Get Updates
Get notified of breaking news, exclusive insights, and must-see stories!

El Mencho: ಮೆಕ್ಸಿಕೋ ಡ್ರಗ್‌ ದೊರೆ ಎಲ್‌ ಮೆಂಚೋ ಹತ್ಯೆ; ವಿಮಾನ ನಿಲ್ದಾಣಗಳ ಮೇಲೆ ದಾಳಿ, ಭುಗಿಲೆದ್ದ ಹಿಂಸಾಚಾರ

ಮೆಕ್ಸಿಕೋದ ಡ್ರಗ್‌ ದೊರೆ ಎನಿಸಿಕೊಂಡಿದ್ದ ನೆಮೆಸಿಯೋ ಒಸೆಗ್ವೆರಾ ಅಲಿಯಾಸ್‌ ಎಲ್‌ ಮೆಂಚೋ (El Mencho) ಸೈನಿಕ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದಾಗಿ ಮೆಕ್ಸಿಕೋ ಮಾಧ್ಯಮಗಳು ವರದಿ ಮಾಡಿವೆ. ಈ ಸುದ್ದಿಯ ಬೆನ್ನಲ್ಲೇ ಜಾಲಿಸ್ಕೋ ರಾಜ್ಯದ ಹಲವು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಮೆಕ್ಸಿಕೋದ ಅತಿ ಪ್ರಭಾವಿ ಡ್ರಗ್‌ ಕಾರ್ಟೆಲ್‌ ನಾಯಕನಾಗಿ ಗುರುತಿಸಿಕೊಂಡಿದ್ದ ನೆಮೆಸಿಯೋ ರುಬೇನ್‌ ಒಸೆಗ್ವೆರಾ ಸರ್ವಾಂಟೆಸ್‌ ಅಲಿಯಾಸ್‌ 'ಎಲ್‌ ಮೆಂಚೋ' ಮೃತಪಟ್ಟಿದ್ದಾರೆ. ಸೈನಿಕ ಕಾರ್ಯಾಚರಣೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಮೆಕ್ಸಿಕೋ ನಗರಕ್ಕೆ ವಾಯು ಮಾರ್ಗವಾಗಿ ಸಾಗಿಸುವ ವೇಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪಶ್ಚಿಮ ಮೆಕ್ಸಿಕೋದ ಜಲಿಸ್ಕೋ ರಾಜ್ಯದಲ್ಲಿ ಸೈನಿಕ ದಾಳಿಯ ವೇಳೆ ಎಲ್ ಮೆಂಚೋ ಸಂಭವಿಸಿದ್ದರು. ಅವರು ನೇತೃತ್ವ ವಹಿಸಿದ್ದ ಜಲಿಸ್ಕೊ ​​ನ್ಯೂ ಜನರೇಷನ್ ಕಾರ್ಟೆಲ್ (ಸಿಜೆಎನ್‌ಜಿ) ಇತ್ತೀಚೆಗೆ ಮೆಕ್ಸಿಕೋದ ಅತಿ ಬಲಿಷ್ಠ ಸಂಘಟಿತ ಅಪರಾಧ ಜಾಲವಾಗಿ ಬೆಳೆದಿತ್ತು. ಅಮೆರಿಕಾಗೆ ಅಕ್ರಮ ಮದ್ದು ಸಾಗಾಣಿಕೆಯಲ್ಲಿ ಈ ಸಂಘಟನೆ ಪ್ರಮುಖ ಪಾತ್ರವಹಿಸಿತ್ತು.

El Mencho

ಮೆಕ್ಸಿಕೋದ ರಾಜ್ಯಗಳಲ್ಲಿ ಹಿಂಸಾಚಾರ

ಎಲ್‌ ಮೆಂಚೋ ಸಾವಿನ ಸುದ್ದಿ ಹೊರಬಿದ್ದ ತಕ್ಷಣ ಮೆಕ್ಸಿಕೋದ ರಾಜ್ಯಗಳಲ್ಲಿ ಹಿಂಸಾಚಾರ ಉಂಟಾಯಿತು. ಕಾರುಗಳಿಗೆ ಬೆಂಕಿ ಹಚ್ಚಿ, ಹೆದ್ದಾರಿಗಳನ್ನು ಶಸ್ತ್ರಸಜ್ಜಿತವಾಗಿ ಬಂದ್‌ ಮಾಡಿರುವ ಘಟನೆಗಳು ವರದಿಯಾಗಿವೆ. ಪ್ರಮುಖ ಪ್ರವಾಸಿ ನಗರವಾದ ಪೋರ್ಟೊ ವಲ್ಲರ್ಟಾದಲ್ಲಿ ದಟ್ಟ ಹೊಗೆ ಆವರಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ರಾಜ್ಯ ರಾಜಧಾನಿ ಗ್ವಾಡಲಜರಾದಲ್ಲಿ ಸುಟ್ಟ ವಾಹನಗಳು ರಸ್ತೆ ತಡೆದಿರುವುದು ಕಂಡುಬಂದಿದೆ. ಭೀತಿಗೊಳಗಾದ ಜನರು ವಿಮಾನ ನಿಲ್ದಾಣಗಳಲ್ಲಿ ಓಡಾಟ ನಡೆಸುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಜಾಲಿಸ್ಕೋ ಗವರ್ನರ್‌ ಪ್ಯಾಬ್ಲೊ ಲೆಮಸ್ ನವರೊ ಜನರಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಮನೆಗಳಲ್ಲೇ ಇರಲು ಮನವಿ ಮಾಡಿದ್ದಾರೆ.

ಅಮೆರಿಕದ ಒತ್ತಡದ ನಡುವೆಯೇ ಕಾರ್ಯಾಚರಣೆ

ಈ ಸೈನಿಕ ದಾಳಿ ಅಮೆರಿಕದ ಒತ್ತಡದ ನಡುವೆ ನಡೆದಿದೆ ಎಂದು ಹೇಳಲಾಗಿದೆ.ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಆಡಳಿತವು ಮೆಕ್ಸಿಕೋ ಸರ್ಕಾರದ ಮೇಲೆ ಡ್ರಗ್‌ ಸಾಗಾಣಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಿತ್ತು. ಎಲ್‌ ಮೆಂಚೋ ಬಂಧನ ಅಥವಾ ಶಿಕ್ಷೆಗೆ ಸಂಬಂಧಿಸಿದ ಮಾಹಿತಿಗೆ ಅಮೆರಿಕವು 15 ಮಿಲಿಯನ್‌ ಡಾಲರ್‌ ಬಹುಮಾನ ಕೂಡ ಘೋಷಿಸಿತ್ತು. ಸಿಜೆಎನ್‌ಜಿ ಸಂಘಟನೆಯನ್ನು ಅಮೆರಿಕ ಸರ್ಕಾರವು ವಿದೇಶಿ ಭಯೋತ್ಪಾದಕ ಸಂಘಟನೆಯಾಗಿ ಗುರುತಿಸಿತ್ತು. ಎಲ್‌ ಮೆಂಚೋ ನೇತೃತ್ವದಲ್ಲಿ ಕೋಕೇನ್‌, ಮೆಥಾಂಫೆಟಮಿನ್‌ ಹಾಗೂ ಫೆಂಟನಿಲ್‌ ಮುಂತಾದ ಮದ್ದಿನ ದೊಡ್ಡ ಪ್ರಮಾಣದ ಸಾಗಾಣಿಕೆ ನಡೆಯುತ್ತಿತ್ತು ಎಂದು ಆರೋಪಿಸಲಾಗಿತ್ತು. ಎಲ್‌ ಮೆಂಚೋ ಸಾವಿನಿಂದ ಮೆಕ್ಸಿಕೋದಲ್ಲಿನ ಸಂಘಟಿತ ಅಪರಾಧ ಜಗತ್ತಿನಲ್ಲಿ ದೊಡ್ಡ ಸ್ಥಾನ ಖಾಲಿಯಾಗಿದೆ ಎಂದು ಹೇಳಲಾಗುತ್ತಿದೆ.

ಸಿಜೆಎನ್‌ಜಿ ಎಂದರೇನು?

ಎಲ್‌ ಮೆಂಚೋ ಜಾಲಿಸ್ಕೋ ರಾಜ್ಯದ ಹೆಸರನ್ನೇ ಹೊತ್ತ Jalisco New Generation Cartel (ಸಿಜೆಎನ್‌ಜಿ) ಸಂಘಟನೆಯ ನಾಯಕನಾಗಿದ್ದರು. ಈ ಸಂಘಟನೆ 2009ರಲ್ಲಿ ಸ್ಥಾಪನೆಯಾಗಿ, ಕಡಿಮೆ ಅವಧಿಯಲ್ಲೇ ಮೆಕ್ಸಿಕೋದ ಅತ್ಯಂತ ಹಿಂಸಾತ್ಮಕ ಹಾಗೂ ಬಲಿಷ್ಠ ಡ್ರಗ್‌ ಜಾಲವಾಗಿ ಬೆಳೆದಿತು. ಆರಂಭದಲ್ಲಿ ಮೆಕ್ಸಿಕೋದಲ್ಲೇ ಕಾರ್ಯನಿರ್ವಹಿಸುತ್ತಿದ್ದ ಈ ಸಂಘಟನೆ ಬಳಿಕ ಅಮೆರಿಕಾದವರೆಗೆ ವ್ಯಾಪಕವಾಗಿ ಮದ್ದು ಸಾಗಣೆ ನಡೆಸಿತು. ಕೋಕೇನ್‌, ಹೆರೋಯಿನ್‌ ಮತ್ತು ಮೆಥಾಂಫೆಟಮಿನ್‌ ಸಾಗಾಣಿಕೆಯಲ್ಲಿ ಸಿಜೆಎನ್‌ಜಿ ಪ್ರಮುಖ ಸ್ಥಾನಕ್ಕೇರಿತ್ತು. ಎಲ್‌ ಮೆಂಚೋ ನೇತೃತ್ವದಲ್ಲಿ ಪ್ರತಿಸ್ಪರ್ಧಿ ಗುಂಪುಗಳು ಹಾಗೂ ಮೆಕ್ಸಿಕೋ ಕಾನೂನು ರಕ್ಷಕರ ಮೇಲೆ ಹಲವು ಹತ್ಯಾಕಾಂಡಗಳು ನಡೆದಿದ್ದವು ಎಂದು ಅಮೆರಿಕ ಅಧಿಕಾರಿಗಳು ಆರೋಪಿಸಿದ್ದರು. ಸರ್ಕಾರಿ ಅಧಿಕಾರಿಗಳ ಮೇಲೆ ಹತ್ಯಾ ಯತ್ನಗಳಲ್ಲೂ ಈ ಸಂಘಟನೆಯ ಸದಸ್ಯರು ಭಾಗಿಯಾಗಿದ್ದರು ಎನ್ನಲಾಗಿದೆ.

ಎಲ್‌ ಮೆಂಚೋ ಹಿನ್ನೆಲೆ

1966ರಲ್ಲಿ ಮೆಕ್ಸಿಕೋದಲ್ಲಿ ಜನಿಸಿದ್ದ ಎಲ್‌ ಮೆಂಚೋ 1980ರ ದಶಕದಲ್ಲಿ ಅಮೆರಿಕಾದಲ್ಲೂ ಕೆಲವು ವರ್ಷ ವಾಸಿಸಿದ್ದರು. ಮದ್ದು ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ ಬಳಿಕ ಅವರನ್ನು ಮೆಕ್ಸಿಕೋಗೆ ಹಿಂತಿರುಗಿಸಲಾಗಿತ್ತು. 2000ರ ದಶಕದಲ್ಲಿ ಕಾರ್ಟೆಲ್‌ ಪಂಕ್ತಿಗಳಲ್ಲಿ ವೇಗವಾಗಿ ಮೇಲೇರಿದ ಅವರು ಬಳಿಕ ಸಿಜೆಎನ್‌ಜಿಯ ಸಂಪೂರ್ಣ ಹಿಡಿತ ಪಡೆದುಕೊಂಡರು. ಅಮೆರಿಕದ ಫೆಡರಲ್‌ ನ್ಯಾಯಾಲಯಗಳು ಅವರ ವಿರುದ್ಧ ಹಲವು ಬಾರಿ ಆರೋಪಪಟ್ಟಿ ಸಲ್ಲಿಸಿದ್ದವು. ಅಮೆರಿಕಾಗೆ ಅಕ್ರಮವಾಗಿ ಮೆಥಾಂಫೆಟಮಿನ್‌, ಕೋಕೇನ್‌ ಹಾಗೂ ಫೆಂಟನಿಲ್‌ ಸಾಗಣೆ ಮಾಡಲು ಸಂಚು ರೂಪಿಸಿದ್ದ ಆರೋಪ, ಹಾಗೂ ಡ್ರಗ್‌ ಅಪರಾಧಗಳ ಸಂದರ್ಭದಲ್ಲಿ ಗನ್‌ ಬಳಕೆ ಆರೋಪವೂ ಸೇರಿದ್ದವು.
ವಿಮಾನ ನಿಲ್ದಾಣಗಳ ಮೇಲೆ ದಾಳಿ ಯಾಕೆ?

ಎಲ್‌ ಮೆಂಚೋ ಹತ್ಯೆಯ ಸುದ್ದಿ ಹೊರಬಿದ್ದ ಕೆಲವೇ ಹೊತ್ತಿನಲ್ಲಿ ಸಿಜೆಎನ್‌ಜಿ ಸಂಘಟನೆಯ ಸದಸ್ಯರು ತಮ್ಮ ನಾಯಕನ ಸಾವಿಗೆ ಪ್ರತೀಕಾರವಾಗಿ ಜಾಲಿಸ್ಕೋ ರಾಜ್ಯದ ವಿವಿಧ ಭಾಗಗಳಲ್ಲಿ ದಾಳಿ ನಡೆಸಿದ್ದಾರೆ. ವಿಮಾನ ನಿಲ್ದಾಣಗಳು, ಹೆದ್ದಾರಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗೊಂದಲ ಸೃಷ್ಟಿಸುವ ಮೂಲಕ ಭದ್ರತಾ ಪಡೆಗಳ ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದಾರೆ. ಎಲ್‌ ಮೆಂಚೋ ಸಾವು ಮೆಕ್ಸಿಕೋದ ಡ್ರಗ್‌ ಯುದ್ಧದ ಇತಿಹಾಸದಲ್ಲಿ ಮತ್ತೊಂದು ಪ್ರಮುಖ ಘಟ್ಟವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+