ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್-ಇರಾಕ್ ಗಡಿಯಲ್ಲಿ ಭಾರಿ ಭೂಕಂಪ: 400ಕ್ಕೂ ಹೆಚ್ಚು ಜನರಿಗೆ ಗಾಯ

|
Google Oneindia Kannada News

ಬಾಗ್ದಾದ್, ನವೆಂಬರ್ 26: ಇರಾನ್ ಮತ್ತು ಇರಾಕ್ ಗಡಿ ಭಾಗದಲ್ಲಿ ಭಾನುವಾರ ರಾತ್ರಿ ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, 400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಭೂಮಿ ಕಂಪಿಸಿದ ತೀವ್ರತೆಗೆ ಅನೇಕ ಮನೆಗಳು, ಕಟ್ಟಡಗಳು ಕುಸಿದಿದ್ದು, ಅನಾಹುತದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.

ಪಶ್ಚಿಮ ಇರಾನ್‌ನ ಇಲಾಮ್ ನಗರದ 114 ಕಿ.ಮೀ. ದೂರದಲ್ಲಿರುವ ಕಡಿಮೆ ಜನಸಂಖ್ಯೆ ಇರುವ ಪ್ರದೇಶದಲ್ಲಿ ಸುಮಾರು 65 ಕಿಮೀ ಆಳದಲ್ಲಿ ಭೂಕಂಪನದ ಮೂಲ ಪತ್ತೆಯಾಗಿದೆ. ಅದರ ಪರಿಣಾಮ ಇರಾಕ್‌ನ ಭಾಗದಲ್ಲಿಯೂ ಭಾರಿ ಪ್ರಮಾಣದ ಕಂಪನ ಉಂಟಾಗಿದೆ.

earthquake of 6.3 magnitude in iran iraq border hundreds injured

ಸರ್ಪೋಲ್ ಇ ಜಹಾಬ್ ಮತ್ತು ಖಸರ್ ಇ ಶ್ರಿನ್ ಗ್ರಾಮಗಳಲ್ಲಿನ ಅನೇಕ ಮನೆಗಳು, ಕಟ್ಟಡಗಳಿಗೆ ತೀವ್ರ ಹಾನಿಯಾಗಿದೆ ಎಂದು ಅಮೆರಿಕದ ಭೂಕಂಪ ಶಾಸ್ತ್ರ ಸಂಸ್ಥೆ ತಿಳಿಸಿದೆ.

ಭೂಮಿ ನಡುಗಿದ್ದರ ಅನುಭವವಾದ ಕೂಡಲೇ ಭಯಭೀತರಾದ ಜನರು ಮನೆಗಳಿಂದ ಹೊರಬಂದು ರಸ್ತೆಯಲ್ಲಿ ನಿಂತುಕೊಂಡರು.

ಕಟ್ಟಡಗಳ ಕುಸಿತದಿಂದ ಹೆಚ್ಚು ಜನರಿಗೆ ಗಾಯಗಳಾಗಿಲ್ಲ. ಆದರೆ, ಭೂಕಂಪನದ ಭಯದಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅನೇಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಅರೇಬಿಯನ್ ಮತ್ತು ಯುರೋಪಿನ್ ದೇಶಗಳ ನಡುವೆ ಇರುವ ಇರಾನ್ ಭೂಕಂಪನದ ಪ್ರಮುಖ ಕೇಂದ್ರಬಿಂದುವಾಗಿದೆ.

ಭೂಕಂಪದ ಪರಿಣಾಮ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದ್ದು, ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಆದರೆ, ಪ್ರಮುಖ ರಸ್ತೆಗಳು ಸುರಕ್ಷಿತವಾಗಿವೆ.

ಕಳೆದ ವರ್ಷದ ನವೆಂಬರ್‌ನಲ್ಲಿಯೂ ಇಲ್ಲಿ ಭೂಕಂಪ ಸಂಭವಿಸಿತ್ತು. ಕೆರ್ಮನ್ಷಾಹ್ ಪ್ರಾಂತ್ಯದಲ್ಲಿ ಸಂಭವಿಸಿದ್ದ ಭೂಕಂಪ 600 ಜನರನ್ನು ಬಲಿತೆಗೆದುಕೊಂಡಿತ್ತು. ನೂರಾರು ಮಂದಿ ಗಾಯಗೊಂಡಿದ್ದರು.

English summary
A 6.3 magnitude earthquake on the Iraq-Iran border caused Hundreds of people injuries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X