ಬಾರ್ಸಿಲೋನಾ: 2ನೇ ಬಾರಿ ದಾಳಿಗೆ ಯತ್ನಿಸಿದ ನಾಲ್ವರು ಉಗ್ರರು ಉಡೀಸ್

Posted By:
Subscribe to Oneindia Kannada

ಮ್ಯಾಡ್ರಿಡ್, ಆಗಸ್ಟ್ 18 : ಸ್ಪೇನ್ ನ ಬಾರ್ಸಿಲೋನಾ ನಗರದ ರಾಂಬ್ಲಾಸ್ ನಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ 2ನೇ ಬಾರಿಗೆ ಕ್ಯಾಂಬ್ರಿಲ್ಸ್ ನಲ್ಲಿ ದಾಳಿಗೆ ಯತ್ನಿಸಿದ ನಾಲ್ವರು ಉಗ್ರರನ್ನು ಸ್ಪೇನ್ ಭದ್ರತಾ ಪಡೆ ಹೊಡೆದುರಿಳಿಸಿದೆ.

ಬಾರ್ಸಿಲೋನಾದಲ್ಲಿ ಉಗ್ರರ ಅಟ್ಟಹಾಸ: 13 ಸಾವು

ಗುರುವಾರ ಸ್ಪೇನ್ ನ ರಾಜಧಾನಿಯಾದ ಬಾರ್ಸಿಲೋನಾದ ಮಧ್ಯ ಭಾಗದಲ್ಲಿರುವ ರಾಂಬ್ಲಾಸ್ ನಲ್ಲಿ ನೆರೆದಿದ್ದ ಜನ ಸಮೂಹದ ಮೇಲೆ ಉಗ್ರರು ಏಕಾಏಕಿ ಟ್ರಕ್ ನುಗ್ಗಿಸಿ 13 ಜನರನ್ನು ಬಲಿ ತೆಗೆದುಕೊಂಡಿದ್ದರು. ಇದಾದ ಬಳಿಕ ಇದೇ ಉಗ್ರರು ಕ್ಯಾಂಬ್ರಿಲ್ಸ್ ನಲ್ಲಿ ದಾಳಿ ನಡೆಸಲು ಯತ್ನಿಸಿದ್ದು, 6 ನಾಗರಿಕರು ಓರ್ವ ಪೊಲೀಸ್ ಗಾಯಗೊಂಡಿದ್ದಾರೆ.

Earlier four terrorists were shot dead in connection with the Barcelona attack

ಕ್ಯಾಂಬ್ರಿಲ್ಸ್ ನಲ್ಲಿ ದಾಳಿ ವೇಳೆ ಇಲ್ಲಿನ ಭದ್ರತಾ ಪಡೆ ನಾಲ್ವರು ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ. ಇನ್ನುಳಿದ ಉಗ್ರರು ಬಾರ್ಸಿಲೋನಾ ನಗರ ಬಿಟ್ಟು ಪರಾರಿಯಾಗದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಹಾಕಲಾಗಿದ್ದು, ಸೇನಾ ಕಾರ್ಯಾಚರಣೆ ಆರಂಭಿಸಲಾಗಿದೆ.

ಈ ದಾಳಿ ಜಿಹಾದಿಗಳದ್ದಾಗಿದೆ ಎಂದು ಸ್ಪೇನ್ ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Six civilians and one police personnel has been injured in a second attack in Spain, the Catalan government has said. The second attack at Cambrils hours after Las Ramlas was struck was however foiled.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ