿನದಲ್ಲಿ ಅವರದ್ದು ಕೋವಿಡ್-19 ಪಾಸಿಟಿವ್ ಮತ್ತು ನೆಗೆಟಿವ್ ವರದಿ ಬಂದಿದೆ ಎಂದು ಹೇಳಿದ್ದರು.

ಹೆಚ್ಚು ಶೀತ ಇದ್ದ ಪರಿಣಾಮ ನವೆಂಬರ್ ತಿಂಗಳಿನಲ್ಲಿ ನಾಲ್ಕು ಬಾರಿ ಪರೀಕ್ಷೆಗಳನ್ನು ಮಾಡಿಸಿದ್ದರು. ಆದರೆ ಇದುವರೆಗೂ ಕೋವಿಡ್ ಪಾಸಿಟಿವ್ ವರದಿಯಾಗಿಲ್ಲ.

English summary
Current world's richest man, Elon Musk's girlfriend Grimes says she’s "finally" caught COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X