ಟ್ವಿಟರ್ ಖರೀದಿ ಒಪ್ಪಂದ ಪ್ರಕ್ರಿಯೆ ಮುಂದುವರಿಸಲು ಎಲಾನ್ ಮಸ್ಕ್ ನಿರ್ಧಾರ
ಕ್ಯಾಲಿಫೋರ್ನಿಯಾ, ಅಕ್ಟೋಬರ್ 05: ಅಮೆರಿಕದ ಟೆಸ್ಲಾ ಎಲೆಕ್ಟಿಕ್ ಕಾರ್ ಕಂಪನಿ ಮುಖ್ಯಸ್ಥ ಬಿಲಿಯನೇರ್ ಎಲೋನ್ ಮಸ್ಕ್ ಅವರು ಟ್ವಿಟ್ಟರ್ Inc TWTR.N ಅನ್ನು ಖಾಸಗಿಯಾಗಿ ತೆಗೆದುಕೊಳ್ಳಲು ಚಿಂತನೆ ನಡೆಸಿದ್ದಾರೆ. ಈ ಸಂಬಂಧ ಅವರು ಮೂಲ 54.20 ಡಾಲರ್‌ನಡಿ ಷೇರು ಖರೀದಿಸಲು ನಿರ್ಧರಿಸಿದ್ದಾರೆ ಎಂದು ಬ್ಲೂಮ್‌ಬರ್ಗ್ ಮಾಧ್ಯಮಗಳು ವರದಿ ಮಾಡಿವೆ.
ಎರಡನೇ ಬಾರಿಗೆ ವಹಿವಾಟು ಸ್ಥಗಿತಗೊಳ್ಳುವ ಮೊದಲು ಟ್ವಿಟ್ಟರ್ ಷೇರುಗಳು ಡಾಲರ್ 47.93ಕ್ಕೆ ಏರಿಕೆ ಆಗುವ ಮುಲಕ ಶೇ.12.7% ರಷ್ಟು ಜಿಗಿಯಿತು. ಆದರೆ ಎಲೋನ್ ಮಸ್ಕ್ ಮುಖ್ಯಸ್ಥರಾಗಿರುವ ಎಲೆಕ್ಟ್ರಿಕ್ ವಾಹನ ಕಂಪನಿಯಾದ ಟೆಸ್ಲಾ ಇಂಕ್ ಸುಮಾರು ಶೇ.3ರಷ್ಟಕ್ಕೆ ಕುಸಿದಿದೆ. ಈ ಕುರಿತು ಎಲೋನ್ ಮಸ್ಕ್ ಅವರು ಟ್ವಿಟ್ಟರ್‌ಗೆ ಬರೆದ ಪತ್ರದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ಎಂದು ವರದಿ ಆಗಿವೆ.

ಅಕ್ಟೋಬರ್ 17ರಂದು ಡೆಲವೇರ್ ಕೋರ್ಟ್ ಆಫ್ ಚಾನ್ಸೆರಿಯಲ್ಲಿ ಎಲೋನ್ ಮಸ್ಕ್ ಹಾಗೂ ಟ್ವಿಟರ್ ನಡುವಿನ ಖರೀದಿ ಕುರಿತಾದ ವಿಷಯವು ಮುಂಚೂಣಿಗೆ ಬರಲಿದೆ. ವಿಶ್ವದ ಅಗ್ರಹಣ್ಯ ಸಾಮಾಜಿಕ ಜಾಲತಾಣ ಮಾಧ್ಯಮ ಸಂಸ್ಥೆಯಾದ ಟ್ವಿಟ್ಟರ್‌ನ ಪ್ರತಿ ಷೇರಿಗೆ 54.20ಡಾಲರ್ ಒಪ್ಪಂದವನ್ನು ಮುಕ್ತಾಯಗೊಳಿಸುವಂತೆ ಆದೇಶ ನೀಡಿ ನಿರ್ದೇಶಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಎಲೋನ್ ಮಸ್ಕ್ ಇದೇ ವರ್ಷ ಕಳೆದ ಏಪ್ರಿಲ್‌ನಲ್ಲಿ ಟ್ವಿಟ್ಟರ್ ಅನ್ನು 44 ಬಿಲಿಯನ್ ಡಾಲರ್‌ಗೆ ಖರೀದಿಸಲು ಒಪ್ಪಿಕೊಂಡಿದ್ದರು. ಆದರೆ ವಾರಗಳಲ್ಲಿ ಬೋಟ್ ಖಾತೆಗಳ ಸಂಖ್ಯೆ ಟ್ವಿಟರ್‌ನ ಅಂದಾಜು 5% ಕ್ಕಿಂತ ಕಡಿಮೆ ಬಳಕೆದಾರರಿಗಿಂತ ಹೆಚ್ಚಾಗಿದೆ.

ಒಪ್ಪಂದದಂತೆ ಮಸ್ಕ ಪ್ರತಿ ಷೇರಿಗೆ 54.20ಡಾಲರ್ ಮೊತ್ತಕ್ಕೆ ಟ್ವಿಟ್ಟರ್ ಖರೀದಿಗೆ ಮಾತುಕರೆ ಆಗಿತ್ತು. ಅದರಂತೆ ಟ್ವಿಟ್ಟರ್ ಆಡಳಿತ ಮಂಡಳಿ ಸಹ ಒಪ್ಪಿ ಅಧಿಕೃತವಾಗಿ ತಿಳಿಸಿತ್ತು. 2013ರಿಂದ ಸಾರ್ವಜನಿಕ ಷೇರು ಕಂಪನಿಯಾಗಿ ಬದಲಾಗಿದ್ದ ಟ್ವಿಟ್ಟರ್‌ನಲ್ಲಿ ಈ ಮೊದಲು ಎಲೋನ್ ಮಸ್ಕ ಅವರು ಶೇ. 9.2ರಷ್ಟು ಪಾಲುದಾರಿಕೆಯನ್ನು ಹೊಂದಿದ್ದರು. ನಂತರ ಖರೀದಿಗೆ ಒಪ್ಪಿಗೆ ನೀಡಿದ್ದರಿಂದ ಟ್ವಿಟ್ಟರ್ ಮಸ್ಕ ಆಡಳಿತಕ್ಕೆ ಒಳಪಟ್ಟು ಖಾಸಗಿಯಾಗಿ ಮುಂದುವರಿಯಲಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications