• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದುಬೈಗೆ ತೆರಳುತ್ತಿದ್ದ ವಿಮಾನ ಅಪಹರಿಸಲು ಬಾಂಗ್ಲಾದೇಶ್ ನಲ್ಲಿ ಯತ್ನ

|

ಢಾಕಾ (ಬಾಂಗ್ಲಾದೇಶ್), ಫೆಬ್ರವರಿ 24: ಬಾಂಗ್ಲಾದೇಶದಿಂದ ದುಬೈಗೆ ಹೊರಟಿದ್ದ ವಿಮಾನವನ್ನು ವ್ಯಕ್ತಿಯೊಬ್ಬ ಹೈಜಾಕ್ ಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದೆ. ಬಾಂಗ್ಲಾದೇಶ್ ಬಿಮಲ್ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ರಾಷ್ಟ್ರೀಯ ನಾಗರಿಕ ವಿಮಾನಯಾನ ಮುಖ್ಯಸ್ಥ ಮಾಹಿತಿ ನೀಡಿದ್ದಾರೆ.

ಕಂದಹಾರ್ ಮಾದರಿ ಹೈಜಾಕ್ ಬೆದರಿಕೆ, ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್

ಎಲ್ಲ 150 ಪ್ಲಸ್ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಏರ್ ವೈಸ್ ಮಾರ್ಷಲ್ ನಯೀಮ್ ಹಸನ್ ಹೇಳಿದ್ದಾರೆ. BG147 ವಿಮಾನವು ಬಾಂಗ್ಲಾದೇಶ್ ನ ರಾಜಧಾನಿ ಢಾಕಾದಿಂದ ಟೇಕ್ ಆಫ್ ಆಗಿದೆ. ಹೈಜಾಕ್ ಗೆ ಯತ್ನಿಸಿದ ವ್ಯಕ್ತಿಯ ಉದ್ದೇಶ ಏನು ಎಂಬುದು ಸ್ಪಷ್ಟವಾಗಿಲ್ಲ ಎಂದು ಅವರು ಹೇಳಿದ್ದಾರೆ.

ನಮಗನಿಸುತ್ತದೆ: ಅತನಿಗೆ ಮಾನಸಿಕ ಸ್ಥಿಮಿತ ಇರಲಿಲ್ಲ. ತನ್ನ ಬಳಿ ಬಾಂಬ್ ಇದೆ ಎಂದು ಆತ ಹೇಳುತ್ತಿದ್ದ. ಆದರೆ ನಮಗೆ ಆ ಬಗ್ಗೆ ಖಾತ್ರಿ ಇಲ್ಲ ಎಂದು ಹಸನ್ ಹೇಳಿದ್ದಾರೆ. ಬಾಂಗ್ಲಾದೇಶ್ ನ ನೈರುತ್ಯ ಭಾಗದ ಚಿತ್ತಗಾಂಗ್ ನಲ್ಲಿ ವಿಮಾಣವನ್ನು ಇಳಿಸಲಾಗಿದೆ. ಅಲ್ಲಿ ಪ್ರಯಾಣಿಕರನ್ನು ತೆರವು ಮಾಡಲಾಗಿದೆ.

English summary
All passengers on board a Dubai-bound Bangladesh Biman plane are safe after a man apparently attempted to hijack the aircraft on Sunday, the national civil aviation chief said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X