ಇಂಡೋನೇಶ್ಯಾದ ಸುಲಾವೇಶಿಯಲ್ಲಿ 7.0 ತೀವ್ರತೆಯ ಭೂಕಂಪ
ಜಕಾರ್ತಾ, ಏಪ್ರಿಲ್ 12: ಇಂಡೊನೇಷ್ಯಾದ ಸುಲಾವೆಸಿ ದ್ವೀಪದಲ್ಲಿ ಪ್ರಬಲ ಭೂಕಂಪವೊಂದು ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 7.0 ತೀವ್ರತೆ ದಾಖಲಾಗಿದೆ ಎಂದು ಯುನೈಟೆಡ್ ನೇಶನ್ಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ. ಭೂಕಂಪದ ನಂತರ ಸುನಾಮಿ ಮುನ್ನೆಚ್ಚರಿಕೆಯನ್ನೂ ನೀಡಲಾಗಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜನರಲ್ಲಿ ಮನವಿ ಮಾಡಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ದ್ವೀಪದ ದಕ್ಷಿಣ ಭಾಗದ ಗೊರಾಂತಾಲೊ ಎಂಬಲ್ಲಿ 43 ಕಿ.ಮೀ. ಆಳದಲ್ಲಿ ಭೂಮಿ ಕಂಪಿಸಿದ್ದು, ಭೂಕಂಪ ಸುಮಾರು 280 ಕಿ.ಮೀ.ವ್ಯಾಪಿಸಿತ್ತು ಎಂದು ವರದಿಗಳು ತಿಳಿಸಿವೆ.
ಭೂಕಂಪದಿಂದ ಯಾವುದೇ ಸಾವು, ನೋವು, ಆಸ್ತಿ-ಪಾಸ್ತಿ ಹಾನಿಯಾದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಪ್ರದೇಶದಲ್ಲಿ ಸುಮಾರು 260 ಮಿಲಿಯನ್ ಜನರು ವಾಸಿಸುತ್ತಿದ್ದು, ಈ ದ್ವೀಪ ಅತೀ ಹೆಚ್ಚು ಭೂಕಂಪದ ಅಪಾಯವನ್ನು ಎದುರಿಸುತ್ತಿದೆ. ಇಲ್ಲಿ ಪದೇ ಪದೇ ಸುನಾಮಿಯೂ ಸಂಭವಿಸುತ್ತಲೇ ಇರುತ್ತದೆ.

ಇಂಡೋನೇಷ್ಯಾದಲ್ಲಿ 2019 ರ ಸೆಪ್ಟೆಂಬರ್ ನಲ್ಲಿ ಸಂಭವಿಸಿದ 7.4 ತೀವ್ರತೆಯ ಭೂಕಂಪದಲ್ಲಿ ಸುಮಾರು 800 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು. ಇದು ಈ ಶತಮಾನದ ಅತ್ಯಂತ ಭೀಕರ ದುರಂತದಲ್ಲೊಂದು ಎನ್ನಿಸಿಕೊಂಡಿತ್ತು.












Click it and Unblock the Notifications